• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಡಿಕೆಶಿ ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

Siddaramaiah: ಡಿಕೆಶಿ ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ

ಮುಖ್ಯಮಂತ್ರಿಯೇ ಪ್ರೇರಣೆ ನೀಡುವ ಕೆಲಸ ಮಾಡಿದ್ರೆ ಏನಾಗುತ್ತೆ? ಆಕ್ಷನ್​​ಗೆ ರಿಯಾಕ್ಷನ್ ಇದ್ದೇ ಇರುತ್ತದೆ ಅಂದರೆ ಏನರ್ಥ? ಕೊಲೆ ಮಾಡಿದ್ರೆ ಮತ್ತೊಂದು ಕೊಲೆ ಮಾಡಬೇಕು ಅಂತ ಅರ್ಥನಾ ಎಂದು ಸಿಎಂ ಬೊಮ್ಮಾಯಿ ಅವರನ್ನ ಪ್ರಶ್ನೆ ಮಾಡಿದರು.

  • News18 Kannada
  • 2-MIN READ
  • Last Updated :
  • Mangalore, India
  • Share this:

    ಮಂಗಳೂರು: ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ (Mangaluru Airport) ಮಾತನಾಡಿದ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಹೇಳಿಕೆಯನ್ನು ಸಮರ್ಥಿಸಿಕೊಂಡರು. ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು (Cooker Blast Case) ರಾಜಕೀಯಕ್ಕೆ ಬಳಸಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅವರು ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ ಎಂದು ಪ್ರಶ್ನೆ ಮಾಡಿದರು. ಡಿಕೆ ಶಿವಕುಮಾರ್ ಹೇಳಿಕೆಯನ್ನು ಬಿಜೆಪಿಯವರು (BJP Leaders) ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಭಯೋತ್ಪಾದನೆ ಹತ್ತಿಕೆದ್ಯಾ? ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಿ ಎಂದು ಬಿಜೆಪಿ ಸರ್ಕಾರವನ್ನು ಆಗ್ರಹಿಸಿದರು.


    ಭಯೋತ್ಪಾದನೆಯನ್ನು ಹತ್ತಿಕ್ಕುವ ಬದಲಿ ಬರೀ ಜನರನ್ನ ಪ್ರಚೋದನೆ ಮಾಡಿ, ಭಾವನಾತ್ಮಕ ವಿಚಾರ ಮಾತನಾಡೋದಲ್ಲ. ನೈತಿಕ ಪೊಲೀಸ್​ಗಿರಿ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಮುಖ್ಯಮಂತ್ರಿಯೇ ನೈತಿಕ ಪೊಲೀಸ್​ಗಿರಿ ಪ್ರೇರೇಪಿಸುವ ಕೆಲಸ ಮಾಡ್ತಿದಾರೆ ಎಂದು ಆರೋಪಿಸಿದರು.


    ಮುಖ್ಯಮಂತ್ರಿಗೆ ಕಾನೂನು ಗೊತ್ತಿದ್ಯಾ?


    ಎರಡು ತಿಂಗಳಲ್ಲಿ ಸುಮಾರು ಏಳೆಂಟು ನೈತಿಕ ಪೊಲೀಸ್​ಗಿರಿ ಪ್ರಕರಣಗಳು ವರದಿಯಾಗಿವೆ. ಇದನ್ನ ಖಂಡಿಸ್ತೇನೆ ಹಾಗೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗೆ ಕಾನೂನು ಗೊತ್ತಿದ್ಯಾ ಗೊತ್ತಿಲ್ಲ, ಅವರು ಹೇಳಿದ್ರು ಅಂತ ಮಾಡ್ತಾರೆ. ಸಂವಿಧಾನ ಮತ್ತು ಐಪಿಸಿಯಲ್ಲಿ ನೈತಿಕ ಪೊಲೀಸ್​ಗಿರಿಗೆ ಅವಕಾಶ ಇದೆಯಾ ಎಂದು ಪ್ರಶ್ನೆ ಮಾಡಿದರು.


    ಪೊಲೀಸ್ ಇರೋದು ಕಾನೂನು ಸುವ್ಯವಸ್ಥೆ ಕಾಪಾಡಲು. ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡೋದು ಖಂಡನೀಯ. ಸರ್ಕಾರ ನೈತಿಕ ಪೊಲೀಸ್​ಗಿರಿಗೆ ಯಾವುದೇ ಕಾರಣಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.


    ಕೊಲೆಗೆ ಮತ್ತೊಂದು ಕೊಲೆನಾ?


    ಮುಖ್ಯಮಂತ್ರಿಯೇ ಪ್ರೇರಣೆ ನೀಡುವ ಕೆಲಸ ಮಾಡಿದ್ರೆ ಏನಾಗುತ್ತೆ? ಆಕ್ಷನ್​​ಗೆ ರಿಯಾಕ್ಷನ್ ಇದ್ದೇ ಇರುತ್ತದೆ ಅಂದರೆ ಏನರ್ಥ? ಕೊಲೆ ಮಾಡಿದ್ರೆ ಮತ್ತೊಂದು ಕೊಲೆ ಮಾಡಬೇಕು ಅಂತ ಅರ್ಥನಾ ಎಂದು ಸಿಎಂ ಬೊಮ್ಮಾಯಿ ಅವರನ್ನ ಪ್ರಶ್ನೆ ಮಾಡಿದರು.


    ಶಾರೀಕ್​ ಬೆಂಗಳೂರಿಗೆ ಶಿಫ್ಟ್


    ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್​ನನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ರಾತ್ರಿಯೇ ಮಂಗಳೂರು ಆಸ್ಪತ್ರೆಯಿಂದ, ವಿಕ್ಟೋರಿಯಾ ಅಸ್ಪತ್ರೆಗೆ ಬರ್ನ್ ವಾರ್ಡ್​​ಗೆ ಕರೆತರಲಾಗಿದೆ. ಚಿಕಿತ್ಸೆ ಬಳಿಕ ಕಸ್ಟಡಿಗೆ ಪಡೆದು NIA ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಅದಕ್ಕಾಗಿ ವಿವಿ ಪುರಂ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದು, ಬರ್ನ್ ವಾರ್ಡ್​ಗೆ ಬರುವ ಪ್ರತಿಯೊಬ್ಬರ ತಪಾಸಣೆ ಮಾಡ್ತಾರೆ.


    ಬೆಂಗಳೂರಲ್ಲಿ ಕೆಲ ದಿನಗಳ ಕಾಲ ಶಾರೀಕ್ ಓಡಾಡಿದ್ದ. ಅತ್ತೆ ಮನೆಯಲ್ಲೂ ಇದ್ದ. ಬೆಂಗಳೂರಲ್ಲೇ ಒಂದು ಹುಡುಗಿ ಜೊತೆ ಲವ್​ನ್ನೂ ಮಾಡಿ ಓಡಾಡಿದ್ದ. ಹೀಗೆ ಆನೇಕ ವಿಚಾರಗಳ ಬಗ್ಗೆ ಎನ್​​ಐಎ ಶಾರೀಕ್ ವಿಚಾರಣೆ ಮಾಡಲಿದೆ.


    PSI ಆಡಿಯೋ ಬಾಂಬ್ ಸ್ಫೋಟ


    PSI ಅಕ್ರಮದ ತನಿಖೆ ಬಗ್ಗೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಾವು ಸಾಕ್ಷ್ಯ ಕೊಟ್ರೂ ನೀವು ತನಿಖೆ ಮಾಡ್ತಿಲ್ಲ. ಜತೆಗೆ ಆಡಿಯೋದಲ್ಲಿ ಪ್ರಸ್ತಾಪವಾಗಿರೋ ಮೂವರು ಎಂಎಲ್ಎಗಳು ಯಾರು? ಅವರು ಬಿಜೆಪಿಯವರಾ? ಜೆಡಿಎಸ್​ನವರಾ? ಕಾಂಗ್ರೆಸ್​ನವರಾ? ಯಾಕೆ ಆ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರಗ ಜ್ಞಾನೇಂದ್ರ ಅವರನ್ನ ಪ್ರಶ್ನೆ ಮಾಡಿದ್ದಾರೆ. ಯಾಕೆ ಆ ಮೂವರು ಶಾಸಕರನ್ನ ವಿಚಾರಣೆಗೊಳಪಡಿಸಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.


    ಇದನ್ನೂ ಓದಿ: DK Shivakumar: ಕುಕ್ಕರ್ ಬಾಂಬ್ ಬ್ಲಾಸ್ಟ್ ಏನು ಮುಂಬೈ ದಾಳಿ, ಪುಲ್ವಾಮಾ ರೀತಿಯ ಘಟನೆಯಾ? ಡಿಕೆ ಶಿವಕುಮಾರ್ ಬೇಜವಾಬ್ದಾರಿ ಹೇಳಿಕೆ


    ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಮಹಾಂತೇಶ್ ಪಾಟೀಲ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಜಾಮೀನಿನ ‌ಮೇಲೆ ಹೊಲರಬಂದ ಮಹಾಂತೇಶ್ ಪಾಟೀಲ್​​​ರನ್ನ ಕಾಂಗ್ರೆಸ್‌ನ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್‌ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ರಾತ್ರಿ ಮಹಾಂತೇಶ್ ಪಾಟೀಲ್ ಮನೆಗೆ ತೆರಳಿ ಸನ್ಮಾನಿಸಿ ಸಿಹಿ ಕೂಡ ತಿನ್ನಿಸಿದ್ದಾರೆ.

    Published by:Mahmadrafik K
    First published: