• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Election: ಪ್ರಧಾನಿ ಮೋದಿ ಜೊತೆ ಓಟದ ಸ್ಪರ್ಧೆಗೆ ನಾನು ಸಿದ್ಧ ಎಂದ್ರು ಸಿದ್ದರಾಮಯ್ಯ

Election: ಪ್ರಧಾನಿ ಮೋದಿ ಜೊತೆ ಓಟದ ಸ್ಪರ್ಧೆಗೆ ನಾನು ಸಿದ್ಧ ಎಂದ್ರು ಸಿದ್ದರಾಮಯ್ಯ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

Siddaramaiah Vs PM Modi: ರಾಜಕೀಯದಲ್ಲಿ ಸಕ್ರಿಯವಾಗಿರುವಷ್ಟು ಆರೋಗ್ಯದಿಂದ ಇದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧ ಇದ್ದರೆ ಅವರ ಜೊತೆಯಲ್ಲಿ ಓಟದ ಸ್ಪರ್ಧೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ.

  • Share this:

ಬೆಂಗಳೂರು: ಕೊನೆ ಚುನಾವಣೆ (Election) ಎಂದು ವೋಟ್ (Vote) ಕೇಳುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪನವರನ್ನು (BS Yediyurappa) ವಯಸ್ಸಿನ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವಮಾನಕಾರಿಯಾಗಿ ಕಿತ್ತುಹಾಕಿದ ಬಿಜೆಪಿ (BJP) ಈಗ ಅವರನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವುದಕ್ಕೆ ಕಾರಣ ಅವರ ಮೇಲಿನ ಗೌರವವೇ? ಅಥವಾ ಅನುಕಂಪ ಗಳಿಕೆಯ ತಂತ್ರವೇ? ನಾನು ನಿವೃತ್ತಿಯಾಗುತ್ತೇನೆ ಎಂದು ಹೇಳುತ್ತಿರುವುದು ಚುನಾವಣಾ ರಾಜಕಾರಣದಿಂದಲೇ (Election Politics) ಹೊರತು, ಸಕ್ರಿಯ ರಾಜಕಾರಣದಿಂದ ಅಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರುವಷ್ಟು ಆರೋಗ್ಯದಿಂದ ಇದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧ ಇದ್ದರೆ ಅವರ ಜೊತೆಯಲ್ಲಿ ಓಟದ ಸ್ಪರ್ಧೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ.


100ನೇ ಮನ್ ಕೀ ಬಾತ್ ಗೆ ಸಿದ್ದರಾಮಯ್ಯ ವ್ಯಂಗ್ಯ


100ನೇ ಮನ್​ ಕೀ ಬಾತ್​ಗೆ ಕಂಪ್ಯೂಟರ್ ಮುಂದೆ ಕಾಯುತ್ತಾ ಕುಳಿತಿರುವ ಅಸ್ತಿಪಂಜರದ ಫೋಟೋ ಹಾಕಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಜನರು ಮತ್ತು ಪತ್ರಕರ್ತರು ಜನ್​ ಕಿ ಬಾತ್ ಗಾಗಿ ಕಾಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.


ಖರ್ಗೆ ವಿಷ ಸರ್ಪ ಹೇಳಿಕೆಗೆ ಮೋದಿ ತಿರುಗೇಟು


ಹಾವು ಭಗವಾನ್ ಪರಮೇಶ್ವರ ಕೊರಳಲ್ಲಿರುವ ದೇವರು. ನನಗೆ ಈ ದೇಶದ ಜನರೇ ಈಶ್ವರ ಸ್ವೂರೂಪಿಗಳು. ನಾನು ಜನರ ಕೊರಳಲ್ಲಿರುವ ಹಾವು ಆಗಲು ಯಾವ ಬೇಸರವಿಲ್ಲ ಎಂದರು.
ಇದನ್ನೂ ಓದಿ:  Election Campaign: ಕಾಂಗ್ರೆಸ್-ಜೆಡಿಎಸ್ ಕರ್ನಾಟಕದ ಅಭಿವೃದ್ಧಿಗೆ ಕಂಟಕ ಪ್ರಾಯ ಎಂದ ಮೋದಿ


ಚುನಾವಣೆ ಸಮಯದಲ್ಲಿ ಇಂತಹ ಮಾತನ್ನು ಕರ್ನಾಟಕದ ಜನತೆ ಸಹಿಸಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆಗೆ ಮೋದಿ ತಿರುಗೇಟು ನೀಡಿದರು.

First published: