JC Madhu Swamy ಮಗನ ಮದುವೆಯಲ್ಲಿ ಮುಖಾಮುಖಿಯಾದ ಸಿಎಂ- ದೇವೇಗೌಡರು; ಕರೆಯದಿದ್ದರೂ ಬಂದಿದ್ದೇನೆ ಎಂದ ಸಿದ್ದರಾಮಯ್ಯ

ಮಾಧುಸ್ವಾಮಿ ಈಗ ಬಿಜೆಪಿಯಲ್ಲಿ ಇದ್ದರೂ ಮೊದಲು ನಮ್ಮ ಜೊತೆ ಇದ್ದವರು. ಮಾಧುಸ್ವಾಮಿ ನನಗೆ ರಾಜಕೀಯವಾಗಿ ಬಹಳ ಆಪ್ತರು. ರಾಜಕೀಯ ಬೇರೆ ಸ್ನೇಹ ಬೇರೆ. ಮದುವೆಗೆ ಬಂದು ಅವರ ಮಕ್ಕಳಿಗೆ ಶುಭಕೋರಿದ್ದೇನೆ

ಮಧುಸ್ವಾಮಿ ಮಗನ ಮದುವೆ ಚಿತ್ರಣ (ಫೋಟೋ: ಬಿಸಿಪಾಟೀಲ್​ ಫೇಸ್​ಬುಕ್​ ಪುಟ)

ಮಧುಸ್ವಾಮಿ ಮಗನ ಮದುವೆ ಚಿತ್ರಣ (ಫೋಟೋ: ಬಿಸಿಪಾಟೀಲ್​ ಫೇಸ್​ಬುಕ್​ ಪುಟ)

  • Share this:
    ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ಅವರ ಮಗನ ಮದುವೆಯಲ್ಲಿ ಪ್ರಮುಖ ಮೂರು ಪಕ್ಷಗಳ ನಾಯಕರ ಹಾಜರಾಗಿ ಗಮನಸೆಳೆದಿದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai), ಜೆಡಿಎಸ್​ ವರಿಷ್ಠ ದೇವೇಗೌಡ (Deve Gowda), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಅರಗ ಜ್ಞಾನೇಂದ್ರ, ಬಿಸಿ ಪಾಟೀಲ್, ಅಶ್ವಥ್ ನಾರಾಯಣ,ಬೈರತಿ ಬಸವರಾಜ್, ಬಿಸಿ ನಾಗೇಶ್ ಸೇರಿದಂತೆ ಹಲವು ರಾಜಕೀಯ ನಾಯಕರು ಮುಖಾಮುಖಿ ಆಗಿದ್ದಾರೆ. ವಿಶೇಷ ಎಂದರೆ, ಮದುವೆಗೆ ಆಹ್ವಾನ ನೀಡದಿದ್ದರೂ ಮಾಧುಸ್ವಾಮಿ ಜೊತೆಗಿನ ಈ ಹಿಂದಿನ ಒಡನಾಟ ಹಿನ್ನಲೆ ಸಿದ್ದರಾಮಯ್ಯ ಅವರು ಆಗಮಿಸಿ, ನೂತನ ವಧು-ವರರಿಗೆ ಶುಭ ಕೋರಿದ್ದಾರೆ.

    ಕರೆಯದಿದ್ದರೂ ಬಂದಿದ್ದೇನೆ ಎಂದ ಸಿದ್ದರಾಮಯ್ಯ
    ಮದುವೆಗೆ ಆಗಮಿಸಿದ್ದ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಾಧುಸ್ವಾಮಿ ಅವರು ಮದುವೆಗೆ ಕರೆಯದಿದ್ದರೂ ಬಂದಿದ್ದೇನೆ. ಮಾಧುಸ್ವಾಮಿ ಈಗ ಬಿಜೆಪಿಯಲ್ಲಿ ಇದ್ದರೂ ಮೊದಲು ನಮ್ಮ ಜೊತೆ ಇದ್ದವರು. ಮಾಧುಸ್ವಾಮಿ ನನಗೆ ರಾಜಕೀಯವಾಗಿ ಬಹಳ ಆಪ್ತರು. ರಾಜಕೀಯ ಬೇರೆ ಸ್ನೇಹ ಬೇರೆ. ಮದುವೆಗೆ ಬಂದು ಅವರ ಮಕ್ಕಳಿಗೆ ಶುಭಕೋರಿದ್ದೇನೆ ಎಂದರು.

    ಇದೇ ವೇಳೆ ಕುಮಾರಸ್ವಾಮಿಯನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಭಯ ಎಂಬ ಹೇಳಿಕೆ ಕುರಿತು ಕಿಡಿಕಾರಿದ ಅವರು, ನಾನು ರಾಜಕೀಯಕ್ಕೆ ಬಂದಾಗ ಇವರ್ಯಾರು ಅಂತಾನೆ ನನಗೆ ಗೊತ್ತಿರಲಿಲ್ಲ. ನಾನು 1978ರಲ್ಲಿ ರಾಜಕೀಯಕ್ಕೆ ಬಂದೆ. ಆಗ ಇವನು ಎಲ್ಲಿದ್ದ ಎಂದು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು
    ಮುಂದುವರೆದು ಮಾತನಾಡಿದ ಅವರು, ನನಗೆ ಎಂದೂ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ನಾನು ಏನಿದ್ರೂ ಸ್ನೇಹದ ರಾಜಕಾರಣ ಮಾಡುವುದು. ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಾರೆ. ನಾನು ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲ್ಲ ಎಂದರು.

    ಇದನ್ನು ಓದಿ: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್​ ಬಿಡುಗಡೆ; ಮೇ 16ರಿಂದ ಶಾಲೆ ಆರಂಭ

    ಯಾವುದೇ ಮೃದುಧೋರಣೆ ಇಲ್ಲ ಎಂದ ಸಿಎಂ

    ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮುಖಾಮುಖಿಯಾಗಿ ಹಸ್ತಲಾಘವ ಮಾಡಿದರು.

    ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮದುವೆ ಚೆನ್ನಾಗಿತ್ತು. ಮಾಧುಸ್ವಾಮಿಯವರ ಆತಿಥ್ಯ ಚೆನ್ನಾಗಿತ್ತು ಎಂದರು. ಇದೇ ವೇಳೆ ದೇವೇಗೌಡರ ಹಸ್ತಲಾಘವ ಹಾಕಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ದೇವೇಗೌಡರು ನಮ್ಮ ಹಿರಿಯರು. ನನಗೆ ಕರೆ ಮಾಡಿ ಬೆಂಗಳೂರಿಗೆ ಯಾವಾಗ ಹಿಂದಿರುಗುತ್ತೀರಿ ಎಂದು ಪ್ರಶ್ನಿಸಿದರು. ಬಂದಾಗ ಕರೆ ಮಾಡಲು ತಿಳಿಸಿದರು.ರಾಜಕೀಯ ಏನೂ ಮಾತನಾಡಿಲ್ಲ ಎಂದರು.

    ಇದನ್ನು ಓದಿ: Arvind Kejriwal​ ಸಮ್ಮುಖದಲ್ಲಿ AAP​ ಸೇರಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​

    ಹೆಚ್.ಡಿ.ಕುಮಾರಸ್ವಾಮಿ ಅವರು ಬಿ.ಜೆ.ಪಿ ಮೃದು ಧೋರಣೆ ಕುರಿತು ಮಾತನಾಡಿದ ಅವರು, ಸಾಫ್ಟ್ ಇಲ್ಲ. ಕಾರ್ನರ್ ರೂ ಇಲ್ಲ. ಅವರ ರಾಜಕಾರಣ ಅವರು ಮಾಡುತ್ತಾರೆ ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಹೇಳಿಕೆ ಆಕ್ಷೇಪಾರ್ಹ

    ನೂತನ ವಧುವರರಿಗೆ ಶುಭ ಹಾರೈಸಿ ಮಾತನಾಡಿದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಅವರ ಅಪ್ಪನ ಮಲೆ ಆಣೆ ಹಾಕಲಿ ಎಂದಿದ್ದ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರು ಈ ಪದ ಬಳಸಿರೋದು ಆಕ್ಷೇಪರ್ಹವಾಗಿದೆ. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಅವರ ಸಂಸ್ಕೃತಿ ತೋರಿಸುತ್ತದೆ. ಈ ರೀತಿ ಪದ ಬಳಕೆ ಮಾಡಿರುವುದು ಖಂಡನಾರ್ಹ, ಸಿದ್ದರಾಮಯ್ಯನವರ ಈ ಪದ ಬಳಕೆ ಅವರ ಅಹಂಕಾರವನ್ನ ತೋರಿಸುತ್ತದೆ.  ದೇವೇಗೌಡರ ಬಗ್ಗೆ ಈ ನಾಡಿನ ಜನತೆಗೆ ಹೆಮ್ಮ, ಹಿರಿಮೆ, ಗರಿಮೆ ಎಲ್ಲವೂ ಇದೆ. ಅಂಥವರ ಮೇಲೆ ಸಿದ್ದರಾಮಯ್ಯ ಆಣೆ ತೆಗೆದುಕೊಳ್ಳೋಕೆ ಹೇಳುವುದು ಸರಿಯಲ್ಲ. ಇದು ನಿಮ್ಮ ಘನತೆಗೆ ಶೋಭೆ ತರುವಂಥಾದ್ದಲ್ಲ ಎಂದರು
    Published by:Seema R
    First published: