ತುಮಕೂರು: ಮತದಾರರ ಪಟ್ಟಿಯ ಮಾಹಿತಿ ಕದ್ದ ಪ್ರಕರಣದಲ್ಲಿ (Voter ID Scam) ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತಾಗಿದ್ದ ಐಎಎಸ್ ಅಧಿಕಾರಿಗಳಿಗೆ (IAS Officers) ರಾಜ್ಯ ಸರ್ಕಾರ (Karnataka Government) ಮತ್ತೆ ಹುದ್ದೆಗಳನ್ನು ನೀಡಿ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಕೆ.ಶ್ರೀನಿವಾಸ್, ಎಸ್ ರಂಗಪ್ಪ ಅವರನ್ನು ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ (EX CM Siddaramaiah) ಅವರು, ಬೆಂಗಳೂರು ಉಸ್ತುವಾರಿಯನ್ನು ವಹಿಸಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಜವಾಬ್ದಾರಿ ಇಲ್ವಾ ಅಂತ ಪ್ರಶ್ನೆ ಮಾಡಿ ಕಿಡಿಕಾರಿದ್ದಾರೆ. ಅಲ್ಲದೇ, ಅಮಾನತಾಗಿದ್ದ ಅಧಿಕಾರಿಗಳನ್ನು ಸರ್ಕಾರ ರಿವೋಕ್ ಮಾಡುವಂತಹ ಅಗತ್ಯ ಇರಲಿಲ್ಲ. ಅವರು ಕೂಡ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ನನ್ನ ಪ್ರಕಾರ ಬೆಂಗಳೂರು ಕಾರ್ಪೊರೇಷನ್ (Bengaluru Corporation) ಕೂಡಾ ಶಾಮೀಲಾಗಿದೆ. ಬೆಂಗಳೂರು ಉಸ್ತುವಾರಿ ಸಿಎಂಗೆ ಜವಾಬ್ದಾರಿ ಇಲ್ವಾ? ಬರಿ ಅಧಿಕಾರಿಗಳಷ್ಟೇನಾ ಜವಾಬ್ದಾರಿ, ಎಲೆಕ್ಷನ್ ಕಮಿಷನ್ ಅವರೇ ಅವರು ಶಾಮೀಲಾಗಿದ್ದಾರೆ ಸಸ್ಪೆಂಡ್ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದ್ದರು. ತಕ್ಷಣ ಅವರನ್ನ ರಿವೋಪ್ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
ಪಂಚಮಸಾಲಿಗೆ 2ಎ ಮೀಸಲಾತಿ ಘೋಷಣೆ ಬಗ್ಗೆ ನನಗೆ ಗೊತ್ತಿಲ್ಲ
ಮೀಸಲಾತಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗದ ಆಯೋಗ ಇದೆ. ಯಾರು ಯಾರಿಗೆ ಮೀಸಲಾತಿ ಕೊಡಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ ಅಂತವರಿಗೆ ಕೊಡಲಿ. ಪಂಚಮಸಾಲಿಗೆ 2ಎ ಮೀಸಲಾತಿ ಘೋಷಣೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ರಿಪೋರ್ಟ್ ಬರಬೇಕು ಅಲ್ವಾ, ಅದನ್ನ ಕೋರ್ಟಿಗೆ ರೆಫರ್ ಮಾಡಿದ್ದಾರೆ. ರಿಪೋರ್ಟ್ ಕೊಟ್ಟ ಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: Belagavi Border Dispute:ನಮ್ಮ ಸಿಎಂ ಬೊಮ್ಮಾಯಿ ಬಹಳ ವೀಕ್ ಇದ್ದಾರೆ-ಮಾಜಿ ಸಿಎಂ ಸಿದ್ದರಾಮಯ್ಯ ಕಟು ಟೀಕೆ
ಇದು ಚುನಾವಣೆಗೋಸ್ಕರ ಮಾಡಿರುವ ಗಿಮಿಕ್
ಎಸ್ಟಿ/ಎಸ್ಸಿ ಸಮುದಾಯಕ್ಕೆ ಶೇ.17 ಮೀಸಲಾತಿ ನೀಡಿ, ಎಸ್ಸಿಗೆ ಶೇ.15 ರಿಂದ ಶೇ.17, ಎಸ್ಟಿಗೆ ಶೇ.3 ರಿಂದ ಶೇ.7 ಕ್ಕೆ ಹೆಚ್ಚಳ ಮಾಡಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಶೇ.50 ಮೀಸಲಾತಿ ಇದೆ. ಶೇ.56 ಮೀಸಲಾತಿ ಮಾಡಬೇಕು ಎಂದರೇ ಅದಕ್ಕೆ ರೂಲ್ಸ್ ಇದೆ. 9ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕು, ಅದು ಮಾಡಿದ್ದಾರಾ ಇಲ್ಲ. ಡಬಲ್ ಇಂಜಿನ್ ಸರ್ಕಾರ ಅಲ್ವಾ? ಮೊದಲು ಅದನ್ನು ಮಾಡಿಸಿಕೊಂಡು ಬರಬೇಕು ತಾನೇ. ಕಣ್ಣೋರೆಸೋ ತಂತ್ರ ಇದು ಚುನಾವಣೆಗೋಸ್ಕರ ಮಾಡಿರುವ ಗಿಮಿಕ್ ಇದು. ಮಿಲ್ಲರ್ ಆಯೋಗ ವರದಿ ವಿರೋಧ ಮಾಡಿದವರು ಯಾರು? ಮಂಡಲ್ ಕಮಿಷನ್ ಕಮಿಟಿ ವಿರೋಧ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದರು.
ಇನ್ನು, ಅಮಾನತ್ತಾಗಿದ್ದ ಕೆ.ಶ್ರೀನಿವಾಸ್ ಅವರನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ, ಎಸ್ ರಂಗಪ್ಪ ಅವರನ್ನು ರಾಜ್ಯ ಖನಿಜ ನಿಗಮದ ಕಾರ್ಯಕಾರಿ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ. ಅಮಾನತ್ತಾದ ಒಂದೇ ತಿಂಗಳಿನಲ್ಲಿ ಅಧಿಕಾರಿಗಳಿಗೆ ಹುದ್ದೆ ನೀಡಿ ಸರ್ಕಾರ ನೇಮಕ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ