Siddaramaiah: ಭಾಷಣದ ವೇಳೆ ಮತ್ತೆ ಎಡವಟ್ಟು! ರಾಹುಲ್​ ಬದಲು ಮೋದಿ ಪಾದಯಾತ್ರೆ ಎಂದ ಸಿದ್ದು

ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಹುಲ್​ ಅನ್ನುವ ಬದಲು ಮೋದಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಂತರ ಸರಿಪಡಿಸಿಕೊಂಡು ನರೇಂದ್ರ ಮೋದಿ ಅಲ್ಲ ರಾಹುಲ್ ಗಾಂಧಿ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:

ಬೆಂಗಳೂರು (ಸೆ.18): ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಭಾಷಣದ ವೇಳೆ ಎಡವಟ್ಟು ಮಾಡೋದು ಹೊಸದೇನು ಅಲ್ಲ ಈ ಹಿಂದೆ ಅನೇಕರ ಭಾರೀ ಬಾಯ್ತಪ್ಪಿನಿಂದ ಎಡವಟ್ಟು ಮಾಡಿಕೊಂಡಿದ್ರು. ಈ ಬಾರಿಯೂ ಹಾಗೇ ಆಗಿದೆ. ಮೈಸೂರಿನಲ್ಲಿ ಭಾರತ್​ ಜೋಡೋ (Bharat Jodo) ಪೂರ್ವಭಾವಿ ಸಭೆಯ ಭಾಷಣದ ವೇಳೆ ಸಿದ್ದರಾಮಯ್ಯ ರಾಹುಲ್​ ಬದಲು ಮೋದಿ ಜಪ ಮಾಡಿದ್ದಾರೆ. ದೇಶದ ಅಭಿವೃದ್ಧಿಗಾಗಿ (Country Development) ನರೇಂದ್ರ ಮೋದಿ (Narendra Modi) ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್​ ಗಾಂಧಿ ಹೆಸರಿಗೆ ಬದಲಾಗಿ ಮೋದಿ ಹೆಸರೇಳಿದ್ದಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೆಲ್ಲಾ ಶಾಕ್​ ಆಗಿದ್ದಾರೆ.


ನರೇಂದ್ರ ಮೋದಿ ಪಾದಯಾತ್ರೆ

ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಹುಲ್​ ಅನ್ನುವ ಬದಲು ಮೋದಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಂತರ ಸರಿಪಡಿಸಿಕೊಂಡು ನರೇಂದ್ರ ಮೋದಿ ಅಲ್ಲ ರಾಹುಲ್ ಗಾಂಧಿ ಎಂದು ಹೇಳಿದರು. ನಾನು ನರೇಂದ್ರ ಮೋದಿ ಅಂತ ಹೇಳಿದ್ನಾ ಎಂದು ಸಭೆಯಲ್ಲಿದ್ದವರನ್ನು ಸಿದ್ದರಾಮಯ್ಯ ಕೇಳಿದರು.




Congress Leader Siddaramaiah barrage against BJP leaders pvn
ಮಾಜಿ ಸಿಎಂ ಸಿದ್ದರಾಮಯ್ಯ


ಪಕೋಡ ಮಾರಲು ಎಣ್ಣೆ ಬೆಲೆ ಹೆಚ್ಚಾಗಿದೆ

ತಪ್ಪು ಸರಿ ಮಾಡಿಕೊಂಡು ಭಾಷಣ ಮುಂದುವರಿಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಅಚ್ಛೇ ದಿನ್ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಮೋದಿ ಪಕೋಡ ಮಾರಲು ಹೋಗಿ ಅಂತಾರೆ. ಎಣ್ಣೆ ಬೆಲೆ ಜಾಸ್ತಿ‌ ಆಗಿದೆ ಹೇಗೆ ಮಾರೋದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ಇದನ್ನೂ ಓದಿ: Karnataka Congress: ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ; ಡಿಕೆ ಶಿವಕುಮಾರ್​ಗೆ ಸಲಹೆ ಕೊಟ್ಟ ದಿನೇಶ್ ಗುಂಡೂರಾವ್


ಇಂಥ ಭ್ರಷ್ಟರನ್ನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ

ಪಿಎಸ್​ಐ ಹುದ್ದೆಗಳ ಪರೀಕ್ಷೆಯಲ್ಲಿ ಯುವಕರಿಂದ 300 ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಅದರಲ್ಲಿ ಮಂತ್ರಿಗಳು ಇದ್ದಾರೆ, ಬಿಜೆಪಿಯವರು ಲಜ್ಜೆಗೆಟ್ಟವರು. ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್​ ಇದೆ ಎಂದು ಪತ್ರ ಬರೆಯಲಾಗಿದೆ. ಕೆಂಪಯ್ಯ ಪ್ರಧಾನಿಗೆ ಎರಡನೇ ಪತ್ರ ಕೂಡ ಬರೆದಿರಬೇಕು. ಇಂಥ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದ್ರು.

ಇದನ್ನೂ ಓದಿ: B S Yediyurappa: ಏಕಾಂಗಿಯಾದ್ರಾ ಯಡಿಯೂರಪ್ಪ? BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!

ಎಡಿಜಿಪಿ ಕಚೇರಿಯಲ್ಲಿ ಪಿಎಸ್‌ಐ ಪರೀಕ್ಷೆ ಉತ್ತರ ಬರೆಸಿದ್ದಾರೆ. ಖಾಲಿ ಪೇಪರ್ ಪಡೆದು ನಂತರ ಉತ್ತರವನ್ನ ಬರೆಯಲಾಗಿದೆ. ಎಡಿಜಿಪಿ ಅಮೃತ್​ಪಾಲ್ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಹೆಸರು ಮಾತ್ರ ಅಮೃತ್ ಆದರೆ, ಆತ ಅಮೃತ ಅಲ್ಲ ವಿಷಾಮೃತ ಎಂದು ಹೇಳಿದರು.

ನಮ್ಮ ಧರ್ಮ ಆಚರಿಸಲು ಅವಕಾಶ ಇದೆ

ಮತಾಂತರ ನಿಷೇಧ ಕಾಯ್ದೆಗೆ  ಬಗ್ಗೆ ಸಿದ್ದರಾಮಯ್ಯ ಕಿಡಿಕಾರಿದ್ರು. ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ   ಸ್ವಾತಂತ್ರ್ಯಯಿದೆ ಅಲ್ಪಸಂಖ್ಯಾತರಿಗೆ ನೋವು ಕೊಡಲು ಕಾಯ್ದೆ ತಂದಿದ್ದಾರೆ. ಮತಾಂತರ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು, ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ. ನಮಗೆಲ್ಲಾ‌ ನಮ್ಮ ಧರ್ಮ ಆಚರಿಸಲು ಅವಕಾಶ ಇದೆ. ಎಲ್ಲರನ್ನೂ ಮನುಷ್ಯರಾಗಿ ನೋಡಬೇಕು ಎಂದು ವಿಪಕ್ಷ ನಾಯಕ‌ ಸಿದ್ದರಾಮಯ್ಯ ಹೇಳಿದರು.

 ಒಬ್ಬೊಬ್ಬ ಶಾಸಕ 5 ಸಾವಿರ ಜನರನ್ನು ಕರೆತನ್ನಿ

ರಾಹುಲ್​ ಪಾದಯಾತ್ರೆಗೆ ಹೆಚ್ಚಿನ ಜನರನ್ನು ಕರೆದುಕೊಂಡು ಬಂದರೆ ನಿಮಗೆ ರಾಜಕೀಯ ಲಾಭ ಎಂದ್ರು. ಮುಂದೆ ಚುನಾವಣೆ ಬರುತ್ತಿದೆ. ಒಬ್ಬೊಬ್ಬ ಶಾಸಕ 5 ಸಾವಿರ ಜನರನ್ನು ಕರೆದುಕೊಂಡು ಬನ್ನಿ ಎಂದು ಸಭೆಯಲ್ಲಿದ್ದವರಿಗೆ ಸಿದ್ದರಾಮಯ್ಯ ಕರೆ ನೀಡಿದರು. ಎಲ್ಲಾ ಶಾಸಕರು ಮಾಜಿ ಶಾಸಕರು, ಮಾಜಿ ಎಂಪಿ, ಎಂ.ಎಲ್.ಸಿ, ಪಾಲಿಕೆ‌ ಸದಸ್ಯರು ಜಿ.ಪಂ ತಾ.ಪಂ ಗ್ರಾ.ಪಂ ಸದಸ್ಯರು ಭಾಗವಹಿಸಬೇಕು. ಮೇಕೆದಾಟು ಬಳ್ಳಾರಿ ಪಾದಯಾತ್ರೆ ಇದೆಲ್ಲಾ ಚಿಕ್ಕ ಚಿಕ್ಕ ಪಾದಯಾತ್ರೆ. ರಾಹುಲ್ ಗಾಂಧಿ ಪಾದಯಾತ್ರೆ ದೊಡ್ಡದು ಎಂದು ಸಿದ್ದರಾಮಯ್ಯ ಹೇಳಿದರು.

Published by:ಪಾವನ ಎಚ್ ಎಸ್
First published: