ತಪ್ಪು ಮಾಡಿದ್ರೆ ದಾಳಿ ಮಾಡಿ - ಆದರೆ ಉಪ ಚುನಾವಣೆ ವೇಳೆ ರಾಜಕೀಯ ಪ್ರೇರಿತ ದಾಳಿ ಸರಿಯಲ್ಲ ; ಸಿದ್ಧರಾಮಯ್ಯ ಕಿಡಿ

Siddaramaiah : ಬ್ರಿಟಿಷ್ ಕಾಲದಲ್ಲಿ ಏನು ಮಾಡುವುದಕ್ಕೆ ಆಗಿಲ್ಲ. ಬಿಜೆಪಿಯವರು ಹುಷಾರಾಗಿರಿ ನಿಮ್ಮ ಸಿದ್ದಾಂತವನ್ನ ಜಾರಿ ಮಾಡುವುದಕ್ಕೆ ಹೋಗಬೇಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು(ಅಕ್ಟೋಬರ್​. 05): ಈಗ ರಾಜ್ಯದಲ್ಲಿ ಉಪ ಚುನಾವಣೆ ಇದೆ. ಈ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರ  ಮನೆಯ ಮೇಲೆ ಸಿಬಿಐ ದಾಳಿ ಆಗಿದೆ. ತಪ್ಪು ಆಗಿದ್ರೆ ದಾಳಿ ಮಾಡಲು ಅಧಿಕಾರ ಇದೆ. ಆದರೆ, ರಾಜಕೀಯ ಪ್ರೇರಿತ ದಾಳಿ ಬೇಡ. ಈ ರೀತಿಯ ದಾಳಿ ಎಷ್ಟು ಬಾರಿ ಮಾಡಿದ್ದೀರಿ ಎಂದು ಬಿಜೆಪಿ ವಿರುದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಡಿಕೆಶಿ ಸಹೋದರರ ಮನೆ ಮೇಲೆ ಸಿಬಿಐ ದಾಳಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿ ಅವರು, ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ದೇಶದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಅತ್ಯಾಚಾರ ಪ್ರಕರಣವನ್ನ ಪಕ್ಷಾತೀತವಾಗಿ ಖಂಡಿಸಬೇಕು. ನಾವು ಸುಸಂಸ್ಕೃತರು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಯೋಗಿ ಆದಿತ್ಯನಾಥ್ ಅವರ ಮೇಲೆ 27 ಕೇಸ್ ಇತ್ತು. ಸಿಎಂ ಆದ ಮೇಲೆ ಅವರ ಕೇಸ್ ನ ಅವರೆ ವಾಪಸ್ ಪಡೆದುಕೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಅಲ್ಲ ಅವರು ಅಯೋಗ್ಯ ನಾಥ್ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಯುವತಿಯ ಅತ್ಯಾಚಾರ, ಕೊಲೆಯಾದರು ಅಂತಸಂಸ್ಕಾರಕ್ಕೂ ಅವಕಾಶ ಕೊಡಲಿಲ್ಲ. ಇದನ್ನ ಮಾಡಿಸಿರುವುದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.  ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ರಾಜೀನಾಮೆ ಕೊಡಬೇಕು. ಮಹಿಳೆಯರ ಮೇಲೆ ಪ್ರಧಾನಿಯವರಿಗೆ ನಿಜವಾಗಿಯೂ ಗೌರವ ಇದ್ರೆ, ಸಿಎಂ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕೈ ಬಿಡಬೇಕು  ಆಗ್ರಹಿಸಿದರು.

ದೆಹಲಿಯ ನಿರ್ಭಯ ಪ್ರಕರಣವನ್ನ ಪಕ್ಷಾತೀತವಾಗಿ ಖಂಡಿಸಿದ್ದೇವು. ಈಗ ಉತ್ತರ ಪ್ರದೇಶ ಪ್ರಕರಣವನ್ನ ಒಬ್ಬರೇ ಒಬ್ಬರು ಬಿಜೆಪಿ ನಾಯಕರು ಖಂಡಿಸಿಲ್ಲ ಎಂದರು.

ಹಿಂದೆ ನಾನು ಎಲ್ಲಾದರು ಹೋದ್ರೆ ನನ್ನನ್ನ ನೋಡಿದ ತಕ್ಷಣ ಕೆಲ ಆರ್ ಎಸ್ ಎಸ್ , ಭಜರಂಗದಳದವರು ಮೋದಿ , ಮೋದಿ ಎಂದು ಕೂಗಿದರು. ಮೋದಿ ಮೋದಿ ಅನ್ನೋರು ಈಗಿನ ಪರಿಸ್ಥಿತಿ ನೋಡಿ. ಯುವಕರಿಗೆ ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ : ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ : ಡಿಸಿಎಂ ಅಶ್ವತ್ಥನಾರಾಯಣ

ಬಿಜೆಪಿ ಸರ್ಕಾರದ ವಿರುದ್ಧ ಜೈಲು ಬರೋ ಚಳುವಳಿ ಆರಂಭ ಮಾಡಬೇಕಿದೆ. ಲಕ್ಷಾಂತರ ಜನರು ಸೇರಿ ಜೈಲು ಬರೋ ಚಳುವಳಿ ಮಾಡೋಣ. ಬ್ರಿಟಿಷ್ ಕಾಲದಲ್ಲಿ ಏನು ಮಾಡುವುದಕ್ಕೆ ಆಗಿಲ್ಲ. ಬಿಜೆಪಿಯವರು ಹುಷಾರಾಗಿರಿ ನಿಮ್ಮ ಸಿದ್ದಾಂತವನ್ನ ಜಾರಿ ಮಾಡುವುದಕ್ಕೆ ಹೋಗಬೇಡಿ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ : ವಿ ಆರ್​ ಸುದರ್ಶನ್​

ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದೆ ವ್ಯವಸ್ಥೆ ಹಾಳುಮಾಡಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಾಜ್ಯದ ಜನರ ದನಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ದುರಾಡಳಿತದ ಬಗ್ಗೆ ಜನರ ಗಮನವನ್ನು ಸೆಳೆದಿದ್ದರು. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತರುವ ಕೆಲಸ ಮಾಡಿದರು. ರಾಜಕಾರಣವನ್ನು ರಾಜಕಾರಣದಲ್ಲೇ ಎದುರಿಸಬೇಕು. ಕಾನೂನಿಗಿಂತ ಶಿವಕುಮಾರ್ ಅವರು ದೊಡ್ಡವರಲ್ಲ. ಆದರೆ, ಆಡಳಿತ ಯಂತ್ರದ ದುರ್ಬಳಕೆ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ವಿ ಆರ್​ ಸುದರ್ಶನ್ ಹೇಳಿದರು.

ಉಪಚುನಾವಣೆ ನಡೆಯುವ ಸಂದರ್ಭದಲ್ಲಿ ಈ ಕೆಲಸ ಆಗಿದೆ. ಅಭ್ಯರ್ಥಿಗಳ‌ ಆಯ್ಕೆಯ ಕೆಲಸ ನಡೆಯುತ್ತಿತ್ತು. ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ಜವಾಬ್ದಾರಿ ವಿರೋಧಪಕ್ಷದ್ದು, ಆ ಕೆಲಸಕ್ಕೆ ಅಡ್ಡಿ ಮಾಡಲಾಗುತ್ತಿದೆ.  ಸಿಬಿಐ ದುರ್ಬಳಕೆಯಾಗಿದೆ. ಮಾಧ್ಯಮಗಳ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸವನ್ನೂ ಬಿಜೆಪಿ ಮಾಡುತ್ತಿದೆ  ಎಂದು ಕಾಂಗ್ರೆಸ್ ಮುಖಂಡ ವಿ ಆರ್​ ಸುದರ್ಶನ್ ಆಕ್ರೋಶ ವ್ಯಕ್ತಪಡಿಸಿದರು.
Published by:G Hareeshkumar
First published: