ಸಿದ್ದರಾಮಯ್ಯರಂಥ ಕೋಮುವಾದಿ ಹುಡುಕಲು ಸಾಧ್ಯವಾ?: ಹೆಚ್​ಡಿಕೆ ಆರೋಪ

ನಾನು ಯಾರ ಹಂಗಿನಲ್ಲೂ ಇಲ್ಲ. ಇಂಥವರಿಗೆ ಬೆಂಬಲ ಕೊಡುತ್ತೇನೆ ಎಂದ ಯಾರಿಗೂ ಬರೆದುಕೊಟ್ಟಿಲ್ಲ. ನಾನು ರಾಜಕಾರಣ ಮಾಡುವುದು ನನ್ನ ವೈಯಕ್ತಿಕ ಈರ್ಷೆಗಳಿಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

news18-kannada
Updated:October 27, 2019, 6:24 PM IST
ಸಿದ್ದರಾಮಯ್ಯರಂಥ ಕೋಮುವಾದಿ ಹುಡುಕಲು ಸಾಧ್ಯವಾ?: ಹೆಚ್​ಡಿಕೆ ಆರೋಪ
ಹೆಚ್​.ಡಿ. ಕುಮಾರಸ್ವಾಮಿ
  • Share this:
ಚಿಕ್ಕೋಡಿ(ಅ. 27): ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ಧಾಗ ಯಾವ ವರ್ಗದ ಜನರಿಗೆ ಸಮುದಾಯ ಭವನಗಳನ್ನಾಗಲೀ ಸರ್ಕಾರೀ ಭೂಮಿಯನ್ನಾಗಲೀ ಕೊಟ್ಟಿದ್ದಾರಾ? ಇವರು ಎಲ್ಲಾ ವರ್ಗದವರನ್ನು ಗೌರವಿಸಿದ್ದಾರಾ? ಯಾರಿಗೆ ಸಮುದಾಯ ಭವನ ನೀಡಿದರು. ಯಾರನ್ನು ಕಡೆಗಳಿಸಿದರು ಎಂಬ ಅಂಕಿ ಅಂಶವನ್ನು ಅವರು ತಿಳಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಬಿಜೆಪಿಯಂಥ ಕೋಮುವಾದಿಗಳಿಗೆ ಕುಮಾರಸ್ವಾಮಿ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಅವರು ತಿರುಗೇಟು ನೀಡಿದರು. ಕಾಗವಾಡದ ಜುಗುಳ ಗ್ರಾಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಂಥ ಕೋಮುವಾದಿಯನ್ನು ಹುಡುಕಲು ಸಾಧ್ಯವಾ? ಅವರ ಬಗ್ಗೆ ಚರ್ಚೆ ಮಾಡಲು ಬೇಕಾದಷ್ಟು ವಿಷಯಗಳಿವೆ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ: ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇದೇ ಮೊದಲಬಾರಿ ಭೇಟಿ ನೀಡಿದ ಸಚಿವ ಆರ್​ ಅಶೋಕ್

ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವ ಹಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನವೇ ಬೆಂಬಲ ನೀಡುತ್ತಿದ್ದೆ. ಆಗ ನೀವೇ ಮುಖ್ಯಮಂತ್ರಿ ಆಗುವಿರಂತೆ ಬನ್ನಿ ಎಂದು ಪ್ರಧಾನ ಮಂತ್ರಿ ಅವರಿಂದಲೇ ಆಹ್ವಾನವಿತ್ತು ಎಂದವರು ಹೇಳಿಕೊಂಡರು.

ನಾನು ಯಾರ ಹಂಗಿನಲ್ಲೂ ಇಲ್ಲ. ಇಂಥವರಿಗೆ ಬೆಂಬಲ ಕೊಡುತ್ತೇನೆ ಎಂದ ಯಾರಿಗೂ ಬರೆದುಕೊಟ್ಟಿಲ್ಲ. ನಾನು ರಾಜಕಾರಣ ಮಾಡುವುದು ನನ್ನ ವೈಯಕ್ತಿಕ ಈರ್ಷೆಗಳಿಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಉಪಚುನಾವಣೆ ನಂತರ ಏಪ್ರಿಲ್​ನಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಚುನಾವಣೆಗೆ ಯಾವುದೇ ತುರ್ತು ಅಗತ್ಯವಿಲ್ಲ. ಜನರ ಸಮಸ್ಯೆ ಮೊದಲು ಬಗೆಹರಿಸಲು. ಆ ಬಳಿಕ ಚುನಾವಣೆ ಬಗ್ಗೆ ಯೋಚಿಸೋಣ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಹಾಸ್ಟೆಲ್​ ವಾರ್ಡನ್​ ದೌರ್ಜನ್ಯಕ್ಕೆ ಬಾಲಕ ಬಲಿ; ಪೋಷಕರ ಆಕ್ರೋಶ13 ಜಿಲ್ಲೆಗಳಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರದ ಬೆನ್ನು ಬಿದ್ದು ಹೋದರೆ ಜನರು ಏನು ಮಾಡಬೇಕು. ಸರ್ಕಾರ ಬಿದ್ದು ಹೋಗಿ ರಾಜ್ಯಪಾಲರ ಆಡಳಿತ ಬಂದರೆ ಜನರ ಗತಿ ಏನು ಎಂದು ಯೋಚಿಸುತ್ತಿದ್ದೇನೆ. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುತ್ತಾರೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ನನಗೆ ಅದು ಮುಖ್ಯವಲ್ಲ. ರಾಜ್ಯದ ಜನರ ಹಿತ ಮಾತ್ರ ಮುಖ್ಯ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ಸಿದ್ದರಾಮಯ್ಯ ಬಾದಾಮಿ ಬಿಟ್ಟರೆ ಎಲ್ಲಿಗೆ ಹೋಗಿದ್ದಾರೆ? ಒಂದು ಕ್ಷೇತ್ರಕ್ಕೆ ಹೋಗಿ ಬಂದರೆ ಆಗಲ್ಲ. ಚುನಾವಣೆ ನಡೆಸುವುದೇ ಇವರಿಗೆ ಕೆಲಸವಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಮಾತನಾಡುತ್ತಾ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಕುಮಾರಸ್ವಾಮಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಅವರು ನೀಡುವ ಹೇಳಿಕೆ ನೋಡಿದರೆ ಬಿಜೆಪಿಗೆ ಬೆಂಬಲ ನೀಡುತ್ತಿರುವಂತಿದೆ. ಕೋಮುವಾದಿಗಳಿಗೆ ಅವರ ಬೆಂಬಲ ಇದ್ದಂತಿದೆ ಎಂದು ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದರು.

(ವರದಿ: ಲೋಹಿತ್ ಶಿರೋಳ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading