HOME » NEWS » State » SIDDARAMAIAH PLAY CHESS WITH GRANDSON PHOTO VIRAL RH

ಚದುರಂಗದಲ್ಲೂ ಸಿದ್ದರಾಮಯ್ಯ ಚತುರರು; ಮೊಮ್ಮಗನೊಂದಿಗೆ ಚೆಸ್​ ಆಡುತ್ತಿರುವ ಫೋಟೋ ವೈರಲ್!

ಮುಂದೊಂದು ದಿನ ಮೊಮ್ಮಗ ಚೆಸ್ ನಲ್ಲಿ ಪ್ರಾವೀಣ್ಯನಾಗುತ್ತಾನೆ ಅನ್ನೋ ಆಸೆ ಮಾಜಿ ಸಿಎಂಗೆ ಬಂದಿದೆಯಂತೆ. ಅಲ್ಲದೆ ತನ್ನಂತೆಯೇ ರಾಜಕಾರಣಕ್ಕೂ‌ ಬರ್ತಾನೆ ಅನ್ನೋ ಇರಾದೆ ಈಗಲೇ ಸಿಕ್ಕಿದೆಯಂತೆ. ಇದಕ್ಕೆ ಇನ್ನೂ ಸಮಯ ಬೇಕಿದೆ. ಆದರೆ ಮೊಮ್ಮಗ ಹಾಗೂ ತಾತನ ಈ ಚೆಸ್ ಆಟ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿರೋದಂತು ಸತ್ಯ.

news18-kannada
Updated:August 2, 2020, 2:29 PM IST
ಚದುರಂಗದಲ್ಲೂ ಸಿದ್ದರಾಮಯ್ಯ ಚತುರರು; ಮೊಮ್ಮಗನೊಂದಿಗೆ ಚೆಸ್​ ಆಡುತ್ತಿರುವ ಫೋಟೋ ವೈರಲ್!
ಮೊಮ್ಮಗನೊಂದಿಗೆ ಚೆಸ್ ಆಡುತ್ತಿರುವ ಸಿದ್ದರಾಮಯ್ಯ.
  • Share this:
ಬೆಂಗಳೂರು; ರಾಜಕಾರಣ ಅಂದರೆ ಅದೊಂದು ಅಖಾಡದ ಸಂಘರ್ಷವಷ್ಟೇ ಅಲ್ಲ, ಮೈಂಡ್ ಗೇಮ್ ಕೂಡ ಹೌದು. ರಾಜಕಾರಣವನ್ನ ಚದುರಂಗದಾಟಕ್ಕೆ ಹೋಲಿಸೋದು ಅದಕ್ಕೇ. ಇಲ್ಲಿ ನಾವ್ಯಾಕೆ ಈ ಚೆಸ್ ಗೇಮ್ ಬಗ್ಗೆ ಮಾತನಾಡ್ತಿದ್ದೀವಿ ಅಂದರೆ ಮಾಜಿ ಸಿಎಂ ಹಾಗೂ ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಇದರ ಪಂಟರ್.S

ರಾಜಕೀಯದಲ್ಲಿ ಹೇಗೆ ವಿರೋಧಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾರೋ ಹಾಗೆ ಚೆಸ್ ನಲ್ಲಿ ಕೂಡ ಪಾರಂಗತರು. ಯಾಕಂದರೆ ಅವರು ಮೈಸೂರಿಗೆ ತೆರಳಿದಾಗಲೆಲ್ಲ ತಮ್ಮ ಮೊಮ್ಮಗನ ಜೊತೆ ಚೆಸ್ ಆಡುತ್ತಾರಂತೆ. ಮೈಸೂರಿನ ತಮ್ಮ‌ತೋಟದ ಮನೆಯಲ್ಲಿ ಹಿರಿಯ ಪುತ್ರ ದಿವಂಗತ ರಾಕೇಶ್ ಮಗ ಧವನ್ ಜೊತೆ ಚೆಸ್ ಆಡೋದು ಅಂದರೆ ಅವರಿಗೆ ತುಂಬಾ ಪ್ರೀತಿಯಂತೆ.

ಇದನ್ನು ಓದಿ: ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರಾಸಕ್ತಿ - ಕೊರೋನಾ ನೆಪದಲ್ಲಿ ಲೂಟಿಯಲ್ಲಿ ಆಸಕ್ತಿ ; ಪ್ರಿಯಾಂಕ್ ಖರ್ಗೆ ಕಿಡಿ

ತಾತ ಮೊಮ್ಮಗ ಚೆಸ್ ಆಡೋಕೆ‌ ಕುಳಿತರೆ ಅದನ್ನು ನೋಡೋದೇ ಒಂದು ಚೆಂದವಂತೆ ಕುಟುಂಬಸ್ಥರಿಗೆ. ಮೊಮ್ಮಗನ ಚೆಸ್ ಪ್ರಾವೀಣ್ಯಕ್ಕೆ ಸ್ವತಃ ಸಿದ್ದರಾಮಯ್ಯ ಅವರೇ ಆಶ್ಚರ್ಯ ಪಟ್ಟಿದ್ದಾರಂತೆ. ಮುಂದೊಂದು ದಿನ ಮೊಮ್ಮಗ ಚೆಸ್ ನಲ್ಲಿ ಪ್ರಾವೀಣ್ಯನಾಗುತ್ತಾನೆ ಅನ್ನೋ ಆಸೆ ಮಾಜಿ ಸಿಎಂಗೆ ಬಂದಿದೆಯಂತೆ. ಅಲ್ಲದೆ ತನ್ನಂತೆಯೇ ರಾಜಕಾರಣಕ್ಕೂ‌ ಬರ್ತಾನೆ ಅನ್ನೋ ಇರಾದೆ ಈಗಲೇ ಸಿಕ್ಕಿದೆಯಂತೆ. ಇದಕ್ಕೆ ಇನ್ನೂ ಸಮಯ ಬೇಕಿದೆ. ಆದರೆ ಮೊಮ್ಮಗ ಹಾಗೂ ತಾತನ ಈ ಚೆಸ್ ಆಟ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿರೋದಂತು ಸತ್ಯ.
Published by: HR Ramesh
First published: August 2, 2020, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories