ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ; ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ

ಉಪಚುನಾವಣೆಯಲ್ಲಿ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿದೆ. ಇನ್ನು ಪಕ್ಷ ತೊರೆದಿರುವ ಅನರ್ಹ ಶಾಸಕರ ಸ್ಥಾನಕ್ಕೆ ಯಾರಿಗೆ ಟಿಕೆಟ್​ ನೀಡಿದರೆ ಪಕ್ಷಕ್ಕೆ ಲಾಭಾವಾಗಲಿದೆ ಎಂಬ ಕುರಿತು ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.

Seema.R | news18-kannada
Updated:October 16, 2019, 1:17 PM IST
  • Share this:
ನವದೆಹಲಿ(ಅ. 16): ವಿಪಕ್ಷ ನಾಯಕರಾದ ಬಳಿಕ ಸಿದ್ದರಾಮಯ್ಯ ಇದೇ ಮೊದಲ ಬಾರಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಉಪಚುನಾವಣೆ ಸೇರಿದಂತೆ ರಾಜ್ಯ ರಾಜಕೀಯ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ. 

ಉಪಚುನಾವಣಾ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮಗೊಳಿಸುವ ಸಂಬಂಧ ಚರ್ಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಆಹ್ವಾನಿಸಿದ್ದರು. ಇಂದು ಸಂಜೆ 5 ಗಂಟೆಗೆ ಅವರ ಸಭೆ ನಿಗದಿಯಾಗಿತ್ತು. ಆದರೆ ತುರ್ತು ಮಾತುಕತೆ ನಡೆಸುವ ಸಂಬಂಧ 12ಗಂಟೆಗೆ ಭೇಟಿಯಾಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೈ ಕಮಾಂಡ್​ ಸೂಚನೆ ನೀಡಿತು . ಈ ಸೂಚನೆ ಹಿನ್ನೆಲೆ ಅವರು 12ಗಂಟೆಗೆ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಉಪಚುನಾವಣೆಯಲ್ಲಿ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿದೆ. ಇನ್ನು ಪಕ್ಷ ತೊರೆದಿರುವ ಅನರ್ಹ ಶಾಸಕರ ಸ್ಥಾನಕ್ಕೆ ಯಾರಿಗೆ ಟಿಕೆಟ್​ ನೀಡಿದರೆ ಪಕ್ಷಕ್ಕೆ ಲಾಭಾವಾಗಲಿದೆ ಎಂಬ ಕುರಿತು ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.

ಕಳೆದೆರಡು ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಕೆಸಿ ವೇಣುಗೋಪಾಲ್​ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಅದನ್ನು ಹೈ ಕಮಾಂಡ್​ಗೆ ನೀಡಿದ್ದರು. ಈ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದರೆ ಹೇಗೆ ಎಂಬ ಗೆಲುವಿನ ಲೆಕ್ಕಾಚಾರ, ಪ್ರಚಾರ ತಂತ್ರ  ಕುರಿತು ಅವರು ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಐಟಿ ದಾಳಿ ಕುರಿತು ನಾಯಕರು ಸಮಲೋಚನೆ ನಡೆಸಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ

ವಿಪಕ್ಷ ಸ್ಥಾನಕ್ಕಾಗಿ ಸಾಕಷ್ಟು ಲಾಬಿ ಮಾಡಿದ ಸಿದ್ದರಾಮಯ್ಯ ಅವರ ಭೇಟಿಗೆ ಈ ಹಿಂದೆ ಹೈ ಕಮಾಂಡ್​ ನಿರಾಕರಿಸಿತ್ತು. ಎರಡು ಮೂರು ಬಾರಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದರೂ ವಿಫಲರಾಗಿದ್ದರು. ವಿಪಕ್ಷ ಸ್ಥಾನಕ್ಕೆ ಮೂಲ ಕಾಂಗ್ರೆಸ್ಸಿಗರಿಗೆ ಸೋನಿಯಾ ಗಾಂಧಿ ಮಣೆಹಾಕುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿತು. ಇದಕ್ಕಾಗಿ ಮಧುಸೂದನ್​ ಮಿಸ್ತ್ರಿ ನೇತೃತ್ವದಲ್ಲಿ ಕಾಂಗ್ರೆಸ್​​ ನಾಯಕರ ಅಭಿಪ್ರಾಯ ಸಂಗ್ರಹವನ್ನು ಹೈ ಕಮಾಂಡ್​ ನಡೆಸಿತು.ಬಳಿಕ ಹೈ ಕಮಾಂಡ್​ ಅಧಿವೇಶನಕ್ಕೆ ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಅವರನ್ನು ವಿಪಕ್ಷ ನಾಯಕರಾಗಿ ಘೋಷಿಸಿತ್ತು. ಭೇಟಿ ವೇಳೆ ವಿಪಕ್ಷ ನಾಯಕನ ಆಯ್ಕೆ ಮಾಡಿದಕ್ಕೆ ಸೋನಿಯಾ ಗಾಂಧಿ ಕೃತಜ್ಞತೆ ಸಲ್ಲಿಸಿದರು ಎನ್ನಲಾಗಿದೆ.

ಸಭೆ ಬಳಿಕ ಮಾತನಾಡಿದ ಅವರು  ವಿಪಕ್ಷ ನಾಯಕನಾಗಿ ಆಯ್ಕೆಯಾದ ಮೇಲೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರಲಿಲ್ಲ. ಇವತ್ತು ಭೇಟಿಗೆ ಸಮಯ ಕೊಟ್ಟಿದ್ದರು ಹೀಗಾಗಿ ಭೇಟಿಯಾಗಿದ್ದೇನೆ. ವಿಪಕ್ಷ ನಾಯಕನನ್ನಾಗಿ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸಿದ್ದೇನೆ ಎಂದರು.

ಮತ್ತೊಮ್ಮೆ ಉಪಚುನಾವಣೆ ಜವಾಬ್ದಾರಿ ಸಿದ್ದರಾಮಯ್ಯ ಹಗಲಿಗೆ?

ರಾಜ್ಯದಲ್ಲಿ ಸದ್ಯ ಚುನಾವಣೆ ಎದುರಿಸುವ ಸಾಮರ್ಥ್ಯ ಸಿದ್ದರಾಮಯ್ಯ ಅವರಿಗಿದೆ ಎಂಬ ವಿಶ್ವಾಸದಲ್ಲಿ ಪಕ್ಷ ಮತ್ತೊಮ್ಮೆ ಈ ಜವಾಬ್ದಾರಿಯನ್ನು ಅವರ ಹೆಗಲಿಗೆ ಏರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಮರ್ಥವಾಗಿ ಮಾತನಾಡುವ ಚಾಕಚಕ್ಯತೆ ಸಿದ್ದರಾಮಯ್ಯ ಅವರಿಗೆ ಇದೆ. ಸದ್ಯ ಡಿಕೆ ಶಿವಕುಮಾರ್​ ತಿಹಾರ್​ ಜೈಲಿನಲ್ಲಿದ್ದು, ಪರಮೇಶ್ವರ್​ ಐಟಿ ದಾಳಿಗೆ ನಲುಗಿದ್ದಾರೆ. ಲೋಕಸಭಾ ಚುನಾವಣಾ ಸೋಲಿನ ಬಳಿ ಮಲ್ಲಿಕಾರ್ಜುನ ಖರ್ಗೆ ಸೈಡ್​ ಲೈನ್​ ಆಗಿದ್ದು, ಚುನಾವಣೆ ಎದುರಿಸುವ ಸಾಮರ್ಥ್ಯ ಸಿದ್ದರಾಮಯ್ಯಗೆ ಮಾತ್ರ ಇದೆ ಎಂಬ ಮಾತು ಕೂಡ ಹೈ ಕಮಾಂಡ್​ ಅಂಗಳದಲ್ಲಿ ಕೇಳಿ ಬಂದಿದೆ.

ಇದನ್ನು ಓದಿ: ಚುನಾವಣಾ ಪ್ರಚಾರಕ್ಕೆ ಕರೆಸಿ ಹಲವು ತಾಸು ಕಾಯಿಸುತ್ತಿರುವ ಮಹಾರಾಷ್ಟ್ರ ಬಿಜೆಪಿ; ಬಿಎಸ್ವೈ ಅಸಮಾಧಾನ

ಕಾಂಗ್ರೆಸ್​ ಶಾಸಕರ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತದ ಲೋಪಗಳನ್ನು ಜನರ ಮುಂದಿಡುವ ಬಗ್ಗೆ ಅವರು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆ ಲೋಕಸಭೆ ಬಳಿಕ ಮತ್ತೊಮ್ಮೆ ಅವರಿಗೆ ಉಪಚುನಾವಣಾ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

(ವರದಿ : ಧರಣೀಶ್​ ಬೂಕನಕೆರೆ)

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading