ಕೋಟು ಧರಿಸಿ ಯೂರೋಪ್​ಗೆ ಹೊರಟ ಸಿದ್ದರಾಮಯ್ಯ: ಸರ್ಕಾರ ಉರುಳಿಸುವ ಊಹಾಪೋಹ ಇನ್ನೂ ಜೀವಂತ


Updated:September 3, 2018, 3:33 PM IST
ಕೋಟು ಧರಿಸಿ ಯೂರೋಪ್​ಗೆ ಹೊರಟ ಸಿದ್ದರಾಮಯ್ಯ: ಸರ್ಕಾರ ಉರುಳಿಸುವ ಊಹಾಪೋಹ ಇನ್ನೂ ಜೀವಂತ

Updated: September 3, 2018, 3:33 PM IST
ಬೆಂಗಳೂರು(ಸೆ.03): ವಿದೇಶೀ ಪ್ರವಾಸಗಳಿಂದ ದೂರವೇ ಉಳಿದಿದ್ದ ಸಿಎಂ ಸಿದ್ದರಾಮಯ್ಯ, ಫಾರಿನ್​ ಟೂರ್​ ಕೈಗೊಳ್ಳುತ್ತಿದ್ದಾರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು. ವಿದೇಶ ಪ್ರವಾಸಕ್ಕಾಗಿ ಕುಟುಂಬ ಸಮೇತರಾಗಿ ಅವರು ಶಾಪಿಂಗ್​ ಮಾಡಿದ್ದೂ ವರದಿಯಾಗಿತ್ತು. ಇದೀಗ ನಿಗದಿಯಂತೆ ಸಿದ್ದರಾಮಯ್ಯ 10 ದಿನಗಳ ಯೂರೋಪ್​ ಪ್ರವಾಸಕ್ಕೆ ಕೋಟು ಧರಿಸಿ ಹೊರಟಿದ್ದಾರೆ.

ಹೌದು ತನ್ನ ಖಡಕ್​ ವರ್ಚಸ್ಸು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದ ಮಾಜಿ ಸಿಎಂ ಸಿದ್ದರಾಮಯ್ಯ, ಸರಳತೆಯಿಂದಲೇ ಉನ್ನತ ಸ್ಥಾನಕ್ಕೇರಿದವರು. ಯಾವತ್ತೂ ಪಂಚೆ ಹಾಗೂ ಶರ್ಟ್​ನಲ್ಲೇ ಕಾಣಿಸಿಕೊಳ್ಳುವ ಸಿದ್ದರಾಮಯ್ಯನವರು, ಹಳ್ಳಿಯಿಂದ ಅದೆಲ್ಲೇ ಹೋದರೂ ತಮ್ಮತನವನ್ನು ಬಿಟ್ಟುಕೊಡುವುದಿಲ್ಲ.

ಇನ್ನು ವಿದೇಶಕ್ಕೆ ಪ್ರವಾಸ ಕೈಗೊಳ್ಳುವ ವಿಚಾರದಲ್ಲೂ ಅವರು ಎಲ್ಲರಿಗಿಂತಲೂ ಭಿನ್ನವಾಗಿ ಕಾಣುತ್ತಾರೆ. ಇಲ್ಲ ಸಲ್ಲದ ನೆಪ ನೀಡಿ ವಿದೇಶಕ್ಕೆ ಪ್ರವಾಸ ಕೈಗೊಳ್ಳಲು ರಾಜಕಾರಣಿಗಳು ತುದಿಗಾಲಿನಲ್ಲಿ ನಿಂತರೆ ಸಿದ್ದರಾಮಯ್ಯ ಮಾತ್ರ ಫಾರಿನ್​ ಟೂರ್​ಗೂ ತಮಗೂ ಸರಿ ಹೋಗುವುದಿಲ್ಲ ಎಂಬಂತೆ ದೂರವೇ ಉಳಿದುಕೊಂಡಿದ್ದರು. ಮುಖ್ಯಮಂತ್ರಿಯಾದಾಗಲೂ ಅವರು ವಿದೇಶಕ್ಕೆ ಹೋಗಿದ್ದು ಕೇವಲ ಒಂದೆರಡು ಬಾರಿಯಷ್ಟೇ. ಮಗ ರಾಕೇಶ್​ ತೀರಿಕೊಂಡಾಗಲೂ ಪಾಸ್​ಪೋರ್ಟ್​ ಸಮಸ್ಯೆಯಿಂದ ವಿದೇಶಕ್ಕೆ ತೆರಳಲು ತಡವಾಗಿತ್ತು.

ವಿದೇಶದಲ್ಲಿ ಹಾಕಿಕೊಳ್ಳಲು ಸಲುವಾಗಿ ಹೊಸ ಶರ್ಟ್, ಪ್ಯಾಂಟ್, ಟೀ ಶರ್ಟ್ ಜೊತೆಗೆ ಹೊಸ ಬಿಳಿ ಪಂಚೆ, ಬಿಳಿ ಅಂಗಿ, ಹೊಸ ಟವಲ್, ಹೊಸ ಕೂಲಿಂಗ್ ಗ್ಲಾಸ್ ಖರೀದಿಸಿದ್ದರು. ಈ ವಿಚಾರ ಕೆಲ ದಿನಗಳ ಹಿಂದೆಯೇ ವರದಿಯಾಗಿತ್ತು. ಈಗ ನಿಗದಿಯಂತೇ ಮಾಜಿ ಸಿಎಂ ಇಂದಿನಿಂದ 10 ದಿನಗಳ ಯೂರೋಪ್​ ಪ್ರವಾಸಕ್ಕೆ ಹೊರಟಿದ್ದಾರೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹಾಗೂ ಅವರ ಮಗ ಮತ್ತು ಸಿದ್ದರಾಮಯ್ಯ ಮಗ ಯತೀಂದ್ರ ಅವರೊಂದಿಗೆ ತೆರಳಲಿದ್ದಾರೆಂಬ ವಿಚಾರ ತಿಳಿದು ಬಂದಿದೆ.

ಈ ನಡುವೆ ಅವರು ವಿದೇಶಕ್ಕೆ ತೆರಳಿ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಕೆಲ ತಂತ್ರಗಳನ್ನೂ ಹೆಣೆಯಲಿದ್ದಾರೆಂಬ ಮಾತುಗಲೂ ಕೇಳಿ ಬಂದಿವೆ. ಇದೇ ಕಾರಣದಿಂದ ರಾಜಕೀಯ ನಾಯಕರು ಅವರೊಂದಿಗೆ ವಿದೇಶಕ್ಕೆ ತೆರಳುತ್ತಿದ್ದಾರೆನ್ನಲಾಗಿದೆ.

ಸದ್ಯ ಮಾಜಿ ಸಿಎಂಗೆ ಶುಭ ಹಾರೈಸಲು ಅವರ ನಿವಾಸ ಕಾವೇರಿಗೆ ಈಗಾಗಲೇ ಸಚಿವ ಜಮೀರ್ ಅಹಮ್ಮದ್, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಬಿ ಸಿ ಪಾಟೀಲ್, ಮಾಜಿ ಶಾಸಕ ಕೆ ಎನ್ ರಾಜಣ್ಣ, ಸಚಿವ ವೆಂಕಟರಮಣಪ್ಪ ಆಗಮಿಸಿದ್ದಾರೆ. ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮ ನೆಚ್ಚಿನ ನಾಯಕನಿಗೆ ಶುಭಹಾರೈಸಿದ್ದಾರೆ. ಸಿದ್ದರಾಮಯ್ಯನವರು ಸದ್ಯ ಸೂಟು, ಬಿಳಿ ಷರ್ಟ್, ಷೂ ಹಾಗೂ ಕೋಟು ಧರಿಸಿ ಯೂರೋಪ್​ಗೆ ಹೊರಟಿದ್ದಾರೆ. ಇವರ ಈ ವಿದೇಶ ಪ್ರವಾಸಕ್ಕೆ ಶುಭವಾಗಲಿ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ