‘ಯಡಿಯೂರಪ್ಪ ಬಳಿ ಟನ್​​ಗಟ್ಟಲೆ ದುಡ್ಡಿದೆ, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ‘; ಸಿದ್ದರಾಮಯ್ಯ ಆರೋಪ

ದನ ಕುರಿ ಕೋಳಿ ಮಾರಾಟ ಆಗೋದನ್ನ ನೋಡಿದ್ದೇವೆ. ಆದರೀಗ, 17 ಮಂದಿ ಅನರ್ಹ ಶಾಸಕರೇ ಬಿಜೆಪಿ ಮಾರಾಟವಾಗಿದ್ದಾರೆ. ವಿಶ್ವನಾಥ್ ಕಾಂಗ್ರೆಸ್ಸಿನಲ್ಲಿದ್ದಾಗ ಎಲ್ಲಾ ಅಧಿಕಾರ ಅನುಭವಿಸಿದರು- ಸಿದ್ದರಾಮಯ್ಯ

news18-kannada
Updated:December 3, 2019, 2:07 PM IST
‘ಯಡಿಯೂರಪ್ಪ ಬಳಿ ಟನ್​​ಗಟ್ಟಲೆ ದುಡ್ಡಿದೆ, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ‘; ಸಿದ್ದರಾಮಯ್ಯ ಆರೋಪ
ಸಿದ್ದರಾಮಯ್ಯ- ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು(ಡಿ.03): "ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಬಳಿ ಟನ್​​ಗಟ್ಟಲೆ ದುಡ್ಡಿದೆ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ರೀತಿ ಖರ್ಚು ಮಾಡುತ್ತಿದ್ದಾರೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಎಸಗಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವ ಮಂಜುನಾಥ್​​​ ಪರವಾಗಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿನ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿದ ಮಾಜಿ ಸಿಎಂ ಹೀಗೆ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕುಟುಕಿದರು.

ಅನರ್ಹ ಶಾಸಕರಿಗೆ ಉಪಚುನಾವಣೆಗಾಗಿ ಬಿ.ಎಸ್​​​ ಯಡಿಯೂರಪ್ಪ 20 ಕೋಟಿ ರೂ. ನೀಡಿದ್ದಾರೆ. ನಿಮ್ಮ ಬಳಿ ಬಾಂಬೆ ನೋಟು ತರುತ್ತಾರೆ, ಅದಕ್ಕೆ ಬಲಿಯಾಗಬೇಡಿ. ಬಾಂಬೆ ನೋಟು ತೆಗೆದುಕೊಂಡು ಕಾಂಗ್ರೆಸ್​ಗೆ ವೋಟ್​ ಹಾಕಿ. ಬಾಂಬೆ ನೋಟು, ಮಂಜುನಾಥ್​​ಗೆ ವೋಟು ಎಂದು ಘೋಷಣೆ ಕೂಗುತ್ತಾ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸಮರ ಸಾರಿದರು.

ದನ ಕುರಿ ಕೋಳಿ ಮಾರಾಟ ಆಗೋದನ್ನ ನೋಡಿದ್ದೇವೆ. ಆದರೀಗ, 17 ಮಂದಿ ಅನರ್ಹ ಶಾಸಕರೇ ಬಿಜೆಪಿ ಮಾರಾಟವಾಗಿದ್ದಾರೆ. ವಿಶ್ವನಾಥ್ ಕಾಂಗ್ರೆಸ್ಸಿನಲ್ಲಿದ್ದಾಗ ಎಲ್ಲಾ ಅಧಿಕಾರ ಅನುಭವಿಸಿದರು. ವಯಸ್ಸಾದಾಗ ಬಿಜಿಪಿಗೆ ಹೋಗಿ ಯಡಿಯೂರಪ್ಪನ‌ ಜೊತೆ ಸೇರಿಕೊಂಡರು ಎಂದು ಹೀಯಾಳಿಸಿದರು.

ಇದನ್ನೂ ಓದಿ: ಡಿ.9ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ; ಮತ್ತೆ ಕಾಂಗ್ರೆಸ್​ ಸರ್ಕಾರ ಬರಲಿದೆ; ಸಿದ್ದರಾಮಯ್ಯ

ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ರೋಮಾಂಚನ ಎನ್ನುತ್ತಿದ್ದ ವಿಶ್ವನಾಥ್ ಈಗ ಸ್ವಾಭಿಮಾನ‌ ಮಾರಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಇಂತವರಿಗೆ ನಾಚಿಕೆ ಆಗೋಲ್ಲವೇ ಎಂದು ಕೇಳಬೇಕೋ ಬೇಡವೇ? ಎಂದು ಮತದಾರರಿಗೆ ಪ್ರಶ್ನಿಸಿದರು. ಹಾಗೆಯೇ ಸುಪ್ರೀಂಕೋರ್ಟ್​ ಶಾಸಕರಾಗಲು ಅನರ್ಹರು ಎಂದು ಹೇಳಿದೆ. ಹಾಗಂದ್ರೆ ಇವರು ಶಾಸಕರಾಗಲಿಕ್ಕೆ ನಾಲಾಯಕ್ ಎಂದರ್ಥ​. ನೀವು ಡಿಸೆಂಬರ್​​​ 5ನೇ ತಾರೀಕು ಕಡ್ಡಾಯವಾಗಿ ಅನರ್ಹರನ್ನಾಗಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ರಾಜ್ಯಕ್ಕೆ ಎಲ್ಲ ಭಾಗ್ಯಗಳನ್ನ ಕೊಟ್ಟಿದ್ದು ನಾವು. ಕ್ಷೇತಕ್ಕೇನು ಮಾಡದ ಬಿಜೆಪಿ ಪಕ್ಷಕ್ಕೆ ಹೋದರಲ್ಲ ವಿಶ್ವನಾಥ್​​ ಮರ್ಯಾದೆ ಇದೆಯಾ ಎಂದು ವ್ಯಂಗ್ಯವಾಡಿದರು. ಬಿ.ಎಸ್​​ ಯಡಿಯೂರಪ್ಪ ಮಾತೇತ್ತಿದರೆ, ಖಜಾನೆ ಖಾಲಿ ಎನ್ನುತ್ತಿದ್ದರು. ಅದಕ್ಕೆ ರಾಜೀನಾಮೆ ನೀಡಿ ನಾವೇ ಖಜಾನೆ ತುಂಬಿಸುತ್ತೇವೆ ಎಂದು ಹೇಳಿದ್ದೇನೆ. ಯಾವಾಗಲು ತಂತಿ ಮೇಲಿನ ನಡಿಗೆ ಎಂದೇಳುತ್ತಾರೆ. ಹಾಗಾಗಿಯೇ ವಯಸ್ಸಾಗಿದೆ ಬಿದ್ದುಬಿಟ್ಟೀರಾ ಇಳಿದು ಬಿಡಿ ಎಂದಿದ್ದೇನೆ ಅಂದರು.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ