ಹುಬ್ಬಳ್ಳಿ: ಸಿಎಂ ಅಥವಾ ಯಾವುದಾದರೂ ಮಂತ್ರಿಗೆ (CM Or Miniser) ಲಂಚ (Bribe) ನೀಡಲು ಎಂಜಿನೀಯರ್ ವಿಧಾನಸೌಧಕ್ಕೆ (Vidhanasoudha) ಹೋಗಿರಬಹುದು ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ (Former CM Siddaramaiah) ಶಂಕೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಿಧಾನಸೌಧಕ್ಕೆ ಎಂಜಿನೀಯರ್ ಹಣ (Money) ತಂದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು. ಎಂಜಿನೀಯರ್ ಏಕೆ ಹಣ ತಂದಿದ್ದರು ಎಂದು ಪ್ರಶ್ನಿಸಿದರು. ಯಾರಾದ್ರೂ ಸುಖಾ ಸುಮ್ಮನೆ ಹಣ ತರ್ತಾರಾ? ಸಿಎಂ ಅಥವಾ ಯಾವುದಾದರೂ ಮಂತ್ರಿಗೆ ಲಂಚ ನೀಡಲು ಹೋದರೂ ಹೋಗಿರಬಹುದು. ಆ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು.
ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ತಪ್ಪು
ಪ್ರತಿ ಹಳ್ಳಿಯಲ್ಲಿ ರಾಮ ಹಾಗೂ ಆಂಜನೇಯ ಮಂದಿರಗಳಿವೆ. ನಾವು ಆ ಮಂದಿರಗಳನ್ನು ಕಟ್ಟಿಲ್ಲವೇ? ಆದರೆ ರಾಜಕೀಕರಣ ಮಾಡಬಾರದು. ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಧರ್ಮ ಹಾಗೂ ಜಾತಿ ಹೆಸರಲ್ಲಿ ರಾಜಕೀಯ ಮಾಡಿದರೇ ಅದು ತಪ್ಪು. ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮಾನವಾಗಿವೆ ಎಂದು ಹೇಳಿದರು.
ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾಗಳು ಭಾಗವಹಿಸಿಲ್ಲ. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಗಂಭೀರ ಸ್ವರೂಪದಲ್ಲಿತ್ತು. ಆರ್ಎಸ್ಎಸ್ ಸಂಸ್ಥಾಪಕರಾಗಲಿ, ಪದಾಧಿಕಾರಿಗಳಾಗಲಿ ಯಾರಾದರೂ ಅದರಲ್ಲಿ ಭಾಗಿಯಾಗಿದ್ದರಾ ಎಂದು ಪ್ರಶ್ನೆ ಮಾಡಿದರು.
ನಾಯಿ ಮರಿ ಹೇಳಿಕೆಗೆ ಸ್ಪಷ್ಟನೆ
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅವಹೇಳನ ಮಾಡಲೆಂದು ನಾಯಿ ಮರಿ ಎಂದು ಹೇಳಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಬಳಿ ಅನುದಾನ ಧೈರ್ಯವಾಗಿ ಕೇಳಿ ಎಂದು ಹಳ್ಳಿಯ ಭಾಷೆಯಲ್ಲಿ ಹಾಗೆ ಹೇಳಿದ್ದೇನೆ. ಹಾಗಾದರೆ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಾಹುಲಿ ಅನ್ನುತ್ತಾರೆ. ನನಗೆ ಟಗರು ಮತ್ತು ಹೌದು ಹುಲಿಯಾ ಅನ್ನುತ್ತಾರೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವೇದ ಮಹೋತ್ಸವ
ಗಂಡು ಮೆಟ್ಟಿನ ನಾಡಿನಲ್ಲಿ ವೇದ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ವೇದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ 125ನೇ ಚಿತ್ರವಾಗಿದ್ದು, ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ವೇದ ಮಹೋತ್ಸವ ಆಚರಿಸಲಾಯಿತು. ಅಭಿಮಾನಿಗಳ ಜೊತೆ ಸೇರಿ ಚಿತ್ರ ನೋಡಿದ ಶಿವಣ್ಣ ಅವರಿಗೆ ಹುಬ್ಬಳ್ಳಿಯ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಶಿವಣ್ಣ ಅಭಿಮಾನಿಗಳು ನಿರಾಸೆ
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ವೇದ ಚಿತ್ರ ಯಶಸ್ವಿ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ಶಿವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಣ್ಣ ಅಭಿಮಾನಿಗಳು ಶಿವರಾಜ್ ಕುಮಾರ್ ಅಗಮಿಸುತ್ತಿದ್ದಾರೆಂದು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಆದರೆ ನಿರಾಸೆಗೊಂಡ ಮರಳುವಂತೆ ಆಯಿತು.
ಹುಬ್ಬಳ್ಳಿಯಲ್ಲಿ ವೇದ ಚಿತ್ರ ಯಶಸ್ವಿ ಹಿನ್ನೆಲೆ, ಶಿವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ಶಿವರಾಜ್ಕುಮಾರ್ ಅಭಿಮಾನಿ ಬಳಗದಿಂದ ಶಿವಾನಂರ್ ಮುತ್ತಣ್ಣವರ್, ಹಾಗೂ ವಿಜಯಕುಮಾರ್ ಅಪ್ಪಾಜಿ ಅವರು ಮಾಧ್ಯಮ ಸುದ್ದಿಗೋಷ್ಠಿ ಮಾಡಿ ಇಂದು ಶಿವರಾಜ್ ಕುಮಾರ ಹುಬ್ಬಳ್ಳಿಗೆ ಆಗಮಿಸಿ ಶಿವ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದರು.
ಆದರೆ ಹುಬ್ಬಳ್ಳಿಗೆ ಆಗಮಿಸಿದ ಶಿವರಾಜ್ ಕುಮಾರ ಚಿತ್ರಮಂದಿರಕ್ಕೆ ಅಷ್ಟೇ ಭೇಟಿ ನೀಡಿ, ಶಿವ ಸಂಭ್ರಮದಲ್ಲಿ ಭಾಗಿಯಾಗದೇ ಹೋಗಿದ್ದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ