ಮುನಿಸು ಮರೆತ ನಾಯಕರು; ಚಾಮುಂಡೇಶ್ವರಿಯಲ್ಲಿ ಇಂದು ಸಿದ್ದರಾಮಯ್ಯ- ಜಿ.ಟಿ. ದೇವೇಗೌಡ ಜಂಟಿ ಪ್ರಚಾರ

ಸಿದ್ದರಾಮಯ್ಯ ಸೋಲು ಕಂಡ ಕ್ಷೇತ್ರದಿಂದಲೇ ಇಂದು ಈ ಇಬ್ಬರು ನಾಯಕರು ಪ್ರಚಾರ ನಡೆಸಲಿದ್ದಾರೆ. ರಾಜಕೀಯ ದ್ವೇಷ ಮರೆತು ಒಂದಾಗಿರುವ ನಾಯಕರು ಸಿಎಚ್​ ವಿಜಯಶಂಕರ್​ ಪರ ಇಂದು ಇಡೀ ದಿನ ಪ್ರಚಾರ ನಡೆಸಲು ಮುಂದಾಗಿದ್ದಾರೆ. 

Seema.R | news18
Updated:April 14, 2019, 11:21 AM IST
ಮುನಿಸು ಮರೆತ ನಾಯಕರು; ಚಾಮುಂಡೇಶ್ವರಿಯಲ್ಲಿ ಇಂದು ಸಿದ್ದರಾಮಯ್ಯ- ಜಿ.ಟಿ. ದೇವೇಗೌಡ ಜಂಟಿ ಪ್ರಚಾರ
ಸಿದ್ದರಾಮಯ್ಯ- ಜಿಟಿ ದೇವೇಗೌಡ
Seema.R | news18
Updated: April 14, 2019, 11:21 AM IST
ಮೈಸೂರು (ಏ.14): ಮೈತ್ರಿ ಸರ್ಕಾರವಿದ್ದರೂ ಮೈಸೂರಿನ ಪ್ರಮುಖ ನಾಯಕರಾದ ಜೆಡಿಎಸ್​ನ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಮುನಿಸು ಮಾತ್ರ ಶಮನವಾಗಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಇದು ಬಹಿರಂಗವಾಗಿತ್ತು. ಮೈಸೂರು ಟಿಕೆಟ್ ಜೆಡಿಎಸ್​​ ಕೈ ತಪ್ಪಿದಕ್ಕೆ ಕಾರಣ ಕೂಡ ಸಿದ್ದರಾಮಯ್ಯ ಅವರೇ ಎಂದು ಜಿಟಿಡಿ ಬೊಟ್ಟು ಮಾಡಿ ತೋರಿಸಿ, ಅವರ ವಿರುದ್ಧ ಅತೃಪ್ತಿ ಹೊರಹಾಕಿದ್ದರು. ಆದರೆ ಈಗ ಮೈತ್ರಿಗೆ ಕಟ್ಟು ಬಿದ್ದಿರುವ ನಾಯಕರು ಮೈಸೂರು ಕಾಂಗ್ರೆಸ್​ ಅಭ್ಯರ್ಥಿ ಪ್ರಚಾರ ಜಂಟಿ ಪ್ರಚಾರಕ್ಕೆ   ಇಬ್ಬರು ನಾಯಕರು ಸಿದ್ದವಾಗಿದ್ದಾರೆ.

ಕಳೆದ ವಿಧಾನಸಭೆಯಲ್ಲಿ ಬದ್ಧವೈರಿಗಳಾಗಿದ್ದ ಇವರು ಮೈತ್ರಿ ಮೂಲಕ ಸರ್ಕಾರ ರಚಿಸಿದ್ದರೂ ಒಂದಾಗಿರಲಿಲ್ಲ. ಚುನಾವಣಾ ಪ್ರಚಾರ ಪ್ರಾರಂಭವಾದಾಗ ಮೈಸೂರು ಅಖಾಡದಿಂದ ಜಿಟಿಡಿ 10 ದಿನಗಳ ಕಾಲ ನಾಪತ್ತೆಯಾಗಿ ಇದನ್ನು ಸ್ಪಷ್ಟಪಡಿಸಿದ್ದರು. ಈ ಕುರಿತು ಅಸಮಾಧಾನ ಹೊರ ಹಾಕಿದ ಸಿದ್ದರಾಮಯ್ಯ,  ಮೈಸೂರಿನಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದ್ದರು.  ಇದಕ್ಕೆ ಉತ್ತರಿಸಿದ ಜೆಡಿಎಸ್​ ನಾಯಕರು ಮಂಡ್ಯದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದರು. ಇದಾದ ಬಳಿಕವೂ ಮೈಸೂರು ಪ್ರಚಾರದಿಂದ ದೂರ ಉಳಿದ ಜಿಟಿಡಿ ಬಳಿಕ  ನಡೆದ ಸಂಧಾನದಲ್ಲಿ ನಾಯಕರು ಒಟ್ಟಿಗೆ ಪ್ರಚಾರ ಮಾಡುವ ಭರವಸೆ ನೀಡಿದ್ದರು.

ಚಾಮುಂಡೇಶ್ವರಿ ಸೋಲಿನ ಬಳಿಕ ಕಡುವೈರಿಗಳಾಗಿದ್ದ ಜಿಟಿಡಿ ಸಿದ್ದರಾಮಯ್ಯಗೆ ಈಗ ಮೈತ್ರಿ ಮೂಲಕ ಚುನಾವಣೆ ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರೆ ಮಾತ್ರ ನಾವು ಮೈಸೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಜಿಟಿಡಿ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಮಂಡ್ಯದಲ್ಲಿ ಪ್ರಚಾರ ನಡೆಸಿದ ಸಿದ್ದರಾಮಯ್ಯ ಜೊತೆಯಲ್ಲಿ ಜಿಟಿಡಿ ವೇದಿಕೆ ಹಂಚಿಕೊಳ್ಳಲು ಸಿದ್ದವಾಗಿದ್ದಾರೆ.

ಇದನ್ನು ಓದಿ: ಕೈ ನೋವು ತುಂಬಾ ಇದೆ, ಯಮನೇ ಬಂದು ಕರೆದ್ರೂ 16ರವರೆಗೆ ಪ್ರಚಾರ ಮಾಡುತ್ತೇನೆ; ನಟ ದರ್ಶನ್​

ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲು ಕಂಡ ಕ್ಷೇತ್ರದಿಂದಲೇ ಇಂದು ಈ ಇಬ್ಬರು ನಾಯಕರು ಪ್ರಚಾರ ನಡೆಸಲಿದ್ದಾರೆ. ರಾಜಕೀಯ ದ್ವೇಷ ಮರೆತು ಒಂದಾಗಿರುವ ನಾಯಕರು ಸಿಎಚ್​ ವಿಜಯಶಂಕರ್​ ಪರ ಇಂದು ಇಡೀ ದಿನ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಬೆಳಗ್ಗೆ 11ಕ್ಕೆ ಕಡಕೊಳ ಮತ್ತು ಶ್ರೀರಾಂಪುರ ವ್ಯಾಪ್ತಿ, ಮಧ್ಯಾಹ್ನ 12.30ಕ್ಕೆ ಜಯಪುರ ಮತ್ತು ಬೀರಿಹುಂಡಿ, ಮಧ್ಯಾಹ್ನ 3ಕ್ಕೆ ಇಲವಾಲ, ಹಿನಕಲ್, ಹೂಟಗಳ್ಳಿ, ಸಂಜೆ 5ಕ್ಕೆ ಸಿದ್ದಲಿಂಗಪುರ, ಶ್ರೀರಾಂಪುರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೈತ್ರಿ ನಾಯಕರಲ್ಲಿಯೇ ಮುನಿಸು ವ್ಯಕ್ತವಾದರೆ ಅದು ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದಿದ್ದ ಸಿದ್ದರಾಮಯ್ಯ ಈಗ ಒಟ್ಟಿಗೆ ಪ್ರಚಾರ ನಡೆಸುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಲಿದ್ದಾರೆ. ಈ ಮೂಲಕ ಮೈಸೂರಿನ ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
Loading...

First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...