ಬೆಂಗಳೂರು; ಹಿಂದಿನ ದಿನ ಅಜೆಂಡಾ ರೆಡಿಮಾಡಿಕೊಂಡಿದ್ದಾರೆ. ನಿನ್ನೆ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಅಲ್ಲಿ ಯಾವುದೇ ಹೊಸ ಮಸೂದೆ ಇಲ್ಲ ಅಂದಿದ್ದರು. ಇಂದು ವಿವಿ ಬಿಲ್, ಪಾರ್ಲಿಮೆಂಟರಿ ನೇಮಕ ಬಿಲ್ ತಂದಿದ್ದಾರೆ. ಕೆಲ ಹಳೆಯ ಬಿಲ್ ಚರ್ಚೆಗಷ್ಟೇ ಒಪ್ಪಿಗೆಯಿತ್ತು. ಅದಕ್ಕೆ 15 ರವರೆಗಿದ್ದ ವಿಧೇಯಕ ಮೊಟಕು ಮಾಡಲಾಗಿತ್ತು. ಇದೀಗ ಏಕಾಏಕಿ ಗೋ ಹತ್ಯೆ ನಿಷೇಧ ತಂದಿದ್ದಾರೆ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ವಿಧಾನಸಭೆ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಮಂಡಿಸಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಎಸಿ ಅಂದರೆ ಅಲ್ಲಿ ತೀರ್ಮಾನದಂತೆ ನಡೆದುಕೊಳ್ಳಬೇಕು. ಇದು ಲಜ್ಕೆಗೆಟ್ಟ ಸರ್ಕಾರ. ಪಾಪ ಆ ಸ್ಪೀಕರ್ ಗೌರವವನ್ನೂ ಹಾಳುಮಾಡಿದ್ದಾರೆ. ಆ ಸ್ಥಾನದ ಗೌರವವನ್ನೂ ಹಾಳುಮಾಡಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ವಿಪಕ್ಷಗಳ ಗದ್ದಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ; ಮಸೂದೆ ಮ
ಪಶುಸಂಗೋಪನಾ ಸಚಿವರ ಕೈಯಲ್ಲೇ ಮಸೂದೆ ಕಾಪಿ ಇಲ್ಲ. ಬಿಲ್ ಮಂಡಿಸಬೇಕಾದರೆ ಬಿಲ್ ಕಾಪಿ ಇರಬೇಕು. ಏಕಾಏಕಿ ಬಿಲ್ ಮಂಡಿಸಿದ್ದಾರೆ. ಸ್ಪೀಕರ್ ಗೆ ನಾವು ಬೇಡ ಅಂತ ಹೇಳಿದರೂ ಕೇಳಲಿಲ್ಲ. ಒತ್ತಡ ತಂದಿದ್ದಾರೆಂದು ಬಿಲ್ ಮಂಡನೆಗೆ ಅವಕಾಶ ಕೊಟ್ಟರು ಎಂದು ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ