• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಬಿಜೆಪಿಯವರು ಯಡಿಯೂರಪ್ಪ ಅವರನ್ನೇ ಪಂಚರ್ ಮಾಡಿದ್ದಾರೆ; ಸಿದ್ದರಾಮಯ್ಯ

Siddaramaiah: ಬಿಜೆಪಿಯವರು ಯಡಿಯೂರಪ್ಪ ಅವರನ್ನೇ ಪಂಚರ್ ಮಾಡಿದ್ದಾರೆ; ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಚಾಮುಂಡೇಶ್ವರಿಯಲ್ಲಿ ನನನ್ನ ಸೋಲಿಸಲು ಬಹಳ ಪ್ರಯತ್ನ ಮಾಡಿದ್ರು. ಆದರೆ ಬಾದಾಮಿಯಲ್ಲಿ ಜನ ನನ್ನನ್ನ ಬಹಳ ಪ್ರೀತಿಯಿಂದ ಸ್ವೀಕರಿಸಿದರು

  • Share this:

ಕಲಬುರಗಿ: ಕಾಂಗ್ರೆಸ್ ಯಾತ್ರೆಯ ಬಸ್ ಪಂಕ್ಚರ್ ಆಗಿದೆ ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕಲಬುರಗಿಯಲ್ಲಿ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಯಡಿಯೂರಪ್ಪ ಅವರನ್ನೇ ಪಂಚರ್ ಮಾಡಿದಾರೆ. ಅದಕ್ಕಾಗಿ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ತಿರುಗೇಟು ನೀಡಿದರು. ಬಿಎಸ್‌ವೈ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಅನುಕಂಪವಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ (Congress) ನೂರಕ್ಕೆ ನೂರರಷ್ಟು ಈ ಬಾರಿ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸರ್ಕಾರದ (BJP Government) ವಿರುದ್ಧ 40% ಗಂಭೀರ ಆರೋಪವಿದೆ. ಬಿಜೆಪಿಯ ವಚನಭ್ರಷ್ಟ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದ್ದರಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಚಾಮುಂಡೇಶ್ವರಿಯಲ್ಲಿ ನನನ್ನ ಸೋಲಿಸಲು ಬಹಳ ಪ್ರಯತ್ನ ಮಾಡಿದ್ರು. ಆದರೆ ಬಾದಾಮಿಯಲ್ಲಿ ಜನ ನನ್ನನ್ನ ಬಹಳ ಪ್ರೀತಿಯಿಂದ ಸ್ವೀಕರಿಸಿದರು. ಕ್ಷೇತ್ರ ಬಿಡಬೇಡಿ, ನಿಮಗೆ ಓಡಾಡೋಕೆ ಕಷ್ಟವಾದ್ರೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಹೆಲಿಕ್ಯಾಪ್ಟರ್ ಮಾಡುವುದಾಗಿ ಬದಾಮಿ ಜನ ಹೇಳಿದ್ದರು. ಇಂತಹ ಪ್ರೀತಿ ಯಾರಾದರೂ ಕೊಡ್ತಾರೆನ್ರಿ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.


ಸ್ಪರ್ಧೆಯನ್ನು ಹೈಕಮಾಂಡ್ ನಿರ್ಧರಿಸುತ್ತೆ


ಇದೇ ವೇಳೆ ಯತೀಂದ್ರ (Yatheendra Siddaramaiah) ಸರ್ವೇ ಮಾಡಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂತಹ ಯಾವುದೇ ಸರ್ವೆ ನಡೆದಿಲ್ಲ, ಅಂತೆಕಂತೆಗಳಿಗೆ ಉತ್ತರಿಸಲ್ಲ. ನಾನು ಕೋಲಾರದಲ್ಲಿ (kolar) ಸ್ಪರ್ಧಿಸಿದರೂ 200% ಗೆಲ್ಲುತ್ತೇನೆ. ಆದರೆ ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕು ಅನ್ನೋದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.


Opposition Leader Siddaramaiah Slams to Bjp govt and bjp leaders
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ


ಶೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಚುನಾವಣೆಗೆ ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಟಿಕೆಟ್ ಹಂಚಿಕೆ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರ ನಾಯಕರು‌ ಕಮಿಟಿ ಮಾಡ್ತಾರೆ. ಆದಷ್ಟು ಬೇಗ ಸ್ಕ್ರೀನಿಂಗ್ ಕಮಿಟಿ‌ ಮಾಡಲು ಹೇಳಿದ್ದೇವೆ. ಅತಿ ಶೀಘ್ರದಲ್ಲಿ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ಸಂಸದ ಡಿಕೆ ಸುರೇಶ್ (MP DK Suresh) ಹೇಳಿದರು.


ಬಿಜೆಪಿ ಜನರನ್ನು ಭ್ರಮೆಯಲ್ಲಿ ಇಟ್ಟಿದ್ದಾರೆ. ಕೇವಲ ಪ್ರಚಾರದಲ್ಲಿ ಇಟ್ಟಿದ್ರು, ಜನರು ಕೂಡ ಬದಲಾಗಿದ್ದಾರೆ. ಈ ಸರ್ಕಾರ ತೊಲಗಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಕೇಂದ್ರ ನಾಯಕರು ಸರ್ವೆ ಮಾಡಿಸಿದ್ದಾರೆ ಎಂದರು.
ಸಿಟಿ ರವಿ ವಿರುದ್ಧ ಡಿಕೆ ಸುರೇಶ್ ಕಿಡಿ


ಸಿ.ಟಿ.ರವಿ (CT Ravi) ಹೇಳಿಕೆ ನೋಡಿದ್ರೆ ಕೋಮು ಗಲಭೆ ಮುನ್ಸೂಚನೆ ನೀಡಿದ್ದಾರೆ. ಕರಾವಳಿ ಭಗಾದಲ್ಲಿ ಅಶಾಂತಿ‌ ಮೂಡಿಸಲು‌ಹೊರಟಿದ್ದಾರೆ. ಪಾಕಿಸ್ತಾನ ಬಗ್ಗೆ ಹೇಳಿಕೆ ನೀಡಿದ್ದಾರೆ. ಪದೇ ಪದೇ ಪಾಕಿಸ್ತಾನ ಎಳೆದು ತರುತ್ತಿದ್ದಾರೆ. ಹಾಗಾಗಿ ಸಿ.ಟಿ.ರವಿ ಮೇಲೆ ಕ್ರಮವಹಿಸಬೇಕು. ಬಿಜೆಪಿ ನಾಯಕರು‌ ನೀಚರು ಯಾವ ಹಂತಕ್ಕೆ ಬೇಕಾದ್ರು ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.


ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಭ್ರಷ್ಟಾಚಾರ ವ್ಯವಸ್ಥೆ ಅವರಿಗೆ ಕಾಣಿಸ್ತಾ ಇಲ್ವಾ? ಪದೇ ಪದೇ ಮೋದಿ, ಅಮಿತ್ ಶಾ ಬರುತ್ತಿದ್ದಾರೆ. ಈಗಾಗಲೇ ಹಗರಣಗಳು ಹೊರಗೆ ಬಂದಿವೆ. ಪಾಕಿಸ್ತಾನದ ಹೆಸರಲ್ಲಿ ರಾಜಕೀಯ ‌ಮಾಡಬೇಡಿ. ಡಿ ಕೆ ಶಿವಕುಮಾರ್ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದು ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು.


ಇದನ್ನೂ ಓದಿ: Helicopter Factory In Tumkur: ನಮ್ಮ ತುಮಕೂರಿನಲ್ಲಿ ಭಾರತದಲ್ಲೇ ಅತಿ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆ!


ಪ್ರಧಾನಿ ಉತ್ತರ ಕೊಡಲಿ


ಬಿಜೆಪಿ ಅವರು ಆಪರೇಷನ್ ವಿಚಾರಕ್ಕೆ ಫೇಮಸ್ ಆಗಿದ್ದಾರೆ. ಇವತ್ತು ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಅದಾನಿಗೆ ಬೆಂಬಲ ಕೇಂದ್ರ ಸರ್ಕಾರ ಕೊಟ್ರು. ಆರ್ಥಿಕ ಹೊಡೆತ ಬೀಳುತ್ತಿದೆ. ಹತ್ತು ಲಕ್ಷ ಕೋಟಿ ರೂಪಾಯಿ ನಷ್ಟ ಆಗಿದೆ. ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂದು ಡಿಕೆ ಸುರೇಶ್ ಆಗ್ರಹಿಸಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು