• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Belagavi: ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸಿದ್ದರಾಮಯ್ಯ ಅಥವಾ ಸತೀಶ್​ ಜಾರಕಿಹೊಳಿ ಸ್ಪರ್ಧೆ; ಬಿಜೆಪಿಗೆ ಟೆನ್ಷನ್

Belagavi: ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸಿದ್ದರಾಮಯ್ಯ ಅಥವಾ ಸತೀಶ್​ ಜಾರಕಿಹೊಳಿ ಸ್ಪರ್ಧೆ; ಬಿಜೆಪಿಗೆ ಟೆನ್ಷನ್

ಸತೀಶ್​ ಜಾರಕಿಹೊಳಿ

ಸತೀಶ್​ ಜಾರಕಿಹೊಳಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಗೆ ರಾಜ್ಯದ ಹಲವು ಕ್ಷೇತ್ರದಲ್ಲಿ ತಯಾರಿ ನಡೆದಿದೆ. ಚಾಮರಾಜಪೇಟೆ, ಕೋಲಾರ, ಕೊಪ್ಪಳ ಹಾಗೂ ಬದಾಮಿಯಲ್ಲಿ ಸ್ಪರ್ಧೆ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಪಟ್ಟಿಗೆ ಸವದತ್ತಿ ಯಲ್ಲಮ್ಮ ಕ್ಷೇತ್ರ ಸೇರ್ಪಡೆಯಾಗಿದ್ದು ಸವದತ್ತಿಯಿಂದಲೇ ಸಿದ್ದರಾಮಯ್ಯ ‌ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಆರಂಭವಾಗಿದೆ.

ಮುಂದೆ ಓದಿ ...
  • Share this:

ಬೆಳಗಾವಿ (ಜೂ.30): ರಾಜ್ಯದಲ್ಲಿ 2023ರ‌ ವಿಧಾನಸಭೆ ಚುನಾವಣೆಗೆ (Assembly Election) ಇನ್ನೂ 11 ತಿಂಗಳು ಬಾಕಿ ಇದೆ. ಆದರೇ ಈಗಿನಿಂದಲೇ ರಾಜಕೀಯ ನಾಯಕರು ಕ್ಷೇತ್ರ  ಬದಲಾವಣೆ, ಹೊಸ ಕ್ಷೇತ್ರದ ಹುಡುಕಾಟ ಆರಂಭಿಸಿದ್ದಾರೆ. ಕೆಲ ನಾಯಕರು ಸುರಕ್ಷಿತ ಕ್ಷೇತ್ರ ಹುಡುಕಾಟದಲ್ಲಿ ಸಕ್ರಿಯರಾಗಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಯಾರು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಕ್ಷೇತ್ರದ ಮೇಲೆ ಕಣ್ಣು ಇಟ್ಟಿದ್ದಾರೆ ಹಲವು ನಾಯಕರು. ಸವದತ್ತಿ ಕ್ಷೇತ್ರದ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ (Satish Jarkiholi) ಕಣ್ಣು. ಸತೀಶ ಜಾರಕಿಹೊಳಿ ತಮಗಾಗಿ ಸಿದ್ದಪಿಡಿಸಿಕೊಂಡ್ರಾ ಇಲ್ಲವೇ ರಾಜಕೀಯ ಗುರು ಸಿದ್ದರಾಮಯ್ಯ (Siddaramaiah) ‌ಸೆಫ್ ಕ್ಷೇತ್ರ ಆಯ್ಕೆ ಮಾಡಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.


ಸವದತ್ತಿಯಿಂದಲೇ ಸಿದ್ದರಾಮಯ್ಯ ‌ಸ್ಪರ್ಧೆ!?


ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಗೆ ರಾಜ್ಯದ ಹಲವು ಕ್ಷೇತ್ರದಲ್ಲಿ ತಯಾರಿ ನಡೆದಿದೆ. ಚಾಮರಾಜಪೇಟೆ, ಕೋಲಾರ, ಕೊಪ್ಪಳ ಹಾಗೂ ಬದಾಮಿಯಲ್ಲಿ ಸ್ಪರ್ಧೆ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಪಟ್ಟಿಗೆ ಸವದತ್ತಿ ಯಲ್ಲಮ್ಮ ಕ್ಷೇತ್ರ ಸೇರ್ಪಡೆಯಾಗಿದ್ದು ಸವದತ್ತಿಯಿಂದಲೇ ಸಿದ್ದರಾಮಯ್ಯ ‌ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ನಡೆದಿವೆ.


ಕ್ಷೇತ್ರದಲ್ಲಿ ಶಾಸಕ ಸತೀಶ ಜಾರಕಿಹೊಳಿ ಓಡಾಟ


ಈ ಅನುಮಾನಕ್ಕೆ ಪುಷ್ಠಿ‌ ನೀಡುವಂತೆ ಕ್ಷೇತ್ರದಲ್ಲಿ ಶಾಸಕ ಸತೀಶ ಜಾರಕಿಹೊಳಿ ಓಡಾಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲವೇ ಸತೀಶ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಚಿಂತನೆ ಇದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಪುತ್ರ ರಾಹುಲ್ ಗೆ‌ ಯಮಕನಮರಡಿ ಕ್ಷೇತ್ರ ಬಿಟ್ಟು ಕೊಡುವ ಸಾಧ್ಯತೆ‌ ಇದೆ. ತಾವು ಸವದತ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆ ಹೋಗೋ ಬಗ್ಗೆ ಚಿಂತನೆ ಮಾಡಿದ್ದಾರೆ.


ಇದನ್ನೂ ಓದಿ: High Court: ಎಸಿಬಿಯೇ ಭ್ರಷ್ಟರ ಕೂಪ, ವಸೂಲಿ ಕೇಂದ್ರ -ಹೈಕೋರ್ಟ್ ತರಾಟೆ


3 ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು


ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆ ಬಿಜೆಪಿ ಗೆಲುವು ಸಾಧಿಸಿದೆ. ಶಾಸಕ ಆನಂದ ಮಾಮನಿ ಸತತವಾಗಿ ಗೆದ್ದು, ಸದ್ಯ‌ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿ ಮಾಮನಿ ಕೆಲಸ ಮಾಡುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಆನಂದ ಮಾಮನಿಗೆ ಫೈಟ್ ಕೊಟ್ಟಿದ್ದ ದಿ. ಆನಂದ ಚೋಪ್ರಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಚೋಪ್ರಾ. ಪಕ್ಷೇತರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮತ‌ ವಿಭಜನೆಯಿಂದ ಬಿಜೆಪಿ ಗೆಲವು ಸಾಧಿಸಿತ್ತು.


ಕಾಂಗ್ರೆಸ್​​ನಲ್ಲಿ 3 ಜನ ಟಿಕೆಟ್ ಆಕಾಂಕ್ಷಿ


ಸತತ ಎರಡು ಚುನಾವಣೆಯಲ್ಲಿ ಬಿಜೆಪಿಗೆ ಇದೇ ಪ್ಲಸ್ ಪಾಯಿಂಟ್, ಇದನ್ನು ಬ್ರೇಕ್ ಮಾಡಲು ಕಾಂಗ್ರೆಸ್ ಸಿದ್ಧತೆ. ಸ್ಥಳೀಯವಾಗಿ ಕಾಂಗ್ರೆಸ್ ನಲ್ಲಿ ಮೂರು ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಪಂಚನಗೌಡ ದ್ಯಾಮನಗೌಡ, ವಿಶ್ವಾಸ ವೈದ್ಯ, ಸೌರಭ ಚೋಪ್ರಾ ನಡುವೆ ಪೈಪೋಟಿ ‌ಇದೆ.


ಇದನ್ನೂ ಓದಿ: NICE Road Toll Price Hike: ನೈಸ್ ರಸ್ತೆ ಟೋಲ್ ದರ ಹೆಚ್ಚಳ; ಹೊಸ ದರಗಳ ವಿವರ ಇಲ್ಲಿದೆ


ಬಂಡಾಯದ ಭೀತಿ


ಮೂರು ಜನರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೂ ಮತ್ತೊಬ್ಬರು ಬಂಡಾಯ ಮಾಡೋ ಆತಂಕ ಇದೆ. ಹೀಗಾಗಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸತೀಶ ಜಾರಕಿಹೊಳಿ ಚಿಂತನೆ ಮಾಡಿದ್ದಾರೆ. ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧೆ ಸಂದರ್ಭದಲ್ಲಿ ಉತ್ತಮ ಲೀಡ್. ಸವದತ್ತಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಉತ್ತಮ ಲಿಡ್ ಸಿಕ್ಕಿದ್ದ ಕ್ಷೇತ್ರ.

Published by:Pavana HS
First published: