• Home
  • »
  • News
  • »
  • state
  • »
  • Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆ ದೇವರು; ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಮಾತ್ರ ಉಳಿಗಾಲವಂತೆ!

Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆ ದೇವರು; ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಮಾತ್ರ ಉಳಿಗಾಲವಂತೆ!

ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಶಕ್ತಿ ದೇವತೆ

ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಶಕ್ತಿ ದೇವತೆ

  • Share this:

ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರು ಕೋಲಾರದಿಂದ (Kolar) ಸ್ಪರ್ಧೆ ಮಾಡಲು ಮುಂದಾಗಿದ್ದು, ಹೈ ಕಮಾಂಡ್ (Congress High Command) ನಿರ್ಧಾರವೇ ಅಂತಿಮ ಅಂತ ಹೇಳಿದ್ದಾರೆ.  ಇತ್ತ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯ ಅವರು ಸೋಲುವುದು ಖಚಿತ. ಅವರು ಬೇರೆ ಯಾವುದಾದರೂ ಸುರಕ್ಷಿತ ನೋಡಿಕೊಳ್ಳುವುದು ಸೂಕ್ತ ಎಂದು ವಿಪಕ್ಷಗಳ ನಾಯಕರು ಸಲಹೆ ನೀಡುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳಲ್ಲಿ ನಿಲ್ಲುವಂತೆ ಅವರ ಮನೆ ದೇವರು ಸೂಚನೆ ನೀಡಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಮಂಡ್ಯದ (Mandya) ತಮ್ಮ ಮನೆ ದೇವರ ದೇವಾಲಯಕ್ಕೆ ಭೇಟಿ ನೀಡಿದಾಗ, ದೇವಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ನೀಡಿದೆ.


ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ತಾಯಿ ದೇವಾಲಯಕ್ಕೆ ಯತೀಂದ್ರ ಸಿದ್ರಾಮಯ್ಯ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದರು. ಈ ವೇಳೆ ದೇಗುಲದ ಅರ್ಚಕ ಲಿಂಗಣ್ಣನ ಮೇಲೆ ಆವಾಹನೆಯಾಗಿದ್ದ ಶಕ್ತಿ ದೇವತೆ, ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಸೂಚನೆ‌ ನೀಡಿದೆ.
'ಎರಡು ಕಡೆ ಬಾಹುಬಲ ಚಾಚಬೇಕು'


ಒಂದೇ ಕಡೆ ನಿಂತ್ರೆ ಗೆಲುವು ಕಷ್ಟ, ಪ್ರಬಲ ಶಕ್ತಿಗಳ ವಿರೋಧವಿದೆ. ಎರಡು ಕಡೆ ಬಾಹುಬಲ ಚಾಚಬೇಕು ಎರಡು ಭುಜಬಲದಲ್ಲಿ ನಿಲ್ಲಬೇಕೆಂದು ದೇವಿ ಆದೇಶ ನೀಡಿದ್ದು, ಒಂದೇ ಕಡೆ ನಿಂತರೆ ರಾಜಕೀಯ ಭವಿಷ್ಯಕ್ಕೆ ಕುತ್ತು ಎಂದು ಮನೆತನದ ಶಕ್ತಿ ದೇವತೆ ಆದೇಶಿಸಿದೆ. ಅಲ್ಲದೇ ಪ್ರತಿ ವರ್ಷ ಬಂದು ನನ್ನ ದರ್ಶನ ಪಡೆಯಬೇಕು ಎಂದು ಸೂಚಿಸಿದೆ.


ಇದನ್ನೂ ಓದಿ: Panchamasali Reservation: ಒಕ್ಕಲಿಗರಿಗೂ ಇಲ್ಲ, ಲಿಂಗಾಯತರಿಗೂ ಇಲ್ಲ ಮೀಸಲಾತಿ; ಸರ್ಕಾರದ ಹೊಸ ಮೀಸಲಾತಿಗೆ ಹೈಕೋರ್ಟ್​​ ತಡೆ


ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಶಕ್ತಿ ದೇವತೆ


ಯತೀಂದ್ರ ಸಿದ್ದರಾಮಯ್ಯ ಅವರು ಮಾಜಿ ಸಚಿವ ನರೇಂದ್ರಸ್ವಾಮಿ ಜೊತೆ ಮನೆ ದೇವರ ಪೂಜೆಗೆ ಬಂದಿದ್ದ ವೇಳೆ ಘಟನೆ ನಡೆದಿದ್ದು, ಕಳೆದ ಬಾರಿಯ ಚುನಾವಣೆ ವೇಳೆ ಕೂಡ ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಇದೇ ಶಕ್ತಿದೇವತೆ ಭವಿಷ್ಯ ನುಡಿತ್ತು. ಮನೆ ದೇವರ ಆದೇಶದಂತೆ ಎಂಬಂತೆ ಸಿದ್ದರಾಮಯ್ಯ ಅವರು ಈ ಬಾರಿಯೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರಾ? ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


ಎಲ್ಲಿವರೆಗೂ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿವರೆಗೂ ಮೀಸಲಾತಿ ಇರುತ್ತೆ


ಇನ್ನು, ರಾಯಚೂರಿನ ತಿಂಥಣಿಯಲ್ಲಿ ನಿನ್ನೆ ಹಾಲುಮತ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್‌ ವಿಶ್ವನಾಥ, ಸತೀಶ್ ಜಾರಕಿಹೊಳಿ ಹಾಗೂ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಭಾಗವಹಿಸಿದ್ದರು. ವೇದಿಕೆ ಮೇಲೆ ಸಿದ್ದರಾಮಯ್ಯ ಬರ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು.


ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಶಕ್ತಿ ದೇವತೆ


ಇದನ್ನೂ ಓದಿ: Bengaluru: ಮಿಡ್‌ನೈಟ್‌ ಕಿಡ್ನಾಪ್, ಸುಳಿವು ನೀಡಿತ್ತು ಕೂಗು! ಸಿನಿಮಾ ಸ್ಟೈಲ್‌ ಚೇಸಿಂಗ್ ಮಾಡಿ ಕಿಡ್ನಾಪರ್ಸ್​​ಗಳಿಂದ ಯುವಕನ ರಕ್ಷಣೆ


ಸಿದ್ದರಾಮಯ್ಯ ಮಾತನಾಡಿ, ಕುರುಬರಲ್ಲಿ ಹಾಲುಮತ ಎಂದು ಕರೆಸಿಕೊಳ್ಳುತ್ತಾರೆ. ನಾವು ಮೂಲತಃ ಕುರಿಕಾಯುವರು. ಕುರುಬರಲ್ಲಿಯೂ ಅನೇಕ ಒಳಪಂಗಡಗಳು ಇವೆ. ಜಾತಿ ಹೆಸರಿನಲ್ಲಿ ಶೋಷಣೆ ನಡೆಯುತ್ತೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿವರೆಗೆ ಮೀಸಲಾತಿ ಇರುತ್ತೆ ಅಂತ ಹೇಳಿದರು.

Published by:Sumanth SN
First published: