ಬೆಂಗಳೂರು: ಹಾಲಿ ವಿಪಕ್ಷ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ (Ex CM) ಸಿದ್ದರಾಮಯ್ಯ (Siddaramaiah) ಶೀಘ್ರವೇ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಮುಂಬರುವ ಆಗಸ್ಟ್ 12ರಂದು ಸಿದ್ದರಾಮಯ್ಯ ಅವರಿಗೆ ಭರ್ತಿ 75 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 3 ದಿನಗಳ ಕಾಲ ದಾವಣಗೆರೆಯಲ್ಲಿ (Davanagere) ‘ಸಿದ್ದರಾಮೋತ್ಸವ’ (Siddaramotsava) ಹೆಸರಿನಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ (Birthday) ಆಚರಣೆಯಂತೆ ಕಾಣಿಸುತ್ತದೆ. ಆದರೆ ಇದರ ಒಳ ಲೆಕ್ಕಾಚಾರ (Strategy) ಬೇರೆಯೇ ಇದೆ. ಸಿದ್ದರಾಮೋತ್ಸವ ಹೆಸರಿನಲ್ಲಿ ಸಿದ್ದರಾಮಯ್ಯ ತಮ್ಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ (Political power Show) ಮುಂದಾಗಿದ್ದಾರೆ ಅಂತ ರಾಜಕೀಯ ತಜ್ಞರು (Political experts) ವಿಶ್ಲೇಷಿಸಿದ್ದಾರೆ.
ಶೀಘ್ರವೇ 75ನೇ ವಸಂತಕ್ಕೆ ಕಾಲಿಡಲಿದ್ದಾರೆ ಸಿದ್ದರಾಮಯ್ಯ
ರಾಜ್ಯದ ಹಿರಿಯ ರಾಜಕಾರಣಿ, ಹಾಲಿ ವಿಪಕ್ಷ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇದೇ ಆಗಸ್ಟ್ 12ರಂದು ಸಿದ್ದರಾಮಯ್ಯ ಅವರಿಗೆ 75 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ‘ಸಿದ್ದರಾಮೋತ್ಸವ’ ಎಂಬ ಹೆಸರಲ್ಲಿ ದಾವಣಗೆರೆಯಲ್ಲಿ ಅವರ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಲಾಗಿದೆ.
‘ಸಿದ್ದರಾಮೋತ್ಸವ’ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ
ಮೇಲ್ನೋಟಕ್ಕೆ ಇದೊಂದು ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಆಚರಣೆಯಂತೆ ಕಾಣಿಸುತ್ತದೆ. ಆದರೆ ಒಳ ಲೆಕ್ಕಾಚಾರ ಬೇರೆಯೇ ಇದೆ ಅಂತಾರೆ ರಾಜಕೀಯ ತಜ್ಞರು. 75ನೇ ವಸಂತದ ನೆಪದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ನಡೆಯುತ್ತಿದೆ ಎನ್ನಲಾಗುತ್ತಿದೆ. ದಾವಣಗೆರೆಯಲ್ಲಿ ಬರೋಬ್ಬರಿ ಮೂರು ದಿನ ಸಿದ್ದರಾಮೋತ್ಸವ ಹೆಸರಿನಲ್ಲಿ ಉತ್ಸವ ನಡೆಯಲಿದೆ. ಇದು ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗುವುದು ಪಕ್ಕಾ ಆಗಿದೆ.
ಇದನ್ನೂ ಓದಿ: Siddaramaiah Shopping: ನಂಗೆ ಇಂಥ ಪಂಚೆನೇ ಬೇಕು ಕಣಪ್ಪ, 30 ಪಂಚೆಗಳನ್ನು ಖರೀದಿಸಿದ ಸಿದ್ದರಾಮಯ್ಯ
10 ಲಕ್ಷ ಜನ ಸೇರಿಸಲು ಪ್ಲಾನ್
ಸಿದ್ದರಾಮೋತ್ಸವಕ್ಕೆ 10 ಲಕ್ಷ ಜನ ಸೇರಿಸಲು ಪ್ಲಾನ್ ಮಾಡಲಾಗಿದೆ. ಈ ವೇಳೆ ವಿಚಾರ ಸಂಕಿರಣ, ಸಿದ್ದರಾಮಯ್ಯ ಕುರಿತಾದ ಪುಸ್ತಕ ಬಿಡುಗಡೆ, ಸಿದ್ದರಾಮಯ್ಯ ಆಡಳಿತದ ಜನಪರ ಕಾರ್ಯಕ್ರಮಗಳ ಚರ್ಚಾಗೋಷ್ಠಿ ನಡೆಯಲಿದೆ.
ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಕಾರ್ಯಕ್ರಮ
3 ದಿನ ಬೃಹತ್ ಕಾರ್ಯಕ್ರಮ ನಡೆಯಲು ಯೋಜನೆ ರೂಪಿಸಲಾಗಿದೆ. ಸಿದ್ದರಾಮಯ್ಯ ಆಪ್ತರೂ ಆಗಿರುವ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸಿದ್ದರಾಮೋತ್ಸವಕ್ಕಾಗಿ ಸ್ವಾಗತ ಸಮಿತಿ ಸದ್ಯದಲ್ಲೆ ರಚನೆಯಾಗಲಿದ್ದು, ಎಚ್‌ಸಿ ಮಹದೇವಪ್ಪನವರೇ ಸ್ವಾಗತ ಸಮಿತಿ ಅಧ್ಯಕ್ಷರಾಗಲಿದ್ದಾರೆ.
ಗಣ್ಯಾತಿ ಗಣ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ
ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಜಾತಿ, ಜನಾಂಗದ ಸ್ವಾಮೀಜಿಗಳು, ಪ್ರಗತಿಪರರು, ಸಾಹಿತಿಗಳು, ಸಿದ್ದರಾಮಯ್ಯ ಒಡನಾಡಿ ರಾಜಕಾರಣಿಗಳು, ನಿವೃತ್ತ ನ್ಯಾಯಾಧೀಶರು, ವಕೀಲರು, ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳನ್ನು ಆಹ್ವಾನಿಸಲಾಗುತ್ತದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳ ಆಹ್ವಾನಿಸೋ ಬಗ್ಗೆ ಚರ್ಚೆ ನಡೆದಿದೆ.
ಸಿದ್ದರಾಮೋತ್ಸವ ಹಿಂದಿನ ಲೆಕ್ಕಚಾರಗಳೇನು?
ಈಗಾಗಲೇ ತಿಳಿಸಿದಂತೆ ಸಿದ್ದರಾಮೋತ್ಸವದ ಹಿಂದಿನ ಲೆಕ್ಕಾಚಾರ ಬೇರೆಯೇ ಇದೆ. ಕಾಂಗ್ರೆಸ್ ಒಳಗಿನ ವಿರೋಧಿಗಳು, ಹೈಕಮಾಂಡ್‌ಗೆ ಸಿದ್ದು ತಾಕತ್ ಪ್ರದರ್ಶಿಸುವುದು ಮುಖ್ಯ ಉದ್ದೇಶ. ಸಿದ್ದರಾಮಯ್ಯ ಅವರೇ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತ ನಾಯಕ, ಜನನಾಯಕ ಎಂದು ಸಂದೇಶ ರವಾನೆ ಮಾಡುವುದು ಇದರ ಉದ್ದೇಶ. ಈ ಮೂಲಕ ಸಿಎಂ ರೇಸ್ ಗಟ್ಟಿ ಮಾಡಿಕೊಳ್ಳುವುದು ಇದರ ಲೆಕ್ಕಾಚಾರ.
ಇದನ್ನೂ ಓದಿ: Chitradurga: ಮಹಾತ್ಮ ಗಾಂಧಿ ಹತ್ಯೆ ವೇಳೆ ಸಿಹಿ ಹಂಚಿದ್ದು ಯಾರು? ಸಿದ್ದು ಟ್ವೀಟ್ಗೆ ನಾರಾಯಣಸ್ವಾಮಿ ತಿರುಗೇಟು
ಬಿಜೆಪಿ, ಜೆಡಿಎಸ್‌ಗೂ ಸಂದೇಶ ರವಾನೆ
ಇನ್ನು ಬಿಜೆಪಿ ಹಾಗೂ ಜೆಡಿಎಸ್‌ಗೂ ಕೂಡ ಸಿದ್ದು ತಾಕತ್ ಪ್ರದರ್ಶನ ಮಾಡುವುದು ಇದರ ಉದ್ದೇಶ. ಇವೆಲ್ಲವುಗಳೊಂದಿಗೆ ಸಿದ್ದು ಪರ ಕಾರ್ಯಕರ್ತರು, ನಾಯಕರನ್ನು ಹುರಿದುಂಬಿಸಿ 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಅಣಿಯಾಗುವುದು ಮುಖ್ಯ ಧ್ಯೇಯ. ಅದರೊಂದಿಗೆ ರಾಜ್ಯದ ಜನತೆಗೆ ಸಿದ್ದರಾಮಯ್ಯ ಲೀಡರ್ ಎಂದು ಅಜೆಂಡಾ ಸೆಟ್ ಮಾಡುವುದು ಇದರ ಹಿಂದಿರುವ ಲೆಕ್ಕಾಚಾರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ