Siddaramaiah: ಏ ಅದನ್ನ ತರಬೇಡಪ್ಪ, ಅದರಲ್ಲಿ ಹುಳು ಇರುತ್ತೆ: ಸಿದ್ದರಾಮಯ್ಯ

ಶುಕ್ರವಾರ ಸಿದ್ದರಾಮಯ್ಯನವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ (Alamatti, Nidagundi) ಭೇಟಿ ನೀಡಿದ್ದರು. ಸಹಜವಾಗಿ ಹಲವರು ಹೂವಿನ ಹಾರದ (Garland) ಜೊತೆ ಆಗಮಿಸಿದ್ದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಕಳೆದ ಮೂರು ದಿನಗಳಿಂದ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಬಾಗಲಕೋಟೆ (Bagalkot) ಮತ್ತು ವಿಜಯಪುರ (Vijayapura) ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ತಮ್ಮ ಗ್ರಾಮಗಳಿಗೆ ಬರಮಾಡಿಕೊಳ್ತಿದ್ದಾರೆ. ಅಭಿಮಾನಿಗಳು (Fans) ಮತ್ತು ಕಾಂಗ್ರೆಸ್ ಕಾರ್ಯಕರ್ತರು (Congress Activist) ಹೂವಿನ ಹಾರ ಹಾಕಿ ಬರಮಾಡಿಕೊಳ್ಳೋದು ಸಾಮನ್ಯ. ಶುಕ್ರವಾರ ಸಿದ್ದರಾಮಯ್ಯನವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ (Alamatti, Nidagundi) ಭೇಟಿ ನೀಡಿದ್ದರು. ಸಹಜವಾಗಿ ಹಲವರು ಹೂವಿನ ಹಾರದ (Garland) ಜೊತೆ ಆಗಮಿಸಿದ್ದರು.

ಈ ವೇಳೆ ಆ ಹೂವಿನ ಹಾರ ಬೇಡರಪ್ಪ, ಅದರಲ್ಲಿ ಹುಳು ಇರುತ್ತೆ ಎಂದು ಹೇಳಿ ಮೇಜಿನ ಮೇಲೆಯೆ ಇರಿಸಿಕೊಂಡರು. ನಂತರ ಬಂದ ಮಹಿಳೆಗೂ ಹೂವಿನ ಹಾರ ಬೇಡ ಅಮ್ಮ ಎಂದು ಕೈ ಮುಗಿದರು.  ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮತ್ತೆ ಸಿಎಂ ಆಗುವ ಅಭಿಲಾಷೆ ಹೊರ ಹಾಕಿದ ಸಿದ್ದರಾಮಯ್ಯ

ಇಂದು ಬಾಗಲಕೋಟೆಯ ಪ್ರವಾಸಿ ಮಂದಿರದಲ್ಲಿ ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುವ ಆಸೆಯನ್ನು ಪರೋಕ್ಷವಾಗಿ ಹೊರ ಹಾಕಿದರು. ಇಂದು ಸಿದ್ದರಾಮಯ್ಯ ಅವರನ್ನು ನೇಕಾರ ಮುಖಂಡರು ಭೇಟಿಯಾಗಿ, ಸಾಲ ಮನ್ನಾ, ವಿದ್ಯುತ್ ಬಿಲ್ ಸಮಸ್ಯೆ ಕುರಿತು ಮನವಿ ಸಲ್ಲಿಸಿದರು.

ಇದನ್ನೂ ಓದಿ:  Karnataka Government: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ

ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯನವರು, ನಾನು ಇನ್ನೊಂದು ಸಾರಿ ಅಧಿಕಾರಕ್ಕೆ ಬಂದ್ರೆ ಎಲ್ಲಾ ಜೀರೋ ಮಾಡ್ತೀನಿ. ನಾನು ಸಾಲ ಮನ್ನಾ ಮಾಡಿದ್ದೆ, ಸಬ್ಸಿಡಿ ಕೊಟ್ಟಿದ್ದೆ, ಇನ್ನೊಂದು ಸಾರಿ ಬಂದ್ರೆ ಜೀರೋ ಮಾಡಿಬಿಡ್ತೀನಿ ಎಂದು ಸಿಎಂ ಆಗುವ ಅಭಿಲಾಷೆಯನ್ನು ಹೊರ ಹಾಕಿದರು.

ಸುಗಂಧರಾಜ ಹೂವಿನ ಹಾರ ಬೇಡ ಅಂದಿದ್ರು ಡಿಕೆಶಿ

ಈ ಹಿಂದೆ ಸಚಿವರಾಗಿದ್ದಾಗ ಡಿ.ಕೆ.ಶಿವಕುಮಾರ್ ಅವರು ವಿಜಯಪುರ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸುಗಂಧರಾಜ ಹೂವಿನ ಹಾರ ಹಾಕಲು ಬಂದಾಗ ಅವರನ್ನು ಡಿಕೆ ಶಿವಕುಮಾರ್ ತಡೆದಿದ್ದರು. ಬೇಕಾದ್ರೆ ಕಲ್ಲಿನ ಹೂವಿನ ಹಾರ ಹಾಕಿ. ಆದ್ರೆ ಸುಗಂಧರಾಜ ಹೂ ಬೇಡ  ಅಂತ ಹೇಳಿದ್ದರು.

ನಮ್ಗ ಹಣ ಬ್ಯಾಡ್ರಿ, ನ್ಯಾಯ ಬೇಕ್ರಿ; ಪರಿಹಾರದ ಹಣ ಸಿದ್ದರಾಮಯ್ಯ ಕಾರ್ ಮೇಲೆ ಎಸೆದ ಮಹಿಳೆ

ಕೆಲ ದಿನಗಳ ಹಿಂದೆ ಕೆರೂರು (Keruru) ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿ ಗಲಾಟೆ ನಡೆದಿತ್ತು. ಇಂದು ಸಿದ್ದರಾಮಯ್ಯನವರು ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಪರಿಹಾರವಾಗಿ ನೀಡಿದ್ದ ಹಣವನ್ನು ಮುಸ್ಲಿಂ ಮಹಿಳೆಯೊಬ್ಬರು (Muslim Woman) ಸಿದ್ದರಾಮಯ್ಯ ಅವರ ಬೆಂಗಾವಲು ವಾಹನದ ಮೇಲೆ ಎಸೆದು ಆಕ್ರೋಶ ಹೊರ ಹಾಕಿದರು.



ನಮಗ್ ಈ ದುಡ್ಡು, ಹಣ ಎಲ್ಲಾ ಬ್ಯಾಡ್ರಿ, ನಮಗೆ ಶಾಂತಿ ಮತ್ತು ನ್ಯಾಯ ಬೇಕ್ರಿ ಸರ್, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಮಹಿಳೆ ಜೋರು ಜೋರಾಗಿ ಕೂಗಿ ಹೇಳಿದರು. ಸದ್ಯ ಮಹಿಳೆ ಹಣ ಎಸೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇದನ್ನೂ ಓದಿ:  JDS Supports BJP: ರಾಷ್ಟ್ರಪತಿ ಚುನಾವಣೆಯಲ್ಲಿ BJP ಅಭ್ಯರ್ಥಿಗೆ JDS ಬೆಂಬಲ!

ರಜ್ಮಾ ಹಣ ಎಸೆದ ಮಹಿಳೆ. ಕುಳಗೇರಿ ಕ್ರಾಸ್ ದಾಬಾ ಮಾಲೀಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಮಹಿಳೆಗೆ ಎರಡು ಲಕ್ಷ ರೂ. ಪರಿಹಾರ ನೀಡಿದ್ದರು. ಆದ್ರೆ ಮಹಿಳೆ ಆರಂಭದಿಂದಲೂ ಹಣ ಸ್ವೀಕರಿಸಲು ನಿರಾಕರಿಸಿದರು. ಕೊನೆಗೆ ಸಿದ್ದರಾಮಯ್ಯ ಅವರ  ಕಾರ್ ಹಿಂಬಾಲಿಸಿಕೊಂಡು ಬಂದು ಹಣ ಎಸೆದಿದ್ದಾರೆ.



ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಘರ್ಷಣೆಯಲ್ಲಿ ಗಾಯಗೊಂಡಿದ್ದ  ಹನಿಫ್, ದಾವಲ್ ಮಲಿಕ್, ರಾಜೆಸಾಬ್, ರಫೀಕ್ ಎಂಬವರ ಆರೋಗ್ಯವನ್ನು ಸಿದ್ದರಾಮಯ್ಯ ವಿಚಾರಿಸಿದರು. ನಂತರ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.
Published by:Mahmadrafik K
First published: