ಸಿದ್ದರಾಮಯ್ಯಗಿರುವ ಸಿಎಂ ಹುಚ್ಚು ಬಿಡಿಸಲು ಔಷಧ ಇದೆಯಾ?: ಈಶ್ವರಪ್ಪ ಪ್ರಶ್ನೆ

ಅವಕಾಶವಾದ, ಸ್ವಾರ್ಥ ರಾಜಕಾರಣವನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ  ಮೋದಿ, ಯಡಿಯೂರಪ್ಪ ಸೇರಿ ಎಲ್ಲ ಬಿಜೆಪಿ ನಾಯಕರಿಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ನಮಗೂ ಮಾತಾಡೋಕೆ ಬರುತ್ತೆ. ಆದರೆ ನಾವು ಹಾಗೆ ಮಾತಾಡೋಕೆ ಹೋಗಲ್ಲ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು

G Hareeshkumar | news18
Updated:May 13, 2019, 8:50 PM IST
ಸಿದ್ದರಾಮಯ್ಯಗಿರುವ ಸಿಎಂ ಹುಚ್ಚು ಬಿಡಿಸಲು ಔಷಧ ಇದೆಯಾ?: ಈಶ್ವರಪ್ಪ ಪ್ರಶ್ನೆ
ಸಚಿವ ಕೆ.ಎಸ್​.ಈಶ್ವರಪ್ಪ
  • News18
  • Last Updated: May 13, 2019, 8:50 PM IST
  • Share this:
ಕಲಬುರ್ಗಿ (ಮೇ. 13) : ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಗಿ, ಸಿಎಂ ಪದವಿಯಿಂದ ಇಳಿದ ನಂತರವೂ ಸಿದ್ಧರಾಮಯ್ಯ ಅವರಿಗೆ ಸಿಎಂ ಹುಚ್ಚು ಇನ್ನೂ ಬಿಟ್ಟಿಲ್ಲ. ಪ್ರಕೃತಿ ಚಿಕಿತ್ಸಾಲಯದಲ್ಲೂ ಇವರ ಬುದ್ಧಿ ಭ್ರಮಣೆಗೆ ಔಷಧ ಸಿಕ್ಕಿಲ್ಲ ಅನಿಸುತ್ತೆ. ಮುಖ್ಯಮಂತ್ರಿ ಹುಚ್ಚು ಬಿಡಿಸಲು ಯಾರ ಬಳಿಯಾದ್ರೂ ಔಷಧ ಇದೆಯಾ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪ್ರಶ್ನೆ ಮಾಡಿದರು.

ಕಾಂಗ್ರೆಸ್ ನಾಯಕರ ಗೊಂದಲಕಾರಿ ಹೇಳಿಕೆಯಿಂದ ರಾಜ್ಯದಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಕಾಂಗ್ರೆಸ್ ನಾಯಕರಾರೂ ಸಿದ್ದರಾಮಯ್ಯ ಅವರನ್ನ ಸಿಎಂ ಅಂತ ಘೋಷಿಸಿಲ್ಲ. ಆದರೆ, ಅವರ ಹಿಂಬಾಲಕರಾದ ಕೆಲವೊಬ್ಬ ಶಾಸಕರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಂತಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಯಾರ ಮೇಲೂ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬರಿಗಾದರೂ ನೋಟೀಸ್ ಕೊಟ್ಟಿಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದೇವೆ. ನಾವು ಕಾಂಗ್ರೆಸ್​ನವರಂತೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಲ್ಲ ಎಂದು ಶಾಸಕ ಕೆಎಸ್ ಈಶ್ವರಪ್ಪ ಹೇಳಿದರು.

ಅವಕಾಶವಾದ, ಸ್ವಾರ್ಥ ರಾಜಕಾರಣವನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ  ಮೋದಿ, ಯಡಿಯೂರಪ್ಪ ಸೇರಿ ಎಲ್ಲ ಬಿಜೆಪಿ ನಾಯಕರಿಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ನಮಗೂ ಮಾತಾಡೋಕೆ ಬರುತ್ತೆ. ಆದರೆ ನಾವು ಹಾಗೆ ಮಾತಾಡೋಕೆ ಹೋಗಲ್ಲ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ಸಿದ್ಧರಾಮಯ್ಯಗೆ ಈ ಜನ್ಮದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗಲ್ಲ. ಮುಖ್ಯಮಂತ್ರಿ ವಿಷಯ ಪಕ್ಷದ ಆಂತರಿಕ ಗೊಂದಲದ ಜೊತೆಗೆ ಆಡಳಿತ ಯಂತ್ರದ ಮೇಲೂ ಪರಿಣಾಮ ಬೀರುತ್ತೆ. ಇದನ್ನು ಅರ್ಥಮಾಡಿಕೊಂಡು ಕಾಂಗ್ರೆಸ್ ನಾಯಕರೇ ಸಿದ್ಧರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
First published:May 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading