ಎಂಟಿಬಿ ವಿರುದ್ಧ ಗೆಲುವಿಗೆ ಕೈ ತಂತ್ರ; ಬಿಜೆಪಿಯ ಶರತ್ ಬಚ್ಚೇಗೌಡ ಸೆಳೆಯಲು ಮುಂದಾದ ಕಾಂಗ್ರೆಸ್ ?

 ಎಂಟಿಬಿ ನಾಗರಾಜ್​ ಅವರ ಭವಿಷ್ಯ ಸುಪ್ರೀಂ ಕೋರ್ಟ್​ ಅಂಗಳದಲ್ಲಿದ್ದು, ಅವರಿಗೆ ಟಿಕೆಟ್​ ಸಿಗದಿದ್ದರೂ,  ಎಂಟಿಬಿ ಅವರ ಮಗ ಬಿಜೆಪಿಯಿಂದ ಟಿಕೆಟ್​ ಪಡೆಯುವ ಸಾಧ್ಯತೆ ಹೆಚ್ಚಿದೆ. ಉಪಚುನಾವಣೆಯಲ್ಲಿ ಏನಾದರೂ ಎಂಟಿಬಿ ನಾಗರಾಜ್​ ಅಥವಾ ಅವರ ಮಗ ಬಿಜೆಪಿ ಟಿಕೆಟ್​ ನೀಡಿದರೆ, ತಮ್ಮ ರಾಜಕೀಯ ಎದುರಾಳಿ ಪರ ಶರತ್​ ಬಚ್ಚೇಗೌಡ ಪ್ರಚಾರ ಮಾಡುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆ ಶರತ್​ ಬಚ್ಚೇಗೌಡ ಸೆಳೆಯಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ.

Seema.R | news18-kannada
Updated:September 23, 2019, 6:53 PM IST
ಎಂಟಿಬಿ ವಿರುದ್ಧ ಗೆಲುವಿಗೆ ಕೈ ತಂತ್ರ; ಬಿಜೆಪಿಯ ಶರತ್ ಬಚ್ಚೇಗೌಡ ಸೆಳೆಯಲು ಮುಂದಾದ ಕಾಂಗ್ರೆಸ್ ?
ಶರತ್​ ಬಚ್ಚೇಗೌಡ
  • Share this:
ಬೆಂಗಳೂರು (ಸೆ.23): ಉಪಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಚುನಾವಣಾ ಗೆಲುವಿಗೆ ರಣತಂತ್ರ ರೂಪಿಸಿರುವ ಕಾಂಗ್ರೆಸ್​ ಈಗ ಆಪರೇಷನ್​ ಹಸ್ತಕ್ಕೆ ಮುಂದಾಗಿದೆ.  ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಅವರ ಹೊಸಕೋಟೆ ಕ್ಷೇತ್ರವನ್ನು ಸಿದ್ದರಾಮಯ್ಯ ಸವಾಲು ಹಾಕಿ ಸ್ವೀಕರಿಸಿದ್ದು, ಇಲ್ಲಿ ಹೇಗಾದರೂ ಗೆಲುವು ಸಾಧಿಸಬೇಕು ಎಂಬ ಹಠಕ್ಕೆ  ಮುಂದಾಗಿದ್ದಾರೆ. ಇದಕ್ಕಾಗಿ ಈಗ ಬಿಜೆಪಿ ಅನುಸರಿಸಿದ ತಂತ್ರಕ್ಕೆ ಕಾಂಗ್ರೆಸ್​ ಕೂಡ ಮುಂದಾಗಿದೆ. 

ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರನ್ನು ಮೈತ್ರಿ ಸರ್ಕಾರದ ನಾಯಕರು ಎಷ್ಟೇ ಮನವೊಲಿಸಿದರು ಕಡೆ ಕ್ಷಣದಲ್ಲಿ ಅವರು ಕೈ ಕೊಟ್ಟಿದ್ದರು. ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ಎಂಟಿಬಿ ಮನೆ ಬಾಗಿಲಿಗೆ ತೆರಳಿದರೂ ಅವರು ಉಲ್ಟಾ ಹೊಡೆದಿದ್ದರು. ಅಲ್ಲದೇ, ಸಿದ್ದರಾಮಯ್ಯ ಮಗನ ಸಾವಿಗೆ ಭೈರತಿ ಸುರೇಶ್​​​ ಕಾರಣ ಎಂದು ಸುದ್ದಿ ಸ್ಪೋಟಿಸುವ ಮೂಲಕ ಸಾವಿನ ರಾಜಕೀಯಕ್ಕೆ ಎಂಟಿಬಿ ಮುಂದಾಗಿದ್ದರು.

ಈ ಹಿನ್ನೆಲೆ ಎಂಟಿಬಿಯನ್ನು ಸೋಲಿಸಬೇಕು ಎಂಬ ಹಠಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಹೊಸಕೋಟೆಯಲ್ಲಿ ಈಗಾಗಲೇ ಸಾಮ್ರಾಜ್ಯ ಕಟ್ಟಿರುವ ಬಿಎನ್​​ ಬಚ್ಚೇಗೌಡ ಮಗ ಶರತ್​ ಬಚ್ಚೇಗೌಡ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಆಪರೇಷನ್​ ಕಮಲ ನಡೆಸಲು ಸಜ್ಜಾಗಿದ್ದು, ಆ ಮೂಲಕ ಉಪಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎನ್ನಲಾಗಿದೆ

ಎಂಟಿ ಬಿ ನಾಗರಾಜ್​ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದ ಬಿಜೆಪಿ ನಾಯಕ ಶರತ್​ ಬಚ್ಚೇಗೌಡ ಕಡಿಮೆ ಅಂತರದಿಂದ ಗೆದ್ದಿದ್ದರು. ಎಂಟಿಬಿ ನಾಗರಾಜ್​ ಅವರ ಭವಿಷ್ಯ ಸುಪ್ರೀಂ ಕೋರ್ಟ್​ ಅಂಗಳದಲ್ಲಿದ್ದು, ಅವರಿಗೆ ಟಿಕೆಟ್​ ಸಿಗದಿದ್ದರೂ,  ಎಂಟಿಬಿ ಅವರ ಮಗ ಬಿಜೆಪಿಯಿಂದ ಟಿಕೆಟ್​ ಪಡೆಯುವ ಸಾಧ್ಯತೆ ಹೆಚ್ಚಿದೆ.
ಉಪಚುನಾವಣೆಯಲ್ಲಿ ಏನಾದರೂ ಎಂಟಿಬಿ ನಾಗರಾಜ್​ ಅಥವಾ ಅವರ ಮಗ ಬಿಜೆಪಿ ಟಿಕೆಟ್​ ನೀಡಿದರೆ, ತಮ್ಮ ರಾಜಕೀಯ ಎದುರಾಳಿ ಪರ ಶರತ್​ ಬಚ್ಚೇಗೌಡ ಪ್ರಚಾರ ಮಾಡುವುದು ಅನಿವಾರ್ಯವಾಗುತ್ತದೆ.

ಇದನ್ನು ಓದಿ : ಉಪಚುನಾವಣೆ, ಮೇಯರ್​ ಚುನಾವಣೆ ಗೆಲುವಿನ ರಣತಂತ್ರಕ್ಕೆ ಕಾಂಗ್ರೆಸ್​ ಮುಖಂಡರ ಸಭೆ

ಈ ಹಿನ್ನೆಲೆಯಲ್ಲಿ ಶರತ್​ ಬಚ್ಚೇಗೌಡಗೆ ಕಾಂಗ್ರೆಸ್​ ಟಿಕೆಟ್​ ನೀಡಿದರೆ.  ಅವರು ಸ್ವೀಕರಿಸುವ ಸಾಧ್ಯತೆ ಇದೆ. ಶರತ್​ ಬಚ್ಚೇಗೌಡ ಕಾಂಗ್ರೆಸ್​ ಪರ ನಿಂತರೇ ಒಕ್ಕಲಿಗ, ಅಲ್ಪಸಂಖ್ಯಾತ, ಹಿಂದುಳಿದ ಮತಗಳು ತಮಗೆ ಬರುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದು.ಒಂದು ವೇಳೆ ಈ ಅವಕಾಶವನ್ನು ಶರತ್​ ಬಜ್ಜೇಗೌಡ ನಿರಾಕರಿಸಿದರೆ, ಅವರ ಬದಲು ಸಿದ್ದರಾಮಯ್ಯ ಆಪ್ತ  ಶಾಸಕ  ಭೈರತಿ ಸುರೇಶ  ಅವರ ಹೆಂಡತಿ ಪದ್ಮಾವತಿಗೆ ಟಿಕೆಟ್​ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

(ವರದಿ : ಶ್ರೀನಿವಾಸ್​ ಹಳಕಟ್ಟಿ) 
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading