ಉಗ್ರಪ್ಪ ರಾಜಕೀಯಕ್ಕೆ ಬಂದಾಗ ಶ್ರೀರಾಮುಲು ಕಣ್ಣೇ ಬಿಟ್ಟಿರಲಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ

Latha CG | news18
Updated:October 29, 2018, 3:54 PM IST
ಉಗ್ರಪ್ಪ ರಾಜಕೀಯಕ್ಕೆ ಬಂದಾಗ ಶ್ರೀರಾಮುಲು ಕಣ್ಣೇ ಬಿಟ್ಟಿರಲಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ
  • Advertorial
  • Last Updated: October 29, 2018, 3:54 PM IST
  • Share this:
-ಶರಣು ಹಂಪಿ, ನ್ಯೂಸ್​ 18 ಕನ್ನಡ

ಬಳ್ಳಾರಿ,(ಅ.29): ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಮಂತ್ರಿಯಾಗಬೇಕು ಅಂತಾ ರಾಮುಲು ರಾಜೀನಾಮೆ ಕೊಟ್ಟ. ಈ ರಾಮುಲು ಲೋಕಸಭೆಯಲ್ಲಿಯೂ ಕೆಲಸ ಮಾಡಲ್ಲ, ವಿಧಾನಸಭೆಯಲ್ಲೂ ಕೆಲಸ ಮಾಡಲ್ಲ. ಯಾಕಪ್ಪಾ ಈ ಮನುಷ್ಯ ಆಯ್ಕೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಳ್ಳಾರಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕುರಗೋಡದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಈ ರಾಮುಲುಗೆ ಬಳ್ಳಾರಿಯಲ್ಲಿ 3 ಎಸ್ಟಿ ಕ್ಷೇತ್ರ ಇವೆ, ಮತ್ಯಾಕೆ ಮೊಳಕಾಲ್ಮೂರುಗೆ ಹೋದರು. ಶ್ರೀರಾಮುಲು ಬಳ್ಳಾರಿಯಲ್ಲಿ ಜನರ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಉಗ್ರಪ್ಪ ಎಸ್​ಟಿ ಸಮುದಾಯದ ರಾಜ್ಯ ಮಟ್ಟದ ನಾಯಕ. ಅಪಾರ ರಾಜಕೀಯ ಜ್ಞಾನ ಇರುವವರು. ಹೈಕೋರ್ಟ್​​ನಲ್ಲಿ ಹಿರಿಯ ವಕೀಲ, ಲಾ ಕಾಲೇಜು ಉಪನ್ಯಾಸಕ. ಉಗ್ರಪ್ಪ ರಾಜಕೀಯಕ್ಕೆ ಬಂದಾಗ ಶ್ರೀರಾಮುಲು ಕಣ್ಣೇ ಬಿಟ್ಟಿರಲಿಲ್ಲ. ಈಗ ರಾಮುಲು ಉದ್ದುದ್ದ ಭಾಷಣ ಹೊಡಿತಾರೆ. ಲೋಕಸಭೆಯಲ್ಲಿ ಯಾವ ವಿಷಯದ ಬಗ್ಗೆ ಮಾತನಾಡಿದ್ದಾರೆ ದಾಖಲೆ ತೋರಿಸಲಿ. ಬಳ್ಳಾರಿ ಬಗ್ಗೆ, ಎಸ್ಟಿ ಜನಾಂಗಕ್ಕೆ ಸಂಬಂಧಿಸಿ ಏನಾದರೂ ಮಾತಾಡಿದಾರಾ ತೋರಿಸಲಿ. ವಾಲ್ಮೀಕಿ, ನಾಯಕ ಜನಾಂಗವನ್ನು ಎಸ್ಟಿಗೆ ಸೇರಿಸಿದ್ದು ಮಿಸ್ಟರ್ ಉಗ್ರಪ್ಪ. ರಾಮುಲುಗೆ ಈ ಬಗ್ಗೆ ಏನಾದ್ರೂ ಗೊತ್ತಾ? ಆಗ ಶ್ರೀರಾಮುಲು ಎಂಎಲ್ ಎ ಆಗಿದ್ದರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮಗೇನಾದ್ರೂ ಮಾನ ಮರ್ಯಾದೆ ಇದೆಯೇನ್ರೀ ರಾಮುಲು.?

ಈ ಬಾರಿ ಎಸ್​ಟಿ ವೋಟ್ ಪಡೆಯಲು ಅಮಿತ್ ಶಾ ನಾಟಕ ಮಾಡಿದರು. ಎಸ್​ಟಿ ಸಮುದಾಯಕ್ಕೆ ಇನ್ನಷ್ಟು ಸಮುದಾಯ ಸೇರಿಸುತ್ತೇವೆ ಅಂತಾ ಹೇಳಿದರು. ಈ ಬಗ್ಗೆ ಶ್ರೀರಾಮುಲು ಎಂದೂ ಮಾತಾಡಿಲ್ಲ. ನಾನು ಹೇಳಿದೆ ಶ್ರೀರಾಮುಲುಗೆ ಗೊತ್ತಿಲ್ಲ ಅಂತಾ, ಅದು ಸತ್ಯ ಕೂಡ. ಬದಲಾಗಿ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ಜನರಿಗೆ ಹೆದರಿಗೆ ಪೊಲೀಸ್ ಕೇಸ್ ಹಾಕಿಸೋದು ಗೊತ್ತು ಅಂತಾ ಹೇಳಿದಿನಿ .ಅದಕ್ಕೆ ನೀವು ಜಾತಿ ಬಣ್ಣ ಕಟ್ಟಿದ್ದೀರಿ. ನಿಮಗೇನಾದ್ರೂ ಮಾನ ಮರ್ಯಾದೆ ಇದೆಯೇನ್ರೀ ರಾಮುಲು.? ಜಾತಿ ಪ್ರೊಟೆಕ್ಷನ್ ತಗೋತಿರಿ ನಾಚಿಕೆ ಆಗಬೇಕು ನಿಮಗೆ. ನಿಮಗೆ 14 ಹಣಕಾಸು ಆಯೋಗ ಅಂದ್ರೆ ಗೊತ್ತಾ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ರಾಮುಲುಗೆ ಇವರಿಗೆ ಏನೂ ಗೊತ್ತಿಲ್ಲ. ಈ ಗಿರಾಕಿಗಳು ದೆಹಲಿಗೆ ಹೋಗಿ ಸಹಿ ಹಾಕಿ ಬರಲು ಹೋಗ್ತಾರಾ? ಆ ಶಾಂತಮ್ಮ ಲೋಕಸಭೆಯಲ್ಲಿ ಬಾಯಿ ಬಿಡ್ತಾಳಾ? ರಾಮುಲುನೇ ಬಾಯಿ ಬಿಟ್ಟಿಲ್ಲ. ಆ ಶೋಭಾ ಕರಂದ್ಲಾಜೆನೂ ಬಾಯಿ ಬಿಟ್ಟಿಲ್ಲ ಎಂದು ಹೇಳಿದರು.

ಮೋದಿ ವಚನ ಭ್ರಷ್ಟ:ಮೋದಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಆಯ್ತು. ದೇಶದ ಸ್ವಾತಂತ್ರ್ಯ ನಂತರ ಹೆಚ್ಚು ಸುಳ್ಳು ಹೇಳಿದ್ದು ಮೋದಿ ಮಾತ್ರ. ಮೋದಿ ವಚನ ಭ್ರಷ್ಟ. ಮೋದಿ ನಾನು ತಿನ್ನಲ್ಲ, ತಿನ್ನಲು ಬಿಡಲ್ಲ ಅಂತಾ ಹೇಳಿದ್ದರು. ನಿಮ್ಮ ಕಾಲದಲ್ಲಿ ಎಷ್ಟು ಜನ ದೇಶ ಬಿಟ್ಟು ಹೋದರು. ನೀರವ್​​ ಮೋದಿ, ಅಂಬಾನಿ ಸೇರಿ 44 ಸಾವಿರ ಕೋಟಿ ತಿಂದು ಹಾಕಿದ್ದಾರೆ. ಈ ಕಾರಣಕ್ಕೆ ಮೋದಿ ಸರ್ಕಾರವನ್ನು ಈ ಬಾರಿ ಸೋಲಿಸಬೇಕಿದೆ ಎಂದರು.

First published:October 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ