ವಿದೇಶ ಪ್ರವಾಸದಲ್ಲೂ ಮಾಜಿ ಸಿಎಂ ಹವಾ: ಸಿದ್ದರಾಮಯ್ಯ ಜತೆ ಸೆಲ್ಫಿಗಾಗಿ ಮುಗಿಬಿದ್ದ ಕನ್ನಡಿಗರು

news18
Updated:September 7, 2018, 8:59 PM IST
ವಿದೇಶ ಪ್ರವಾಸದಲ್ಲೂ ಮಾಜಿ ಸಿಎಂ ಹವಾ: ಸಿದ್ದರಾಮಯ್ಯ ಜತೆ ಸೆಲ್ಫಿಗಾಗಿ ಮುಗಿಬಿದ್ದ ಕನ್ನಡಿಗರು
news18
Updated: September 7, 2018, 8:59 PM IST
ಕೃಷ್ಣಾ ಜಿ.ವಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.7):  ಮೊದಲ ಬಾರಿಗೆ ಕುಟುಂಬ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿದೇಶದಲ್ಲಿಯೂ ಅಭಿಮಾನಿಗಳ  ಸಂಖ್ಯೆ ಕಡಿಮೆ ಇಲ್ಲ.

ರಷ್ಯಾದ ಮಾಸ್ಕೋ ಪ್ರವಾಸದಲ್ಲಿರುವ ಅವರನ್ನು ಕಾಣಲು ಅಲ್ಲಿನ ಕನ್ನಡಿಗರು  ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.  ಪ್ರವಾಸಿತಾಣಗಳಿಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದು, ಅಲ್ಲಿನ ಭಾರತೀಯರು ಸಿದ್ದರಾಮಯ್ಯ ಅವರೊಂದಿಗೆ ಫೋಟೊಗೆ ಫೋಸ್​ ನೀಡಿದ್ದಾರೆ.ಸದಾ ಪಂಚೆ, ಶರ್ಟ್​ ಮೂಲಕ ಕರ್ನಾಟಕದಲ್ಲಿ ಸರಳವಾಗಿರುವ ಸಿದ್ದರಾಮಯ್ಯ ತಮ್ಮ ಪ್ರವಾಸದಲ್ಲಿ ಸೂಟು ಧಾರಿಯಾಗಿ ಪ್ರವಾಸ ನಡೆಸುತ್ತಿದ್ದಾರೆ. ಅಲ್ಲದೇ ತಮ್ಮನ್ನು ಕಾಣಲು ಬಂದ ವಿದೇಶಿ ಅಭಿಮಾನಿಗಳೊಂದಿಗೆ ಹಸನ್ಮುಖಿಯಾಗಿ ಫೋಟೋಗೆ ಖುಷಿಯಿಂದ ಫೋಸ್ ನೀಡಿದ್ದಾರೆ. ಅಲ್ಲದೇ ಅವರೊಂದಿಗೆ ಮಾತುಕತೆ ನಡೆಸಿ ಅನುಭವ ಹಂಚಿಕೊಂಡಿದ್ದಾರೆ.ವಿದೇಶಿ ಅಭಿಮಾನ ಕಂಡ ಸಿದ್ದರಾಮಯ್ಯ ಕನ್ನಡಿಗರ ಅಭಿಮಾನಕ್ಕೆ ಮನಸೋತಿದ್ದಾರೆ, ಜನರ ಅಭಿಮಾನಕ್ಕೆ ನಾನು ಕ್ಷಣಕಾಲ ವಿಸ್ಮಿತಗೊಂಡಿದ್ದೇನೆ ಎಂದು ಟ್ವೀಟ್​ ಮೂಲಕ ತಮ್ಮ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ.ಸೆ.3ರಂದು 10 ದಿನಗಳ ಕಾಲ ತಮ್ಮ ಮಗ ಯತೀಂದ್ರ, ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಕೆಲವು ರಾಜಕೀಯ ಸ್ನೇಹಿತರೊಂದಿಗೆ ವಿದೇಶ ಪ್ರವಾಸ ನಡೆಸುತ್ತಿದ್ದಾರೆ.

 

 
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ