ಗಾಂಧೀಜಿ ಕೊಂದವರ ಪಕ್ಷ ಬಿಜೆಪಿ; ಅವರೆಲ್ಲಾ ಗೋಡ್ಸೆ ವಂಶಸ್ಥರು: ಸಿದ್ದರಾಮಯ್ಯ

ಬಿಜೆಪಿ ಪಕ್ಷ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ಅಭ್ಯರ್ಥಿಗೆ ಟಿಕೆಟ್​ ನೀಡಿದ್ದಾರಾ. ಈಶ್ವರಪ್ಪ ಹಿಂದುಳಿದ ನಾಯಕರಲ್ವಾ? ಕುರುಬ ಸಮಾಜದ ನಾಯಕರಲ್ಲವಾ ಅವರು?  ಹಿಂದುಳಿದವರಿಗೆ ಟಿಕೆಟ್ ಕೊಡಿಸಲು ಅವರಿಂದ ಆಗಿದೆಯಾ? ಈಶ್ವರಪ್ಪ ಅವರಿಗೆ ಸ್ವಾಭಿಮಾನವಿದ್ದರೆ ಪಕ್ಷ ಬಿಟ್ಟು ಹೊರಬರಬೇಕು ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

Seema.R | news18
Updated:April 4, 2019, 5:54 PM IST
ಗಾಂಧೀಜಿ ಕೊಂದವರ ಪಕ್ಷ ಬಿಜೆಪಿ; ಅವರೆಲ್ಲಾ ಗೋಡ್ಸೆ ವಂಶಸ್ಥರು: ಸಿದ್ದರಾಮಯ್ಯ
ಸಿದ್ದರಾಮಯ್ಯ
  • News18
  • Last Updated: April 4, 2019, 5:54 PM IST
  • Share this:
ಕೊಪ್ಪಳ(ಏ. 04): ಬಿಜೆಪಿಯವರೆಲ್ಲಾ ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು...  ಬಿಜೆಪಿಯವರ ಮೂಲ ಆರ್​ಎಸ್​ಎಸ್..​. ಹಿಂದುಳಿದ ವರ್ಗದ ಯಾರಿಗಾದರೂ ಬಿಜೆಪಿಯವರು ಸೀಟು ಕೊಟ್ಟಿದ್ದಾರಾ..? ಬಿಜೆಪಿಯಲ್ಲಿ ಎಲ್ಲಿದೆ ಸಾಮಾಜಿಕ ನ್ಯಾಯ? ಎಂದು ಬಿಜೆಪಿ ವಿರುದ್ಧ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ನಡೆಸಿದ ಪ್ರಚಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕೊಲೆಗಡುಕ ಎನ್ನುವ ಈಶ್ವರಪ್ಪ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಗಾಂಧಿಯನ್ನು ಕೊಂದವರ ಬಾಯಲ್ಲಿ ಈ ರೀತಿ ಮಾತುಗಳು ಬರುತ್ತವೆ. ಆತ ಒಬ್ಬ ಪೆದ್ದ, ಮೆದುಳಿಗೂ ನಾಲಿಗೆ ಸಂಪರ್ಕವಿಲ್ಲದೇ ಮಾತನಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿ ಪಕ್ಷ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ಅಭ್ಯರ್ಥಿಗೆ ಟಿಕೆಟ್​ ನೀಡಿದ್ದಾರಾ. ಈಶ್ವರಪ್ಪ ಹಿಂದುಳಿದ ನಾಯಕರಲ್ವಾ? ಕುರುಬ ಸಮಾಜದ ನಾಯಕರಲ್ಲವಾ ಅವರು?  ಹಿಂದುಳಿದವರಿಗೆ ಟಿಕೆಟ್ ಕೊಡಿಸಲು ಅವರಿಂದ ಆಗಿದೆಯಾ? ಈಶ್ವರಪ್ಪ ಅವರಿಗೆ ಸ್ವಾಭಿಮಾನವಿದ್ದರೆ ಪಕ್ಷ ಬಿಟ್ಟು ಹೊರಬರಬೇಕು ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಈಶ್ವರಪ್ಪ ಪಕ್ಷ ತೊರೆದು ಬಂದರೆ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಯಾಕೆ ಬೇಕು ಅವರು? ಆರ್​ಎಸ್​ಎಸ್​ನವರನ್ನೆಲ್ಲಾ ಸೇರಿಸಿಕೊಳ್ಳಲ್ಲ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿಗೆ ತಪ್ಪು ಕಲ್ಪನೆಗಳಿವೆ. ಎಲ್ಲ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಾಂಗ್ರೆಸ್‌ನ ನೀತಿ. ಮತ ಬ್ಯಾಂಕ್ ರಾಜಕಾರಣ ಮಾಡುವವರು ಬಿಜೆಪಿಯವರು ಎಂದರು.

ಇದನ್ನು ಓದಿ: ದೇವೇಗೌಡರ ಮನೆಯಲ್ಲಿ ಮಾತ್ರ ಕುಟುಂಬ ರಾಜಕಾರಣವಿಲ್ಲ; ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಮಂಡ್ಯದಲ್ಲಿ ಸುಮಲತಾ ಪರ ಕಾಂಗ್ರೆಸ್​ ಬಾವುಟ ಬಳಕೆ ಕುರಿತು ಟೀಕಿಸಿದ ಅವರು, ಯಾರೋ ಹುಡುಗರ ಬಾವುಟ ಹಿಡಿದುಕೊಳ್ಳುತ್ತಿದ್ದಾರೆ.  ಬಿಜೆಪಿಯವರೇ ನಮ್ಮ ಪಕ್ಷದ ಬಾವುಟ ಹಿಡಿದುಕೊಂಡು ನಮಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ಇದು ಅವರ ಚುನಾವಣಾ ಕುತಂತ್ರ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ನಾನು ಕಾಂಗ್ರೆಸ್​ ತೊರೆಯಲು ಕಾರಣವನ್ನು ಸಿದ್ದರಾಮಯ್ಯ ಅವರಿಗೆ ಕೇಳಿ ಎಂದ ವಿಶ್ವನಾಥ್​ ಮಾತಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಬಿಟ್ಟೋಗಿ ಅಂತ ನಾನು‌ ಯಾರಿಗೂ ಹೇಳಲ್ಲ. ಅವರಾಗಿಯೇ ಹೋದರೆ ಏನು ಮಾಡೋಕೇ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.

First published:April 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading