ಸಿದ್ದರಾಮಯ್ಯ ಒಕ್ಕಲಿಗ ವಿರೋಧಿಯಲ್ಲ; ಅದೆಲ್ಲಾ ಜೆಡಿಎಸ್ ಗಿಮಿಕ್: ಚಲುವರಾಯಸ್ವಾಮಿ

ಸಿದ್ದರಾಮಯ್ಯರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸಿ ಜೆಡಿಎಸ್ ಚುನಾವಣಾ ಗಿಮಿಕ್ ಮಾಡುತ್ತಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್​ಡಿಕೆಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

news18-kannada
Updated:November 21, 2019, 3:55 PM IST
ಸಿದ್ದರಾಮಯ್ಯ ಒಕ್ಕಲಿಗ ವಿರೋಧಿಯಲ್ಲ; ಅದೆಲ್ಲಾ ಜೆಡಿಎಸ್ ಗಿಮಿಕ್: ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
  • Share this:
ಮಂಡ್ಯ(ನ. 21): ಹಿಂದುತ್ವದ ಅಜೆಂಡಾ ಇಟ್ಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ.  ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬರೀ ದೇಶ ಸುತ್ತುವ ಕೆಲಸ‌ ಮಾಡುತ್ತಿದ್ದಾರೆ. ಇದರಿಂದ ಜನರಿಗೇನು ಉಪಯೋಗವಿಲ್ಲ‌ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ದೇಶದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ನೀತಿಯಿಂದ ನಮ್ಮಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅನೇಕ ಕೈಗಾರಿಕೆಗಳು ಆರ್ಥಿಕ ನಷ್ಟ ಎದುರಿಸಿ ಬಾಗಿಲು ಮುಚ್ಚಿವೆ. ಯುವಕರನ್ನು ನಂಬಿಸಿ ಮೋಸ ಮಾಡಿದ್ದಾರೆ. ಆರ್ಥಿಕ ನಷ್ಟದಿಂದ ಯುವಕರು ಬೀದಿಗೆ ಬಂದಿದ್ದಾರೆ ಎಂದು ಚಲುವರಾಯಸ್ವಾಮಿ ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಯಾವತ್ತೂ ಒಕ್ಕಲಿಗ ವಿರೋಧಿಯಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ಅನೇಕ ಜನಪರ ಕೆಲಸಗಳಾಗಿವೆ. ಮಂಡ್ಯ ಜಿಲ್ಲೆಯ ಅಭಿವೃದ್ದಿ ಆಗಿದೆ. ಈಗ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆದ ಅನುದಾನದ ಕಾಮಗಾರಿ ನಡೆಯುತ್ತಿವೆ. ಬೇರೆ ಯಾವುದೇ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದವರು ಹೇಳಿದ್ದಾರೆ.

ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಕೈಲಾದಷ್ಟು ಸಾಲಮನ್ನಾ ಮಾಡಿದ್ದರು. ಬೇರೆಯವರ ರೀತಿ ಸಾಲಮನ್ನಾ ಮಾಡ್ತಿನಿ ಅಂತಾ ರೈತರನ್ನ ಬೀದಿಗೆ ತರಲಿಲ್ಲ. ಸಿದ್ದರಾಮಯ್ಯರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸಿ ಜೆಡಿಎಸ್ ಚುನಾವಣಾ ಗಿಮಿಕ್ ಮಾಡುತ್ತಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್​ಡಿಕೆಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

'ಟೀಕೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಸಿದ್ದರಾಮಯ್ಯನವರಿಗಿದೆ'

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಇಲ್ಲ ಎಂಬ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ| ಜಿ. ಪರಮೇಶ್ವರ್​​, ಟೀಕೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಸ್ವತಃ ಸಿದ್ದರಾಮಯ್ಯರಿಗೆ ಇದೆ. ಸಿದ್ದರಾಮಯ್ಯರನ್ನ ಯಾರಾದರೂ ಟೀಕೆ ಮಾಡಿದರೆ ಅದಕ್ಕೆ ಅವರೇ ಉತ್ತರ ಕೊಡುತ್ತಾರೆ. ನಾವುಗಳು ಕೂಡ ಅವರ ಬೆಂಬಲಕ್ಕೆ ನಿಂತಿದ್ದೇವೆ, ಮುಂದೆಯೂ ನಿಲ್ಲುತ್ತೇವೆ ಎಂದವರು ಪಣತೊಟ್ಟಿದ್ದಾರೆ.

ಇದನ್ನೂ ಓದಿ : ಅಪರೇಷನ್ ಕಮಲಕ್ಕೆ ಬಿಜೆಪಿಗೆ ಎಂಟಿಬಿ ನಾಗರಾಜ್​​​​ ಸಾಲ ನೀಡಿದ್ದಾರೆ; ಮಾಜಿ ಸಿಎಂ ಸಿದ್ಧರಾಮಯ್ಯಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಆದರೆ ಎಷ್ಟು ಸ್ಥಾನ ಎಂಬುದನ್ನ ಮುಂದಿನ ತಿಂಗಳು 5ನೇ ತಾರೀಖಿನಂದು ಹೇಳುತ್ತೇನೆ ಎನ್ನುವ ಮೂಲಕ ಚಲುವರಾಯಸ್ವಾಮಿ ಅವರು ಕಾಂಗ್ರೆಸ್​ಗೆ ಗೆಲುವು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published: November 21, 2019, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading