Chalavadi Narayanaswamy: ಸಿದ್ದರಾಮಯ್ಯ ನಯವಂಚಕ ದಲಿತ ವಿರೋಧಿ: ಬಿಜೆಪಿ ಎಂಎಲ್​ಸಿ

ಸಿದ್ದರಾಮಯ್ಯ / ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ / ಛಲವಾದಿ ನಾರಾಯಣಸ್ವಾಮಿ

Siddaramaiah: 224 ಕ್ಷೇತ್ರದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು ಅದನ್ನು ಕೇಳಲು ಇವರು ಯಾರು? ಸಿದ್ದರಾಮಯ್ಯ ಸೋಲುವ ಭೀತಿಯಲ್ಲಿ ವರುಣಾಗೆ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದರು.

  • News18 Kannada
  • 5-MIN READ
  • Last Updated :
  • Mysore, India
  • Share this:

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ನಯವಂಚಕ ದಲಿತ ವಿರೋಧಿ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣ ಸ್ವಾಮಿ (BJP MLA Chalavadi Narayana Swamy) ವಾಗ್ದಾಳಿ ನಡೆಸಿದ್ದಾರೆ. 2006ರಲ್ಲಿ ದಲಿತರು ಸಿದ್ದರಾಮಯ್ಯಗೆ ರಕ್ಷಣೆ ನೀಡಿದ್ದರು. ಈ ಬಾರಿ ದಲಿತರು ಸಿದ್ದರಾಮಯ್ಯ ಕೈ ಹಿಡಿಯುವುದಿಲ್ಲ. ಸಿದ್ದರಾಮಯ್ಯರಿಂದ ದಲಿತ ನಾಯಕತ್ವ (Dalit Leadership) ಕೊನೆ ಆಯಿತು. ಸಿದ್ದರಾಮಯ್ಯಗಾಗಿ ದಲಿತರು ಪ್ರಾಣ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿದ್ದು ಸಿದ್ದರಾಮಯ್ಯ ಮತ್ತು ಅವರ ಪಟಾಲಂ ಎಂದು ಆರೋಪಿಸಿದರು.


ಸಿದ್ದರಾಮಯ್ಯಗೆ ತಾಕತ್ತಿದ್ದಿದ್ದರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಬೇಕಿತ್ತು? ಯಾಕೆ ಚಾಮುಂಡೇಶ್ವರಿ ಬಿಟ್ಟು ವರುಣಗೆ ಏಕೆ ಬಂದರು ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನೆ ಮಾಡಿದರು.


ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾಗಲಿದೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಸ್ವಾಮಿ, ಇದು ಚುನಾವಣಾ ಗಿಮಿಕ್ ಒಂದು ದಿನದ ಡ್ರಾಮಾ ಎಂದು ಲೇವಡಿ ಮಾಡಿದರು. 5 ರಿಂದ 6 ಬಾರಿ ಎಂಎಲ್‌ಎ ಆದವರಿಗೆ ಅಫಿಡೆವೆಟ್ ಹಾಕುವುದು ಗೊತ್ತಿಲ್ಲವಾ? ಚುನಾವಣಾ ಆಯೋಗವೇನು ನಮ್ಮ ಅಪ್ಪನದಾ? ಇದು ಕೇವಲ ಸುಮ್ಮನೆ ಆರೋಪ ಅಷ್ಟೆ ಎಂದು ಕಿಡಿಕಾರಿದರು.




ನೀವ್ಯಾಕೆ ಬಾದಾಮಿಗೆ ಹೋಗಿದ್ರಿ?


ವರುಣಗೆ ಬರಲು ವಿ ಸೋಮಣ್ಣ ಯಾರು ಸಿದ್ದರಾಮಯ್ಯ ಪ್ರಶ್ನೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ಇದನ್ನು ಕೇಳಲು ಸಿದ್ದರಾಮಯ್ಯ ಯಾರು? ಇವರು ಏಕೆ ಬಾದಾಮಿಗೆ ಹೋಗಿದ್ರು? ಸೋನಿಯಾ ಗಾಂಧಿ ಏಕೆ ಬಳ್ಳಾರಿಗೆ ಬಂದಿದ್ದರು ? ರಾಹುಲ್ ಗಾಂಧಿ ವಯನಾಡಿಗೆ ಏಕೆ ಹೋಗಿದ್ದರು? ಸಿದ್ದರಾಮಯ್ಯ ಕೋಲಾರಕ್ಕೆ ಏಕೆ ಹೋಗುತ್ತೇನೆ ಅಂತಾ ಇದ್ದರು ಎಂದು ಪ್ರಶ್ನೆ ಮಾಡಿದರು.


ಇದನ್ನೂ ಓದಿ: Kanakapura: ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದರ ಹಿಂದಿನ ರಹಸ್ಯ ತಿಳಿಸಿದ ಡಿಕೆಶಿ


224 ಕ್ಷೇತ್ರದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು ಅದನ್ನು ಕೇಳಲು ಇವರು ಯಾರು? ಸಿದ್ದರಾಮಯ್ಯ ಸೋಲುವ ಭೀತಿಯಲ್ಲಿ ವರುಣಾಗೆ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದರು.

First published: