ಡಾ.ಸುಧಾಕರ್ ಡೀಲ್ ರಾಜ, ಆತನನ್ನು ನಂಬಿ ಮೋಸ ಹೋದೆ; ಸಿದ್ದರಾಮಯ್ಯ ವಾಗ್ದಾಳಿ

ಸುಧಾಕರ್​ ಮೀರ್​ ಸಾಧಕ್​ ರೀತಿ ತಮ್ಮ ಕೆಲಸಕ್ಕಾಗಿ ಸಮಯ ಕಾಯುತ್ತಾರೆ. 17 ಶಾಸಕರು ಪಕ್ಷ ಬಿಡಲು ಸುಧಾಕರ್​ ಕಾರಣ. ಸರ್​ ಅವರು ಪಕ್ಷ ಬಿಡುತ್ತಾರೆ. ಇವರು ಬಿಡುತ್ತಾರೆ ಎನ್ನುತ್ತಿದ್ದ. ನಾನು ಮಾತ್ರ ಪಕ್ಷ ತೊರೆಯುವುದಿಲ್ಲ ಎಂದು ಪ್ರಮಾಣ ಮಾಡಿದ . ಆದರೆ ಬೆಳಗ್ಗೆ 6ಗಂಟೆಗೆ ಮುಂಬೈಗೆ ಹಾರಿದ. ಆತ ಆಡುವುದು ದೊಡ್ಡ ಮಾತು ಮಾಡುವುದು ಮಾತ್ರ ಸಣ್ಣ ಕೆಲಸ. ನಮಗೆ ಸುಳ್ಳು ಹೇಳಿದ ಮೇಲೆ ನಿಮಗೆ ಬಿಡುತ್ತಾನಾ?

Seema.R | news18-kannada
Updated:December 2, 2019, 3:40 PM IST
ಡಾ.ಸುಧಾಕರ್ ಡೀಲ್ ರಾಜ, ಆತನನ್ನು ನಂಬಿ ಮೋಸ ಹೋದೆ; ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ
  • Share this:
ಚಿಕ್ಕಬಳ್ಳಾಪುರ (ಡಿ.02): ಅನರ್ಹ ಶಾಸಕ ಡಾ.ಸುಧಾಕರ್​ ಡೀಲ್​ ರಾಜ. ಆತನನ್ನು ನಂಬಿ ನಾನು ತಪ್ಪು ಮಾಡಿಬಿಟ್ಟೆ. ಈ ಬಗ್ಗೆ ನಾನು ಪಶ್ಚತಾಪ ಪಡುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಲ್ಲಿನ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, 2013ರಲ್ಲಿ ಆಂಜಿನಪ್ಪಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡಲು ನಿರ್ಧಾರವಾಗಿತ್ತು. ಆದರೆ ನಾನೇ ಅವರಿಗೆ ಟಿಕೆಟ್ ತಪ್ಪಿಸಿ ಸುಧಾಕರ್​ಗೆ ಕೊಡಿಸಿದ್ದೆ. ಆದರೆ ಸುಧಾಕರ್​ ನಯ ವಂಚಕ. ದ್ರೋಹ ಮಾಡಿದ ಎಂದು ಕಿಡಿಕಾರಿದರು.

ಸುಧಾಕರ್​ ಮೀರ್​ ಸಾಧಕ್​ ರೀತಿ ತಮ್ಮ ಕೆಲಸಕ್ಕಾಗಿ ಸಮಯ ಕಾಯುತ್ತಾರೆ. 17 ಶಾಸಕರು ಪಕ್ಷ ಬಿಡಲು ಸುಧಾಕರ್​ ಕಾರಣ. ಸರ್​ ಅವರು ಪಕ್ಷ ಬಿಡುತ್ತಾರೆ. ಇವರು ಬಿಡುತ್ತಾರೆ ಎನ್ನುತ್ತಿದ್ದ. ನಾನು ಮಾತ್ರ ಪಕ್ಷ ತೊರೆಯುವುದಿಲ್ಲ ಎಂದು ಪ್ರಮಾಣ ಮಾಡಿದ . ಆದರೆ ಬೆಳಗ್ಗೆ 6ಗಂಟೆಗೆ ಮುಂಬೈಗೆ ಹಾರಿದ. ಆತ ಆಡುವುದು ದೊಡ್ಡ ಮಾತು ಮಾಡುವುದು ಮಾತ್ರ ಸಣ್ಣ ಕೆಲಸ. ನಮಗೆ ಸುಳ್ಳು ಹೇಳಿದ ಮೇಲೆ ನಿಮಗೆ ಬಿಡುತ್ತಾನಾ ಎಂದು ಪ್ರಶ್ನಿಸಿದರು.

 

ಇನ್ನು ಕ್ಷೇತ್ರದಲ್ಲಿ ಅನುದಾನ ಬಂದಿದ್ದರೆ , ಅದು ನಾನು ಕೊಟ್ಟಿದ್ದು. ಅದರಲ್ಲಿ ಲೂಟಿ ಹೊಡೆದ. ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ‌ಕೊಟ್ಟಿದ್ದು ಕೂಡ ನಾನು. 2016-17 ರಲ್ಲಿ ಎಲ್ಲಾ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ಕೊಡುವ ಸಂಬಂಧ ಪ್ರಸ್ತಾಪ ಮಾಡಿದ್ದೇನೆ. ಜನರಿಗೆ ಈಗ ಯಡಿಯೂರಪ್ಪ ಕೊಟ್ಟ ಅಂತ ಜನರಿಗೆ ಮಕ್ಮಲ್​​ ಟೋಪಿ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಯಶವಂತಪುರದಲ್ಲಿ ಕಾಂಗ್ರೆಸ್​ಗೆ ಠೇವಣಿ ಕೂಡ ಸಿಗಲ್ಲ: ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್

ಕುಮಾರಸ್ವಾಮಿ ಸುಧಾಕರ್ ನಿಗಮ ಮಂಡಳಿ ಅಧ್ಯಕ್ಷ ಮಾಡಲು ಇಷ್ಟ ಇರಲಿಲ್ಲ. ಆದರೂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವು. ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದೇವೆ. ಎತ್ತಿನ ಹೊಳೆ ಯೋಜನೆ 14 ಸಾವಿರ ಕೋಟಿ ಯೋಜನೆಗೆ ಮಂಜೂರು ‌ಮಾಡಿದ್ದೇವೆ. ಆದರೂ ಕೂಡ ಆತ ಮೋಸ ಮಾಡಿದ. ಸುಳ್ಳು ನಾಟಕ ಮಾಡುವುದರಲ್ಲಿ ಸುಧಾಕರ್​ ನಿಸ್ಸೀಮ ಎಂದರು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading