ಉಗ್ರಗಾಮಿಗಳು ಇಂದು ದೇಶದಲ್ಲಿ ಭಕ್ತರಾಗುತ್ತಿದ್ದಾರೆ; ಸಿದ್ದರಾಮಯ್ಯ ಆತಂಕ

ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಗಾಂಧಿ ಟೀಕಿಸುವ ಕಟೀಲ್​ ಇಂದು ಸಂಸದರಾಗಿದ್ದಾರೆ ಎಂದರೇ ಇದಕ್ಕೆ ಮಹಾತ್ಮಾ ಗಾಂಧಿ ಕಾರಣ. ದೇಶಕ್ಕೆ ಸ್ವಾತಂತ್ರ್ಯ ಸಿಗದಿದ್ದರೆ ಅವರು ಇಂದು ಸಂಸದರಾಗುತ್ತಿದ್ದಾರೆ

Seema.R | news18
Updated:May 17, 2019, 5:05 PM IST
ಉಗ್ರಗಾಮಿಗಳು ಇಂದು ದೇಶದಲ್ಲಿ ಭಕ್ತರಾಗುತ್ತಿದ್ದಾರೆ; ಸಿದ್ದರಾಮಯ್ಯ ಆತಂಕ
ಸಿದ್ದರಾಮಯ್ಯ
Seema.R | news18
Updated: May 17, 2019, 5:05 PM IST
ಬೆಳಗಾವಿ (ಮೇ.17): ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರನ್ನು ಕೊಂದ ಉಗ್ರಗಾಮಿಗಳು ಭಾರತದಲ್ಲಿ ದೇಶ ಭಕ್ತರಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಪಾಲ್​ ಅಭ್ಯರ್ಥಿ ಪ್ರಗ್ಯಾ ಠಾಗೂರ್​ ಗೋಡ್ಸೆ ಓರ್ವ ದೇಶಭಕ್ತ ಎಂದು ವಿವಾದ ಹುಟ್ಟು ಹಾಕಿದ ಬಳಿಕ ಸಂಸದರಾದ ನಳಿನ್​ ಕುಮಾರ್​ ಕಟೀಲ್ ಮತ್ತು ಅನಂತಕುಮಾರ್ ಹೆಗ್ಡೆ​ ಕೂಡ ಇದೇ ರೀತಿಯ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಪ್ರಗ್ಯಾಗಿಂತ ಒಂದು ಹೆಜ್ಜೆ ಮುಂದೆ ಹೋದ ನಳಿನ್​ ಕುಮಾರ್​ ಕಟೀಲ್​ ರಾಜೀವ್​ ಗಾಂಧಿಯನ್ನು ಉಗ್ರ ಎಂಬ ಅರ್ಥದಲ್ಲಿ ಟ್ವೀಟ್​​ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಮಾತಿಗೆ ದೇಶಾದ್ಯಾಂತ ಟೀಕೆಗಳು ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಗಾಂಧಿ ಟೀಕಿಸುವ ಕಟೀಲ್​ ಇಂದು ಸಂಸದರಾಗಿದ್ದಾರೆ ಎಂದರೇ ಇದಕ್ಕೆ ಮಹಾತ್ಮಾ ಗಾಂಧಿ ಕಾರಣ. ದೇಶಕ್ಕೆ ಸ್ವಾತಂತ್ರ್ಯ ಸಿಗದಿದ್ದರೆ ಅವರು ಇಂದು ಸಂಸದರಾಗುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಗಾಂಧಿ-ಗೋಡ್ಸೆ ವಿವಾದಕ್ಕೆ ಕಿಡಿ ಹೊತ್ತಿಸಿದ ಅನಂತ್ ಕುಮಾರ್ ಟ್ವೀಟ್​ ಡಿಲೀಟ್; ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ಉಗ್ರಗಾಮಿ ಮನೋಭಾವ ಇರುವ ಇಂತಹವರಿಂದ ಬೇರೇನು ನಿರೀಕ್ಷಿಸಲು ಸಾಧ್ಯ. ಇವರನ್ನು ಹೇಗೆ ದೇಶಭಕ್ತ ಎನ್ನಲು ಸಾಧ್ಯ  ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಟೀಲು, ಹೆಗಡೆ ಸ್ವತಂತ್ರ ಹೋರಾಟದ ಫಲಾನುಭವಿಗಳು. ಈ ರೀತಿ ದೇಶದ್ರೋಹ ಹೇಳಿಕೆ ನೀಡುವ ಇವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾಗೆ ಆಗ್ರಹಿಸಿದರು.

ಕಾಂಗ್ರೆಸ್​ ಜ್ಯಾತ್ಯತೀತ ಪಕ್ಷವೀರಶೈವರು ಕಾಂಗ್ರೆಸ್​​ಗೆ ಮತ ಹಾಕಲ್ಲ ಎಂಬ ವಿಶ್ವಾಸ ಇದೆ ಎಂಬ ಬಿಎಸ್​ ಯಡಿಯೂರಪ್ಪ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷ. ನಾವು ಎಲ್ಲಾ ಜಾತಿ, ಜನಾಂಗದ ಏಳಿಗೆಗೆ ಅನೇಕ ಕಾರ್ಯ ರೂಪಿಸಿದ್ದೇವೆ. ಒಂದು ಕೋಮಿನ ಒಲೈಕೆ ಮಾಡಿಲ್ಲ.  ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡುವವರು ಬಿಜೆಪಿ. ನಮಗೆ ವೀರಶೈವ ಲಿಂಗಾಯತ, ಬ್ರಾಹ್ಮಣ, ಕುರುಬ ಮತಗಳು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ