ಯಡಿಯೂರಪ್ಪ ಸುಳ್ಳುಗಾರ, ಈಶ್ವರಪ್ಪನಿಗೆ ಮೆದುಳೇ ಇಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ

sushma chakre | news18
Updated:October 25, 2018, 7:56 PM IST
ಯಡಿಯೂರಪ್ಪ ಸುಳ್ಳುಗಾರ, ಈಶ್ವರಪ್ಪನಿಗೆ ಮೆದುಳೇ ಇಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ
  • Advertorial
  • Last Updated: October 25, 2018, 7:56 PM IST
  • Share this:
ನಾಗರಾಜ, ನ್ಯೂಸ್​18 ಕನ್ನಡ

ಶಿವಮೊಗ್ಗ (ಅ. 25):  'ಯಡಿಯೂರಪ್ಪ ಸಂಸದ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದರು?  ಈಗಾಗಲೇ ಅಧಿಕಾರ, ಹಣದ ರುಚಿ ನೋಡಿದ್ದಾರೆ. ಹಾಗಾಗಿ, ಈಶ್ವರಪ್ಪ, ಯಡಿಯೂರಪ್ಪ ಇಬ್ಬರೂ ಆಸ್ತಿ ಮಾಡಲು ಮುಗಿಬಿದ್ದಿದ್ದಾರೆ. ತಮ್ಮದೇ ಇಷ್ಟೆಲ್ಲ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುವ ಈಶ್ವರಪ್ಪನಿಗೆ ಮೆದುಳೇ ಇಲ್ಲ'

ಶಿವಮೊಗ್ಗದಲ್ಲಿ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಮೇಲೆ ಹರಿಹಾಯ್ದ ರೀತಿಯಿದು. ಯಡಿಯೂರಪ್ಪನವರು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಪರವಾಗಿ ಇಂದು ಪ್ರಚಾರ ನಡೆಸಿದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುರುಬ ಮಠ ಕಟ್ಟಬೇಕಾದ ಸಮಯದಲ್ಲಿ ಹಣ ಸಂಗ್ರಹ ಮಾಡಬೇಕು ಎಂದು ಹೇಳಿದ್ದೆವು.  ಆಗ ಮೊದಲು ಸಭೆಗೆ ಆಗಮಿಸಿದ್ದ ಈಶ್ವರಪ್ಪ ನಂತರ ದುಡ್ಡು ಸಂಗ್ರಹ ಮಾಡಿಕೊಡಬೇಕಾಗುತ್ತದೆ ಎಂದು ಹೇಳಿದ ನಂತರ 2ನೇ ಸಭೆಗೆ ಚಕ್ಕರ್ ಹಾಕಿದ್ದರು.
ಕೊನೆಗೆ ಮಠದ ಉದ್ಘಾಟನೆ ಕಾರ್ಯಕ್ರಮಕ್ಕೂ ಬರಲಿಲ್ಲ. ಇಂಥವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಆಪರೇಷನ್ ಕಮಲದಿಂದಾಗಿ ಒಗ್ಗೂಡುತ್ತಿದ್ದಾರಾ ಬಿಜೆಪಿ ವಿರೋಧಿಗಳು? ಇದು ಸಿದ್ದರಾಮಯ್ಯ ಗೇಮ್ ಪ್ಲಾನಾ?

ಈಶ್ವರಪ್ಪನವರದು ಒಂದು ಕತೆಯಾದರೆ ಯಡಿಯೂರಪ್ಪನವರದು ಇನ್ನೊಂದು ಕತೆ. ಯಡಿಯೂರಪ್ಪನವರ ಮಾತನ್ನು ನೀವು ಎಷ್ಟು ಬಾರಿ ನಂಬುತ್ತೀರಾ? ಬಂಗಾರಪ್ಪನವರಲ್ಲಿ ಮಾತ್ರ ನಾಯಕತ್ವದ ಗುಣವಿತ್ತು. ಬರಗಾಲ ಬಂದ ಸಮಯದಲ್ಲಿ ಬಂಗಾರಪ್ಪ ಎಲ್ಲ ವರ್ಗದವರಿಗೆ ಬಿತ್ತನೆ ಬೀಜ, ಗೊಬ್ಬರ ನೀಡಿದ್ದರು. ರೈತ ನಾಯಕ ಎಂದೆಲ್ಲ ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪ ಎಂದಾದರೂ ಇಂತಹ ಕೆಲಸ ಮಾಡಿದ್ದಾರಾ? ಚೆಕ್ ಮೂಲಕ ಲಂಚ ಪಡೆದ ವ್ಯಕ್ತಿ ಯಡಿಯೂರಪ್ಪ. ಅಂಥವರಿಂದ ನಾವು ಪ್ರಾಮಾಣಿಕತೆಯ ಮಾತು ಕೇಳಬೇಕಾಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
First published:October 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ