Siddaramaiah: 2017ರಲ್ಲಿ ಮಾಂಸ ತಿಂದು ಮೈಸೂರು ದಸರಾ ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ!?

2017ರ ಮೈಸೂರು ದಸರಾ ಅಂಬಾರಿ ದಿನ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದೆ ಪೂಜೆ ಮಾಡುವ ಭಾಗ್ಯವನ್ನು ಸಿದ್ದರಾಮಯ್ಯಗೆ ಕೊಡಲಿಲ್ಲ ಅಂತ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಆರೋಪ

ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಆರೋಪ

  • Share this:
ಮೈಸೂರು: ಸಿದ್ದರಾಮಯ್ಯನವರ (Siddaramaiah) ಮೇಲೆ ಮಡಿಕೇರಿಯಲ್ಲಿ (Madikeri) ಮೊಟ್ಟೆ (Egg) ಎಸೆದಿದ್ದ ಪ್ರಕರಣ ದಿನಕ್ಕೊಂದು ತಿರುವು (Twist) ಪಡೆಯುತ್ತಿದೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಮಾಂಸಾಹಾರ (Non Veg) ಸೇವಿಸಿ ದೇವಸ್ಥಾನವೊಂದಕ್ಕೆ (Temple) ಹೋಗಿದ್ದರು ಎಂಬ ಆರೋಪ ಕೇಳಿ ಬಂದಿದ್ದು. ಇದು ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಪ್ರಕರಣ ಬಿಸಿಯಾಗಿರುವಾಗಲೇ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. 2017ರಲ್ಲಿ ಸಿದ್ದರಾಮಯ್ಯ ಸಿಎಂ (CM) ಆಗಿದ್ದಾಗ ಮೈಸೂರು ದಸರಾದಲ್ಲಿ (Mysore Dasara) ಅಂಬಾರಿ ಪೂಜೆ (Ambari Pooje) ನೆರವೇರಿಸಿದ್ದರು. ಈ ವೇಳೆ ಅವರು ಮಾಂಸಾಹಾರ ಸೇವಿಸಿ ಅಂಬಾರಿಗೆ ಪೂಜೆ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಮೈಸೂರು ಕೊಡಗು ಸಂಸದ (Mysore Kodagu MP) ಪ್ರತಾಪ್ ಸಿಂಹ (Pratap Simha) ಹಾಗೂ ಮೈಸೂರು ಮಾಜಿ ಮೇಯರ್ (Mysore Ex-Mayor) ರವಿಕುಮಾರ್ (Ravikumar) ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.

ಮಾಂಸಾಹಾರ ತಿಂದು ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ?

2017ರ ಮೈಸೂರು ದಸರಾ ಅಂಬಾರಿ ದಿನ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಆಯೋಜಿಸಿದ್ದ ಭೋಜನ ಕೂಟದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆಗ ಸಿದ್ದರಾಮಯ್ಯ ನಾನ್ ವೆಜ್ ತಿಂದು, ಬಳಿಕ ಅಂಬಾರಿ ಪೂಜೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.ನಾನು ಜ್ಯೂಸ್ ಕುಡಿದು ಬಂದಿದ್ದೆ ಎಂದ ಪ್ರತಾಪ್ ಸಿಂಹ

ಅಂದು ಆ ಭೋಜನ ಕೂಟದಲ್ಲಿ ನಾನೂ ಭಾಗಿಯಾಗಿದ್ದೆ, ಆದರೆ ನಾನು ನಾನ್‌ ವೆಜ್ ತಿಂದಿಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ. ನಾನು ಜ್ಯೂಸ್ ಕುಡಿದಿದ್ದೆ. ಆಗ ಸಿದ್ದರಾಮಯ್ಯ ಊಟ ಮಾಡ್ರಪ್ಪ ಅಂದ್ರು. ಇಲ್ಲ ಉಪವಾಸ ಇದ್ದೀವಿ ಅದಕ್ಕೆ ಜ್ಯೂಸ್ ಮಾತ್ರ ಸಾಕು ಎಂದಿದ್ದೆ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

“ಮತ್ತೊಮ್ಮೆ ಪೂಜೆಗೆ ಚಾಮುಂಡೇಶ್ವರಿ ಅವಕಾಶ ಕೊಡಲಿಲ್ಲ”

2017ರಲ್ಲಿ ಸಿದ್ದರಾಮಯ್ಯ ನಾನ್ ವೆಜ್‌ ತಿಂದು ಅಂಬಾರಿಗೆ ಪೂಜೆ ಮಾಡಿದ್ದರು. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಅಂತ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Siddu V/s Yatnal: ಸಿದ್ದರಾಮಯ್ಯಗೆ ತಾಕತ್ತು ಇದ್ರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ, ಯತ್ನಾಳ್ ಸವಾಲ್

“ಮತ್ತೊಮ್ಮೆ ಪೂಜೆಗೆ ಚಾಮುಂಡೇಶ್ವರಿ ಅವಕಾಶ ಕೊಡಲಿಲ್ಲ”

2017ರಲ್ಲಿ ಸಿದ್ದರಾಮಯ್ಯ ನಾನ್ ವೆಜ್‌ ತಿಂದು ಅಂಬಾರಿಗೆ ಪೂಜೆ ಮಾಡಿದ್ದರು. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಅಂತ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಾಜಿ ಮೇಯರ್‌ರಿಂದಲೂ ಗಂಭೀರ ಆರೋಪ

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಾಜಿ ಮೇಯರ್ ರವಿಕುಮಾರ್ 2017ರ ದಸರಾ ಅಂಬಾರಿ ದಿನ ಅಂದಿನ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಊಟ ಮಾಡಿದ್ದರು. ಅವತ್ತು ಅವರ ಊಟದ ಟೇಬಲ್‍ನಲ್ಲಿ ಅವರ ಜೊತೆ ನಾನು ಕುಳಿತಿದ್ದೆ. ಲಲಿತ್ ಮಹಲ್ ಹೋಟೆಲ್‍ನಲ್ಲಿ ಮಾಂಸಹಾರ – ಸಸ್ಯಹಾರದ ಊಟದ ವ್ಯವಸ್ಥೆ ಇತ್ತು. ಸಿದ್ದರಾಮಯ್ಯ ಅವರು ನಾಟಿ ಕೋಳಿ ಊಟ ಮಾಡಿದ್ದರು ಅಂತ ಹೇಳಿದ್ದಾರೆ

ಇದನ್ನೂ ಓದಿ: Madikeri Chalo: ಕೊಡಗಿಗೆ ಟಿಪ್ಪು ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ?; ಪ್ರತಾಪ್ ಸಿಂಹ

“ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನ್ ತಪ್ಪು”

ಕೊಡಗಿಗೆ ಭೇಟಿ ನೀಡಿದ್ದ ವೇಳೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ತೆರಳಿದ್ದರು ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಕಮಲ ಶಾಸಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್​ ಮುತಾಲಿಕ್, ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನು ತಪ್ಪು ಎಂದು ಸಿದ್ದರಾಮಯ್ಯ ಅವರ ಬ್ಯಾಟ್ ಬೀಸಿದ್ದಾರೆ.
Published by:Annappa Achari
First published: