• Home
  • »
  • News
  • »
  • state
  • »
  • Siddaramaiah: ಕ್ಷೇತ್ರ ಹುಡುಕಾಟದಲ್ಲಿರೋ ಸಿದ್ದರಾಮಯ್ಯಗೆ ಮತ್ತೊಂದು ಆಫರ್

Siddaramaiah: ಕ್ಷೇತ್ರ ಹುಡುಕಾಟದಲ್ಲಿರೋ ಸಿದ್ದರಾಮಯ್ಯಗೆ ಮತ್ತೊಂದು ಆಫರ್

ಸಿದ್ದರಾಮಯ್ಯ

ಸಿದ್ದರಾಮಯ್ಯ

ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್​​ಗಾಗಿ ಡಿಕೆ ಶಿವಕುಮಾರ್ ಆಪ್ತ ನಾಗರಾಜ್ ಛಬ್ಬಿ ಕೂಡಾ ಪ್ರಯತ್ನ ಮಾಡ್ತಿದಾರೆ. ಛಬ್ಬಿ ಕಳೆದ ಕೆಲ ವರ್ಷಗಳಿಂದ ಪ್ರಯತ್ನ ಮಾಡ್ತಿದಾರೆ. ಸಮಸ್ಯೆ ಬಗೆಹರಿಸಿಕೊಳ್ಳಲು ನಮಗೇನೂ ಹೇಳಿಲ್ಲ ಎಂದರು.

  • Share this:

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಚುನಾವಣೆಗೆ (Assembly Election 2023) ಸ್ಪರ್ಧಿಸೋದು ಬೇಡ ಎಂದಿದ್ದ ಮಾಜಿ ಸಚಿವ ಸಂತೋಷ್ ಲಾಡ್ (Former Minister Santosh Lad) ಇದೀಗ ತಮ್ಮ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ (Airport, Hubballi) ಮಾತನಾಡಿದ ಅವರು, ಸಿದ್ದರಾಮಯ್ಯ ಕಲಘಟಗಿ (Kalaghatagi) ಕ್ಷೇತ್ರಕ್ಕೆ ಬಂದ್ರೆ ನಾನು ಬಿಟ್ಟು ಕೊಡ್ತೀನಿ ಎಂದರು. ಸಿದ್ದರಾಮಯ್ಯರನ್ನ ಕರ್ನಾಟಕದ ಎಲ್ಲಾ ಕಡೆ ಕರೆಯುತ್ತಿದ್ದಾರೆ. ಕಲಘಟಗಿ ಬಂದ್ರೂ ಸ್ವಾಗತ ಕೋರುತ್ತೇನೆ ಎಂದು ಲಾಡ್ ತಿಳಿಸಿದರು‌. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC DK Shivakumar) ಚುನಾವಣೆ ನಿಲ್ಲಬಾರದು ಅನ್ನೋದು ನನ್ನ ವೈಯಕ್ತಿಕ ಹೇಳಿಕೆ.


ಸಿದ್ದರಾಮಯ್ಯ ನಿಲ್ಲದಿದ್ರೆ ನಮಗೆ ಒಳ್ಳೆಯದು ಆಗುತ್ತೆ. ಅವರ ಪ್ರಚಾರದಿಂದ (Election Campaign) ಹೆಚ್ಚು ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಹಾಗಾಗಿ ನಾನು ವೈಯಕ್ತಿಕವಾಗಿ ನಿಲ್ಲಬಾರದು ಎಂದು ಹೇಳಿದ್ದೆ ಅಂತ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.


ಇದು ಈಗ ಅದು ಮುಗಿದು ಕಥೆ. ಚುನಾವಣೆಗೆ ನಿಲ್ಲಬಾರದು ಅನ್ನೋದು ನನ್ನ ವೈಯಕ್ತಿಕ ಹೇಳಿಕೆ. ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ ಅವರನ್ನ ಕೇಳಬೇಕೆಂದರು‌. ರೌಡಿಶೀಟರ್ಗಳನ್ನ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಾಡ್, ಇದು ಸರಿಯಲ್ಲ. ಬಿಜೆಪಿಯವರು ತತ್ವ ಸಿದ್ದಾಂತದ ಬಗ್ಗೆ ಮಾತಾಡ್ತಾರೆ. ಆದ್ರೆ ರೌಡಿಶೀಟರ್ಗಳನ್ನ ಸೇರಿಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.


ನಾಗರಾಜ್ ಛಬ್ಬಿ ಬಗ್ಗೆ ಮಾತು


ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್​​ಗಾಗಿ ಡಿಕೆ ಶಿವಕುಮಾರ್ ಆಪ್ತ ನಾಗರಾಜ್ ಛಬ್ಬಿ ಕೂಡಾ ಪ್ರಯತ್ನ ಮಾಡ್ತಿದಾರೆ. ಛಬ್ಬಿ ಕಳೆದ ಕೆಲ ವರ್ಷಗಳಿಂದ ಪ್ರಯತ್ನ ಮಾಡ್ತಿದಾರೆ. ಸಮಸ್ಯೆ ಬಗೆಹರಿಸಿಕೊಳ್ಳಲು ನಮಗೇನೂ ಹೇಳಿಲ್ಲ ಎಂದರು.


Siddaramaiah invited to contest Assembly election from kalaghatagi saklb mrq
ಸಂತೋಷ್ ಲಾಡ್, ಮಾಜಿ ಸಚಿವ


ಚುನಾವಣೆಗಾಗಿ ಸಾಮೂಹಿಕ ವಿವಾಹ ಮಾಡ್ತಿಲ್ಲ


ಕ್ಷೇತ್ರದಲ್ಲಿ 4 ಸಾವಿರ ಸಾಮೂಹಿಕ ಮದುವೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಾಡ್, ಇದು ರಾಜಕೀಯಕ್ಕಾಗಿ ಅಲ್ಲ. ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಕಳೆದ ಕೆಲ ವರ್ಷಗಳಿಂದ ಮದುವೆ ಮಾಡುತ್ತಿದ್ದೇವೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಮೂಹಿಕ ಮದುವೆಗೆ ಕರೆ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಸಾಮೂಹಿಕ ಮದುವೆ ಮಾಡಿರಲಿಲ್ಲ. ಹೀಗಾಗಿ ಈ ಸಲ ಸಾಮೂಹಿಕ ಮದುವೆ ಮಾಡುತ್ತಿರುವ ವಿಚಾರ ಹೇಳಿದರು.


ಇದನ್ನೂ ಓದಿ:  Actor Chetan: ಟೀಂ ಇಂಡಿಯಾದಲ್ಲೂ ಎಸ್‌ಸಿ-ಎಸ್‌ಟಿಗೆ ಮೀಸಲಾತಿ ಕೊಡಿ! ಆ ದಿನಗಳ ನಟ ಚೇತನ್ ಆಗ್ರಹ


ಬಹಳ ವರ್ಷಗಳಿಂದ ಗಡಿ ವಿವಾದ ಇದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಾರು ಅಲ್ಲಿ ಗಲಾಟೆ ಮಾಡ್ತಾರೆ ಅವರನ್ನು ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿದರು.


ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಎಂದ ಸಿಎಂ


ಜನಸಂಕಲ್ಪ ಯಾತ್ರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜನಸಂಕಲ್ಪ ಯಾತ್ರೆ, ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟದಲ್ಲಿ ಯಶಸ್ವಿಯಾಗಿದೆ. ಚುನಾವಣೆ ವರ್ಷ ಹಾಗಾಗಿ ಜನರ ಬಳಿ ಹೋಗ್ತೀದಿವಿ ಎಂದರು.


Siddaramaiah invited to contest Assembly election from kalaghatagi saklb mrq
ಬಸವರಾಜ್ ಬೊಮ್ಮಾಯೊ, ಸಿಎಂ


ಪ್ರತಿ ಚುನಾವಣೆಯಂತೆ ಜನರ ಬಳಿ ಹೋಗುತ್ತಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವ ಕೆಲಸ ಅಗುತ್ತಿದೆ ಎಂದರು.


ಇದನ್ನೂ ಓದಿ:  HD Kumaraswamy ಪ್ರಧಾನಮಂತ್ರಿ ಆಗೋ ಸಾಧ್ಯತೆ, ಡಿಸೆಂಬರ್ 18ರ ನಂತರ ಬಿಗ್​ ಸರ್ಪ್ರೈಸ್: CM Ibrahim


ವಿವಾದಿತ ಗೋಡೆ ಬರಹ ಬಗ್ಗೆ ಸಿಎಂ ಪ್ರತಿಕ್ರಿಯೆ


ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಗೋಡೆ ಬರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಅಲ್ಲಿನ ಪೊಲೀಸರು ತನಿಖೆ ಮಾಡ್ತಿದಾರೆ ಎಂದರು. ತವರು ಕ್ಷೇತ್ರಕ್ಕೆ ಹೋಗ್ತಿದಿರಾ ಅನ್ನೋ ಪ್ರಶ್ನೆಗೆ ಯಾಕೆ ಹೋಗಬಾರದಾ ಎಂದು ನಕ್ಕರು.

Published by:Mahmadrafik K
First published: