ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ (former CM Siddaramaiah) ಕೋಲಾರ ವಿಧಾನಸಭಾ ಕ್ಷೇತ್ರದಿಂದ (Kolar assembly constituency) ಮುಂಬರುವ ಚುನಾವಣೆಗೆ ಸ್ಪರ್ಧಿಸ್ತಾರೆ ಎಂಬ ವಿಚಾರವೇ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ತಾಯಿ (Godness Chikkamma Tayi) ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾಳೆ. ಈ ದೇವಾಲಯಕ್ಕೆ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ (Dr. Yathindra Siddaramaiah) ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದರು. ಈ ವೇಳೆ ದೇಗುಲದ ಅರ್ಚಕ ಲಿಂಗಣ್ಣನ ಮೇಲೆ ಆವಾಹನೆಯಾಗಿದ್ದ ಶಕ್ತಿ ದೇವತೆ, ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದು ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
“ಅದು ಯತೀಂದ್ರರ ಅಭಿಪ್ರಾಯ, ನನ್ನ ಅಭಿಪ್ರಾಯವಲ್ಲ”
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುದಗನೂರು ಗ್ರಾಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ನನ್ನ ಮಗ ಯತೀಂದ್ರನ ಅಭಿಪ್ರಾಯ. ಪಾಪ ಅವರು ತಂದೆ ಮೇಲಿನ ಪ್ರೀತಿಯಿಂದ ಕರಿತಾ ಇದ್ದಾರೆ. ಅದು ನನ್ನ ಅಭಿಪ್ರಾಯ ಅಲ್ಲ, ನನ್ನ ಅಭಿಪ್ರಾಯ ಒಂದೇ ಕಡೆ ನಿಂತ್ಕೊಳೋದು ಅಂತ ಹೇಳಿದ್ದಾರೆ.
“ಕುಮಾರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸೋದಿಲ್ಲ”
ಸಿದ್ದರಾಮಯ್ಯ ಅವರನ್ನು ಹರಿಕೆಯ ಕುರಿ ಮಾಡ್ತಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ನಮ್ಮ ಪಾರ್ಟಿಯವರಾ? ಹೀ ಈಸ್ ಅವರ್ ಪಾರ್ಟಿ ಮ್ಯಾನ್? ಅಂತ ಪ್ರಶ್ನಿಸಿದ್ರು. ವಿರೋಧ ಪಕ್ಷದವರು ಹೇಳೇ ಹೇಳ್ತಾರೆ, ನನ್ನ ಪ್ರತಿಕ್ರಿಯೆ ಏನಿಲ್ಲ ಅದಕ್ಕೆ, ಕುಮಾರಸ್ವಾಮಿ ಮಾತುಗಳಿಗೆ ಪ್ರತಿಕ್ರಿಯೆ ಇಲ್ಲಾ ಅಂತ ಹೇಳಿದ್ರು.
ಇದನ್ನೂ ಓದಿ: Kodimatha Swamiji: 2023ರ ಚುನಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ! ಈ ಬಾರಿಯೂ ಸಮ್ಮಿಶ್ರ ಸರ್ಕಾರ ಫಿಕ್ಸಾ?
“ನನ್ನನ್ನು ಯಾರೂ ಹರಕೆ ಕುರಿ ಮಾಡೋಕೆ ಆಗಲ್ಲ”
ಯಾರೂ ನನ್ನನ್ನು ಹರಕೆ ಕುರಿ ಮಾಡಲು ಆಗಲ್ಲ, ಜನ ತೀರ್ಮಾನ ಮಾಡೋದು. ವೋಟರ್ಸ್ ಯಾರ ಜೇಬಿನಲ್ಲೂ ಇಲ್ಲ, ಕುಮಾರಸ್ವಾಮಿ ಜೇಬಿನಲ್ಲೂ ಇಲ್ಲಾ, ಇನ್ನೊಬ್ಬರ ಜೇಬಿನಲ್ಲೂ ಇಲ್ಲಾ ಅಂತ ಹೇಳಿದ್ದಾರೆ. ಜನ ಅವರಿಗೆ ತಮ್ಮ ಪ್ರತಿನಿಧಿ ಯಾರು ಆಗಬೇಕಂತ ಆಯ್ಕೆ ಮಾಡ್ಕಳದು ಅವರಿಗೆ ಸೇರಿದ್ದು ಅಂತ ಹೇಳಿದ್ದಾರೆ. ಜನ ತೀರ್ಮಾನ ಮಾಡ್ತಾರೆ, ವಿರೋಧ ಪಕ್ಷದವರು ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಕೆ ಆಗಲ್ಲ ಅಂತ ಹೇಳಿದ್ರು.
“ಈಶ್ವರಪ್ಪ ಮಹಾನ್ ಪೆದ್ದ”!
ಇನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಸಿದ್ದರಾಮಯ್ಯ ಅವರಿಗೆ ಇಲ್ಲಾ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ ಮಹಾನ್ ಪೆದ್ದ. ನಾನು ಅನೇಕ ಸಾರಿ ಹೇಳಿದ್ದೀನಿ ನಾಲಗೆಗೂ ಬ್ರೈನ್ಗೂ ಲಿಂಕ್ ತಪ್ಪೋಗಿ ಬಿಟ್ಟಿದೆ. ಅದಕ್ಕೆ ಏನೇನೋ ಮಾತಾಡ್ತಾನೆ ಅಂತ ಕಿಡಿ ಕಾರಿದ್ರು.
ಹಾಗಾದ್ರೆ ಈ ದೇಶದ ಬಗ್ಗೆ ಯಾರು ಮಾತನಾಡಲೇಬಾರದ? ಯೋಗ್ಯತೆ ಎಂದರೆ ಏನು, What You Mean By Qualification? ಅವರ ಬಗ್ಗೆ ಟೀಕೆ ಮಾಡಬೇಕಾದ್ರೆ ಏನೇನ್ ಕ್ವಾಲಿಫಿಕೇಷನ್ ಇರಬೇಕು? ಈಶ್ವರಪ್ಪನ ಪ್ರಕಾರ ಏನೇನ್ Qualification ಇರಬೇಕು? ನಾನು ಪ್ರಧಾನಿ ಆಗಬೇಕಾ, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕ. ನಾನು ಶಾಸಕಾಂಗ ಪಕ್ಷ ಕಾಂಗ್ರೆಸ್ ಪಾರ್ಟಿಯನ್ನು ಪ್ರತಿನಿಧಿಸುತ್ತಿದ್ದೇನೆ, ನನಗೆ ಯೋಗ್ಯತೆ ಇಲ್ಲದಿದ್ದ ಮೇಲೆ ಇನ್ಯಾರಿಗೆ ಯೋಗ್ಯತೆ ಇರುತ್ತದೆ? ಅಂತ ಖಾರವಾಗಿ ಪ್ರಶ್ನಿಸಿದ್ರು.
“ಈಶ್ವರಪ್ಪನಿಗೆ ಕ್ವಾಲಿಫಿಕೇಶನ್ ಇದೆಯಾ?”
ಈಶ್ವರಪ್ಪನ ಇಲಾಖೆಯಲ್ಲಿ 40% ಕಮೀಷನ್ ಕೊಡಲಾಗದೆ ಸಂತೋಷ್ ಪಾಟೀಲ್ ಅನ್ನೋ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ. ಈಶ್ವರಪ್ಪನಿಗೆ Qualification ಇದೆಯಾ? ರಾಜಕೀಯವಾಗಿ ಪ್ರಬುದ್ಧತೆ ಇಲ್ಲದವರು ಮಾತನಾಡೋದು ಇವೆಲ್ಲವನ್ನು. ಪ್ರತಿಯೊಬ್ಬರಿಗೂ ರಾಜಕೀಯ ಪ್ರಬುದ್ಧತೆ ಇರಬೇಕು ಅಂತ ಕಿಡಿಕಾರಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ