ಮಂಡ್ಯ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾ ನಿಯಮಗಳು (Corona Rules) ಅತೀ ಹೆಚ್ಚು ಉಲ್ಲಂಘನೆ ಆಗಿದ್ದರೆ ಅದು ಬಿಜೆಪಿ (BJP) ಅವರಿಂದಲೇ. ಒಬ್ಬ ಮಂತ್ರಿ (Minister) ಮಾಸ್ಕ್ (Mask)ಹಾಕದೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾನೆ. ಹೀಗಿರುವಾಗ ಸಾಮಾನ್ಯ ಜನ ಕೊರೊನಾ ನಿಯಮವನ್ನ ಹೇಗೆ ಪಾಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ತಾಲ್ಲೂಕಿನ ಗೌಡಹಳ್ಳಿ ಗೇಟ್ ಬಳಿ ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಕೊರೋನಾ ನಿಯಮಗಳನ್ನು ಅತೀ ಹೆಚ್ಚು ಉಲ್ಲಂಘನೆ ಮಾಡುತ್ತಿರುವುದು ಬಿಜೆಪಿ ಅವರು. ಬಿಜೆಪಿ ಅವರು ಯಾವಾಗಲೂ ಡಬಲ್ ಸ್ಟ್ಯಾಂಡರ್ಡ್ ನವರೇ.. ಅವರಿಗೆ ಯಾವ ಸಿಂಗಲ್ ಸ್ಟ್ಯಾಂಡರ್ಡ್ ಇದೆ..? ಬಿಜೆಪಿಯವರು ಯಾವಾಗಲೂ ಹೇಳುವುದು ಒಂದು ಮಾಡುವುದು ಇನ್ನೊಂದು. ಇವತ್ತು ಏನಾದರೂ ಕೊರೊನಾ ನಿಯಮ ಉಲ್ಲಂಘನೆ ಹಾಗಿದ್ರೆ, ಅದು ಬಿಜೆಪಿ ಅವರಿಂದಲೇ ಜಾಸ್ತಿ ಉಲ್ಲಂಘನೆ ಹಾಗಿದೆ ಎಂದು ವಾಗ್ದಾಳಿ ನಡೆಸಿದ್ರು.
ಅವನ್ಯಾರೋ ಕತ್ತಿ ಇದಾನಲ್ಲಾ ಅವನು ಮಾಸ್ಕ್ ಹಾಕೋದೆ ಇಲ್ಲ..
ಇನ್ನು ಸಚಿವ ಉಮೇಶ್ ಕತ್ತಿ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ, ಅವನು ಯಾವನೋ ಕತ್ತಿ ಇದ್ದಾನಲ್ಲ ಮಾಸ್ಕ್ ಹಾಕದೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾನೆ. ಇವರೆಲ್ಲ ಮಂತ್ರಿಯಾಗಲಿಕ್ಕೆ ಲಾಯಕ್ಕಾ.? ಇವರ ಮೇಲೆ ಸರ್ಕಾರ ಯಾಕೆ ಕೇಸ್ ಹಾಕಿಲ್ಲ..? ಇವರಿಗೆ ಸರ್ಕಾರ ನಡೆಸಲಿಕ್ಕೆ ಯೋಗ್ಯತೆ ಇದ್ಯಾ..? ಅಂತ ಪ್ರಶ್ನಿಸಿದ್ರು. ಅಲ್ಲದೆ ಮಂತ್ರಿ ಮಾಸ್ಕ್ ಹಾಕಲಿಲ್ಲ ಅಂದ್ರೆ, ಬೇರೆಯವರು ಯಾಕೇ ಮಾಸ್ಕ್ ಹಾಕಬೇಕು. ಬೇರೆಯವರಿಗೆ ಫೈನ್ ಹಾಕ್ತಾರೆ, ಕೇಸ್ ಹಾಕ್ತಾರೆ. ಹಿಗಾಗಿ ಮಂತ್ರಿ ಮೇಲೆ ಕೇಸ್ ಹಾಕಬೇಕು ತಾನೆ ಅಂತ ಸಚಿವ ಉಮೇಸ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ: ಮಾಸ್ಕ್ ಕಡ್ಡಾಯವಲ್ಲ ಎಂದ ಸಚಿವ Umesh Katti.. ಮತ್ಯಾಕೆ ಜನಸಾಮಾನ್ಯರಿಗೆ ದಂಡ ಹಾಕುತ್ತಿದ್ದೀರಿ..?
ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯಲು ಅಸಾಧ್ಯ
ವೀಕೆಂಡ್ ಲಾಕ್ಡೌನ್ ಕುರಿತು ಮಾತನಾಡಿದ ಸಿದ್ದರಾಮಯ್ಯ, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯಲು ಅಸಾಧ್ಯ. ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನ್ ಮಾಡಲಿ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅವುಗಳು ಸರಿಯಾಗಿ ಪಾಲನೆಯಾಗುವಂತೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಹೀಗೆ ವೀಕೆಂಡ್ ಲಾಕ್ಡೌನ್ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಎಂದರು.
ಇನ್ನು ಮೊನ್ನೆಯಷ್ಟೆ ಕಾಳಿ ಮಠದ ಋಷಿಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಅಲ್ಲಿ ಮಸೀದಿ ಇದ್ರೆ ಮಸೀದಿ, ದೇವಸ್ಥಾನ ಇದ್ರೆ ದೇವಸ್ಥಾನ. ದೇವಸ್ಥಾನ ಕೆಡುವಿ ಮಸೀದಿ ಕಟ್ಟೋದಾಗಲಿ, ಮಸೀದಿ ಕೆಡವಿ ದೇವಸ್ಥಾನ ಕಟ್ಟೋದು ಮಾಡಬಾರದು. ಈಗ ಹೇಗಿದೆ ಹಾಗೆ ಯತಾಸ್ಥಿತಿ ಮುಂದುವರೆಸಿಕೊಂಡು ಹೋಗಲಿ ಅಂತ ತಿಳಿಸಿದ್ರು. ಒಟ್ಟಾರೆ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗರ ವಿರುದ್ದ ಗುಡುಗಿದ್ದು, ಇದಕ್ಕೆ ಬಿಜೆಪಿಯವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ: Covid Test Reportನಲ್ಲಿ ಗೋಲ್ಮಾಲ್ ಮಾಡಿದ್ರೆ ಲ್ಯಾಬ್ಗಳ ಲೈಸೆನ್ಸ್ ರದ್ದು: ಸಚಿವ ಸುಧಾಕರ್ ಎಚ್ಚರಿಕೆ
ಏರ್ಪೋರ್ಟ್ನಲ್ಲಿ ಕೋವಿಡ್ ಟೆಸ್ಟ್ ಗೋಲ್ ಮಾಲ್ ಆರೋಪಕ್ಕೆ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಸುಧಾಕರ್ನ ನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ, ಆ ರೀತಿಯಲ್ಲಿ ಇದ್ದರೆ ಕ್ರಮ ಕೈಗೊಳ್ಳುತ್ತೇವೆ. ತಪ್ಪು ವರದಿ ನೀಡಿದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಕಾನೂನು ಕ್ರಮ ವಹಿಸುತ್ತೇವೆ ಎಂದರು. ಇನ್ನು ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವುದಾದರೆ ಪರವಾನಿಗೆ ಪಡೆದು ಅವರು ಪ್ರತಿಭಟನೆ ಮಾಡಲಿ. ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಕಾಶ ಇದೆ. ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ ಎಂದು ಖಾರವಾಗಿಯೇ ಹೇಳಿಕೆ ನೀಡಿದರು.
ವರದಿ - ಸುನೀಲ್ ಗೌಡ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ