ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ (KPCC Office) ಶನಿವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President Siddaramaiah) ಸೇರಿದಂತೆ ಹಲವರು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಸಿದ್ದರಾಮಯ್ಯನವರು ‘ವಂದೇ ಮಾತರಂ’ (Vande Mataram) ಹಾಡಲು ಹಿಂದೇಟು ಹಾಕಿದ ಘಟನೆ ನಡೆದಿದೆ. ಕಾರ್ಯಕ್ರಮದ ಆರಂಭದಲ್ಲಿ ಸಲೀಂ ಅಹಮ್ಮದ್ ಮೊದಲು ವಂದೇ ಮಾತರಂ ಎಂದಿದ್ದಾರೆ. ತಕ್ಷಣ ರೊಚ್ಚಿಗೆದ್ದ ಸಿದ್ದರಾಮಯ್ಯ ‘ಏ ವಂದೇ ಮಾತರಂ ಬೇಡ’ ಎಂದಿದ್ದಾರೆ. ತಾವಾಡಿದ ಮಾತು ವಿವಾದಕ್ಕೆ ಕಾರಣವಾಗಲಿದೆ ಎಂದು ಅರಿತ ಸಿದ್ದರಾಮಯ್ಯ ಕೆಲ ಹೊತ್ತಿನ ಬಳಿಕ ಹಾಡೋದಾದ್ರೆ ವಂದೇ ಮಾತರಂ ಹಾಡ್ರಪ್ಪ ಎಂದಿದ್ದಾರೆ. ಇಷ್ಟೇ ಅಲ್ಲ ಸಿದ್ದರಾಮಯ್ಯ ಹಾಡಬೇಡ ಅಂತ ಹೇಳಿದ ಎಂದಾಗುತ್ತೆ ಎಂದಿದ್ದಾರೆ. ಸಿದ್ದರಾಮಯ್ಯ ಮಾತಿನ ಬಳಿಕ ಕಾಂಗ್ರೆಸ್ ನಾಯಕರು (Congress Leaders) ಅನಿವಾರ್ಯವಾಗಿ ವಂದೇ ಮಾತರಂ ಹಾಡಿದ್ದಾರೆ.
ಸದ್ಯ ವಿಡಿಯೋ ಟ್ಯಾಗ್ ಮಾಡಿ ರಾಜ್ಯ ಬಿಜೆಪಿ ಸಿದ್ದರಾಮಯ್ಯನವರ ಕಾಲೆಳೆದಿದೆ. ಸಿದ್ದರಾಮಯ್ಯನವರು ಬೌದ್ಧಿಕ ದಾರಿದ್ರ್ಯದಿಂದ ರಾಜಕೀಯ ಸನ್ಯಾಸತ್ವದ ಅಂಚಿನಲ್ಲಿದ್ದಾರೆ ಅನ್ನೋದಕ್ಕೆ ಅವರ ಈ ಮಾತೇ ಸಾಕ್ಷಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಚಿಲುಮೆ ಸಂಸ್ಥೆ ನೇಮಿಸಿದ್ದೇ ಸಿದ್ದರಾಮಯ್ಯ
ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದೇ ಸಿದ್ದರಾಮಯ್ಯ ಸರ್ಕಾರ. ಕಾಂಗ್ರೆಸ್ ಆರೋಪ ಮಾಡುವ ಮೊದಲೇ ತನಿಖೆ ನಡೆಸಲು ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ನೀಡಿದ್ದರು. ಇದು ತಿಳಿಯುತ್ತಿದಂತೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಟಕ ಮಾಡಿದೆ. ಹವಾಲಾ ದಂಧೆಕೋರರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಾದೃಷ್ಟ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಸತ್ಯವನ್ನು ಕುಗ್ಗಿಸಬಹುದು, ಸತ್ಯವನ್ನು ಬಗ್ಗಿಸಬಹುದು, ಸತ್ಯವನ್ನು ತಿರುಚಬಹುದು, ಸತ್ಯವನ್ನು ಮರೆಮಾಚಬಹುದು, ಸತ್ಯವನ್ನು ಸುಳ್ಳೆಂದು ವಾದಿಸಬಹುದು ಆದರೆ ಸತ್ಯವನ್ನು ಬದಲಾಯಿಸಲಾಗದು. ಈ ಸತ್ಯವನ್ನು ಕಾಂಗ್ರೆಸ್ ಅರಿತರೆ ಒಳಿತು ಎಂದು ಬಿಜೆಪಿ ಹೇಳಿದೆ.
ಸಿದ್ದರಾಮಯ್ಯ ಹಾಗೂ ಚಿಲುಮೆ ಇರುವ ಸಂಬಂಧ ಏನು?
ಸಿದ್ದರಾಮಯ್ಯ ಹಾಗೂ ಚಿಲುಮೆ ಸಂಸ್ಥೆಗೆ ಇರುವ ಸಂಬಂಧ ಏನು? ಸಿದ್ದರಾಮಯ್ಯ ಅವರೇ ಇದನ್ನು ಮೊದಲು ಸ್ಪಷ್ಟಪಡಿಸಿ. ಅದನ್ನು ಬಿಟ್ಟು ನಮ್ಮ ಸರ್ಕಾರದ ಮೇಲೆ ಹುರುಳಿಲ್ಲದ ಆಪಾದನೆ ಮಾಡಲು ಯಾವ ನೈತಿಕತೆ ಇದೆ? 2017 ರಲ್ಲಿ ಪ್ರಥಮ ಬಾರಿಗೆ ನಿಮ್ಮ ಸರ್ಕಾರದ ಅವಧಿಯಲ್ಲಿ ಚುನಾವಣಾ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚಿಲುಮೆಗೆ ಆದೇಶ ನೀಡಲಾಗಿತ್ತು.
ಇಬ್ಬರ ಅಮಾನತು
ಮಾನ್ಯ ಸಿದ್ದರಾಮಯ್ಯ ಅವರೇ, ಇದನ್ನು ನೀವು ಮರೆತಿದ್ದೀರಾ ಅಥವಾ ಜಾಣ ಮರೆವೇ? ಮತದಾರರ ಪಟ್ಟಿಯ ಪರಿಷ್ಕರಣೆಯು ಈಗ ಕೇಂದ್ರ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿದ್ದು, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಯೋಗವು ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲು ನಿರ್ದೇಶನ ನೀಡಿದ್ದು, ಅದರಂತೆ ಕ್ರಮ ವಹಿಸಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮತದಾರರ ಪಟ್ಟಿ ಮರುಪರಿಷ್ಕರಣೆಗೆ ಡೆಡ್ಲೈನ್
ಮತದಾರರ ಐಡಿ ಕಾರ್ಡ್ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ (Central Election Commission) ಮಧ್ಯೆ ಪ್ರವೇಶ ಮಾಡಿದ್ದು, ಕೇಸ್ ಸಂಬಂಧ ಬೆಂಗಳೂರು ಡಿಸಿ K.ಶ್ರೀನಿವಾಸ್ ತಲೆದಂಡವಾಗಿದೆ. ಶ್ರೀನಿವಾಸ್ (Srinivas) ಜೊತೆ BBMP ADEO ರಂಗಪ್ಪ ಅವರನ್ನು ಸಹ ಸಸ್ಪೆಂಡ್ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಮಹತ್ವದ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: Mangaluru Blast: ಶಾರೀಕ್ಗೆ ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್; ಬಂದಾಗೆಲ್ಲ ಆಕೆಯ ಜೊತೆ ಸುತ್ತಾಟ
3 ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ (Voters List) ಪರಿಷ್ಕರಣೆ ಮಾಡುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ (State Election Commissioner) ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ