Pogaru Audio Launch: ದಾವಣಗೆರೆಯಲ್ಲಿ ಪೊಗರು ಆಡಿಯೋ ಲಾಂಚ್: ಪೊಗರು ಶಿವನಿಗೆ ಜೊತೆಯಾದ ಟಗರು..!

ನಿನ್ನೆ ಸಂಜೆ ದಾವಣಗೆರೆಯಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರತಂಡದ ಜೊತೆಗೆ ಧ್ರುವ ಸರ್ಜಾ ಅವರ ಕುಟುಂಬ ಹಾಗೂ ಅರ್ಜುನ್​ ಸರ್ಜಾ ಸಹ ಭಾಗಿಯಾಗಿದ್ದರು. ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮದಲ್ಲಿ ಚಿತ್ರದ ಕರಾಬು ಬಾಸು ಕರಾಬು ಹಾಡು ಹಾಡುತ್ತಿದ್ದಂತೆಯೇ ನೆರೆದಿದ್ದ ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ​ಹಾಕಿದರು.

ಪೊಗರು ಆಡಿಯೋ ರಿಲೀಸ್​ನಲ್ಲಿ ಸಿದ್ಧರಾಮಯ್ಯ

ಪೊಗರು ಆಡಿಯೋ ರಿಲೀಸ್​ನಲ್ಲಿ ಸಿದ್ಧರಾಮಯ್ಯ

  • Share this:
ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಿತು. ಕಿಕ್ಕಿರಿದು ತುಂಬಿದ್ದ ಸಾವಿರಾರು ಮಂದಿ ಅಭಿಮಾನಿಗಳ ನಡುವೆ ಚಿತ್ರತಂಡ ಆಡಿಯೋ ಲಾಂಚ್ ಮಾಡಲಾಯಿತು. ಪೊಗರು  ಚಿತ್ರದ ಹಾಡು ಕೇಳಿದ  ಧ್ರುವ ಸರ್ಜಾ ಅಭಿಮಾನಿಗಳು ಭರ್ಜರಿ ಸ್ಟೆಪ್​ ಹಾಕಿದ್ದು ವಿಶೇಷ. ನಗರದ ಹೈಸ್ಕೂಲ್ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಧ್ರುವ  ಅವರನ್ನು ಕಂಡು ಹುಚ್ಚೆದ್ದು ಖುಷಿಯಿಂದ ಕೂಗಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೆರೆದಿದ್ದ ಧ್ರುವ ಸರ್ಜಾ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕಿ, ಕುಣಿದು ಕುಪ್ಪಳಿಸಿದ್ರು. ನಂದ ಕಿಶೋರ್​ ನಿರ್ದೇಶನದ ಈ ಸಿನಿಮಾ ಇದೇ ತಿಂಗಳು 19ಕ್ಕೆ ರಿಲೀಸ್ ಆಗಲಿದೆ. 

ನಿನ್ನೆ ಸಂಜೆ ದಾವಣಗೆರೆಯಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರತಂಡದ ಜೊತೆಗೆ ಧ್ರುವ ಸರ್ಜಾ ಅವರ ಕುಟುಂಬ ಹಾಗೂ ಅರ್ಜುನ್​ ಸರ್ಜಾ ಸಹ ಭಾಗಿಯಾಗಿದ್ದರು. ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮದಲ್ಲಿ ಚಿತ್ರದ ಕರಾಬು ಬಾಸು ಕರಾಬು ಹಾಡು ಹಾಡುತ್ತಿದ್ದಂತೆಯೇ ನೆರೆದಿದ್ದ ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ​ಹಾಕಿದರು.

dhruva sarja, Davanagere, Pogaru, Pogaru Audio Launch, Sandalwood, Nanda Kishore, Pogaru movie, Pogaru movie song, Dhruva Sarja, Pogaru movie title track, ಪೊಗರು ಸಿನಿಮಾ, ಪೊಗರು ಸಿನಿಮಾ ಹಾಡು, ಧ್ರುವ ಸರ್ಜಾ, ಪೊಗರು ಸಿನಿಮಾ ಬಿಡುಗಡೆ
ದಾವಣಗೆರೆಯಲ್ಲಿ ಪೊಗರು ಆಡಿಯೋ ಬಿಡುಗಡೆ ಕಾರ್ಯಕ್ರಮ


ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಅರ್ಜುನ್ ಸರ್ಜಾ, ರಾಘವೇಂದ್ರ ರಾಜಕುಮಾರ್ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ನಿರ್ಮಾಪಕ ಬಿಕೆ ಗಂಗಾಧರ್,ನಿರ್ದೇಶಕ ನಂದಕಿಶೋರ್  ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆಂದೇ ಮಾಡಿದ ವಿಶೇಷ ಫೋಟೋಶೂಟ್​ನಲ್ಲಿ ಮಹೇಶ್ ಬಾಬು ಮಗಳು ಸಿತಾರಾ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಚಿತ್ರ ತಂಡಕ್ಕೆ ಶುಭ ಕೋರಿದರು. ಧ್ರವ ಸರ್ಜಾ ಅವರ ತಾತ, ಮಾವ ಹಾಗೂ ಡಾ.ರಾಜ್​ಕುಮಾರ್​ ಅವರಂತೆ ಉನ್ನತ ಮಟ್ಟಕ್ಕೇರಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.dhruva sarja, Davanagere, Pogaru, Pogaru Audio Launch, Sandalwood, Nanda Kishore, Pogaru movie, Pogaru movie song, Dhruva Sarja, Pogaru movie title track, ಪೊಗರು ಸಿನಿಮಾ, ಪೊಗರು ಸಿನಿಮಾ ಹಾಡು, ಧ್ರುವ ಸರ್ಜಾ, ಪೊಗರು ಸಿನಿಮಾ ಬಿಡುಗಡೆ
ಪೊಗರು ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ


ಇನ್ನು, ಕಾರ್ಯಕ್ರಮ ಆರಂಭವಾಗುವ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಧ್ರುವ ಅಭಿಮಾನಿಗಳು, ಆವರಣದ ಒಳ ಪ್ರವೇಶಿಸಲು  ಹೋಗಿ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಕಿಕ್ಕಿರಿದು ತುಂಬಿದ್ದ ಜನರನ್ನ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯ್ತು. ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ಸಹ ನಡೆಸಿದರು.

ಇದನ್ನೂ ಓದಿ:Ragini Dwivedi: ಅಪ್ಪ-ಅಮ್ಮನೊಂದಿಗೆ ಮನೆಯಲ್ಲೇ ಪ್ರೇಮಿಗಳ ದಿನ ಆಚರಿಸಿದ ರಾಗಿಣಿ ದ್ವಿವೇದಿ..!

ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳಿಗಾಗಿ ಧ್ರುವ ಸರ್ಜಾ ಚಿತ್ರದ ಡೈಲಾಗ್ ಹೊಡೆದರು. ಅಲ್ಲದೆ ನೆಚ್ಚಿನ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ, ಪೊಗರು ಚಿತ್ರ ನೋಡಿ ಹಾರೈಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು.
Published by:Anitha E
First published: