• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಫೆಬ್ರವರಿಯಲ್ಲೇ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೊರೋನಾ ಇಷ್ಟು ಹರಡುತ್ತಿರಲಿಲ್ಲ: ಸಿದ್ದರಾಮಯ್ಯ

ಫೆಬ್ರವರಿಯಲ್ಲೇ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೊರೋನಾ ಇಷ್ಟು ಹರಡುತ್ತಿರಲಿಲ್ಲ: ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಫೆಬ್ರವರಿಯಲ್ಲೇ ವಿದೇಶಗಳಿಂದ ವಿಮಾನಗಳನ್ನ ಬರದಂತೆ ತಡೆಬೇಕಿತ್ತು. ತಬ್ಲಿಘಿ ಸಮಾವೇಶ ಆಯೋಜನೆಗೆ ಅವಕಾಶ ಕೊಡಬಾರದಿತ್ತು. ಮಾರ್ಚ್ 24ಕ್ಕೆ ಮುಂಚೆಯೇ ಲಾಕ್​ಡೌನ್ ಮಾಡಬೇಕಿತ್ತು. ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ಇವತ್ತು ಕೊರೋನಾ ವ್ಯಾಪಕವಾಗಿ ಹರಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ(ಸೆ. 22): ದೇಶದಲ್ಲಿ ಕೊರೋನಾ ಬಹಳ ವ್ಯಾಪಕವಾಗಿ ಹರಡಿಹೋಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಇಂದು ವಿಧಾನಸಭೆಯಲ್ಲಿ ನೆರೆ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ನಿಲುವಳಿ ಮಂಡನೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ಫೆಬ್ರುವರಿ ತಿಂಗಳಲ್ಲೇ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೋವಿಡ್-19 ರೋಗ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಎಲ್ಲರೂ ಎಚ್ಚರ ವಹಿಸಬೇಕೆಂದು ವಿಶ್ವಸಂಸ್ಥೆ ಹೇಳಿತ್ತು. ಆದರೆ, ಕೇಂದ್ರ ಆರೋಗ್ಯ ಸಚಿವರು ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದರು. ದೇಶದ ಜನರಿಗೆ ಅವರು ತಪ್ಪು ಮಾಹಿತಿ ಕೊಟ್ಟಿದ್ದರು. ಇದರ ಪರಿಣಾಮವಾಗಿ ಈಗ ಕೊರೋನಾ ಇಡೀ ದೇಶ ಹಾಗೂ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ ಎಂದು ವಿಪಕ್ಷ ನಾಯಕ ಆತಂಕ ವ್ಯಕ್ತಪಡಿಸಿದರು.


ಫೆಬ್ರವರಿ ತಿಂಗಳಲ್ಲೇ ವಿದೇಶಗಳಿಂದ ವಿಮಾನಗಳು ಬರದಂತೆ ತಡೆಯಬೇಕಿತ್ತು. ಅದನ್ನು ಮಾಡದೇ ಈಗ ಕೊರೋನಾ ಉಲ್ಬಣಗೊಂಡಂತಾಗಿದೆ. ತಬ್ಲಿಘಿ ಸಮಾವೇಶ ನಡೆಸಲು ಅನುಮತಿ ಕೊಟ್ಟಿದ್ದು ಕೇಂದ್ರ ಸರ್ಕಾರವೇ. ಲಕ್ಷಾಂತರ ಜನರು ಸೇರಿ ಸಮಾವೇಶ ಮಾಡಿದರೆ ಏನಾಗುತ್ತದೆ? ಇದಕ್ಕೆ ಯಾರು ಜವಾಬ್ದಾರರು? ಕೇಂದ್ರ ಸರ್ಕಾರವೇ ಇದಕ್ಕೆ ಹೊಣೆ. ಮಾರ್ಚ್ 24ಕ್ಕಿಂತ ಮುಂಚೆಯೇ ಲಾಕ್​ಡೌನ್ ಮಾಡಬೇಕಿತ್ತು. ತಬ್ಲಿಘಿ ಸಮಾವೇಶಕ್ಕೆ ಅವಕಾಶ ಕೊಡಬಾರದಿತ್ತು. ಮಾಸ್ಕ್, ವೆಂಟಿಲೇಟರ್, ಸ್ಯಾನಿಟೈಸರ್ ಎಲ್ಲವನ್ನೂ ಸಿದ್ಧವಾಗಿ ಇಟ್ಟುಕೊಳ್ಳಬೇಕಿತ್ತು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.


ಕೇಂದ್ರ ಸರಕಾರ ಸರಿಯಾದ ಕ್ರಮ ಕೈಗೊಳ್ಳದ ಪರಿಣಾಮ ಇವತ್ತು ನಿತ್ಯವೂ 90 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ವೆಂಟಿಲೇಟರ್ ಇಲ್ಲದೆ ಅದೆಷ್ಟೋ ಜನರು ಸತ್ತಿದ್ದಾರೆ ಎಂದವರು ಹೇಳಿದರು.


ಇದನ್ನೂ ಓದಿ: Bangalore Blast: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ; ಪ್ರಮುಖ ಆರೋಪಿ ಬಂಧನ


ವಿದೇಶಗಳಿಂದ ಬಂದವರ ತಪಾಸಣೆ ಮಾಡಲಿಲ್ಲ ಎಂಬ ಸಿದ್ದರಾಮಯ್ಯ ಟೀಕೆಗೆ ಕಾಂಗ್ರೆಸ್ ಶಾಸಕ ಕೆ.ಜೆ. ಜಾರ್ಜ್ ಧ್ವನಿಗೂಡಿಸಿದರು. ಕೆಲ ದೇಶಗಳಿಂದ ಬಂದವರನ್ನು ಮಾತ್ರ ತಪಾಸಣೆ ಮಾಡಲಾಯಿತು. ಎಲ್ಲಾ ದೇಶಗಳಿಂದ ಬಂದವರೆಲ್ಲರಿಗೂ ತಪಾಸಣೆ ಮಾಡಿದಿದ್ದರೆ ಕೊರೋನಾ ಇಷ್ಟೊಂದು ಹೆಚ್ಚಳವಾಗುತ್ತಿರಲಿಲ್ಲ ಎಂದು ಜಾರ್ಜ್ ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೂಡ ಇದನ್ನ ಒಪ್ಪಿಕೊಂಡರು.


ಇನ್ನು, ಮಾತು ಮುಂದುವರಿಸಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡರು. ಕೊರೋನಾ ಸಾವಿನ ವಿಚಾರದಲ್ಲಿ ರಾಜ್ಯ ಏಳನೇ ಸ್ಥಾನದಲ್ಲಿದೆ. ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸರ್ವ ಪಕ್ಷ ಸಭೆ ನಡೆಸಬೇಕೆಂದು ಅನೇಕ ಬಾರಿ ಪತ್ರ ಬರೆದ ಬಳಿಕ ಒಲ್ಲದ ಮನಸ್ಸಿಂದ ಸಭೆ ನಡೆಸಿದರು. ಸರ್ಕಾರಕ್ಕೆ ಸಲಹೆ ನೀಡಿ ನಾನು ಬರೆದ 20 ಪತ್ರಗಳಿಗೂ ಯಾವುದೇ ಉತ್ತರ ಬಂದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಸರ್ಕಾರ ಎಂದು ಇದನ್ನು ಕರೆಯಬೇಕಾ? ಮಾರ್ಚ್​ನಿಂದ ಜುಲೈವರೆಗೂ ನಾವು ಸರ್ಕಾರಕ್ಕೆ ಸಹಕಾರ ಕೊಡುತ್ತಾ ಬಂದೆವು. ಆದರೂ ನಮ್ಮ ಮಾತನ್ನ ಸರ್ಕಾರ ನಿರ್ಲಕ್ಷ್ಯ ಮಾಡಿಕೊಂಡು ಬಂತು ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.


ಇದನ್ನೂ ಓದಿ: ರೈತ ಸೇನಾ ಹೋರಾಟಕ್ಕೆ ಸಂದ ಜಯ: ಧಾರವಾಡದಲ್ಲಿ ನೀರಾವರಿ ನಿಗಮ ಮುಂದುವರಿಕೆಗೆ ಆದೇಶ


ರಾಜ್ಯ ಸರ್ಕಾರದ ಉಪಕರಣಗಳ ಖರೀದಿ ಅವ್ಯವಹಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ತಮ್ಮ ಆರೋಪಕ್ಕೆ ಸರ್ಕಾರದಿಂದ ಸಮರ್ಪಕ ಉತ್ತರ ಬರಲಿಲ್ಲ ಎಂದರು.


‘ವೈದ್ಯಕೀಯ ಉಪಕರಣ ಖರೀದಿಯಲ್ಲಿ 4 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ನಾವು ಆರೋಪಿಸಿದೆವು. ಸಚಿವರು ಸುದ್ದಿಗೋಷ್ಠಿ ನಡೆಸಿ ಕೇವಲ 325 ಕೋಟಿ ಖರ್ಚಾಗಿದೆ ಎಂದರು. ಅದಾದ ಮೇಲೆ ನಾವು 14 ದಾಖಲೆಗಳನ್ನ ಬಿಡುಗಡೆ ಮಾಡಿದೆವು. ಲೆಕ್ಕ ಕೊಡಿ ಎಂಬ ಅಭಿಯಾನ ಶುರು ಮಾಡಿದೆವು. ಎಲ್ಲಾ ಇಲಾಖೆಗಳಿಗೂ ಪತ್ರ ಬರೆದೆವು. ಆದರೆ, ಆರೋಗ್ಯ ಇಲಾಖೆಯಿಂದ ಮಾತ್ರ ಉತ್ತರ ಬಂತು. ಅದೂ ಅಸಮರ್ಪಕ ಉತ್ತರ ಬಂತು. ಉಳಿದ ಯಅವ ಇಲಾಖೆಗಳೂ ಮಾಹಿತಿ ನೀಡಲಿಲ್ಲ. ಕೊನೆಗೆ ನಾವೇ ಕೆಲವು ಮೂಲಗಳಿಂದ ಮಾಹಿತಿ ಪಡೆದೆವು. ಸಿದ್ದರಾಮಯ್ಯ ಲೆಕ್ಕ ಕೇಳಿದರೆ ಯಾಕೆ ಕೊಡಬೇಕು ಅಂತ ಸರ್ಕಾರದ ಕೆಲ ಪ್ರತಿನಿಧಿಗಳು ಹೇಳಿದರು’ ಎಂದು ಸಿದ್ದರಾಮಯ್ಯ ಟೀಕಿಸಿದರು.

Published by:Vijayasarthy SN
First published: