ಕೇಂದ್ರದಲ್ಲಿ ನಾವು ಸರ್ಕಾರ ರಚಿಸುತ್ತೇವೆ, ಮತ್ತೆ ಹೊಸ ಬಜೆಟ್​ ಮಂಡಿಸುತ್ತೇವೆ; ಸಿದ್ದರಾಮಯ್ಯ ವಿಶ್ವಾಸ

ನಾವು ಸೊಸೈಟಿ ಸಾಲ ಮನ್ನಾ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಈ ಬಜೆಟ್ ಜಾರಿಯಾಗಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲೂ ಅಧಿಕಾರಕ್ಕೆ ಬರುತ್ತದೆ. ಮತ್ತೆ ನಾವು ಹೊಸ ಬಜೆಟ್ ಮಂಡಿಸುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

sushma chakre | news18
Updated:February 1, 2019, 6:54 PM IST
ಕೇಂದ್ರದಲ್ಲಿ ನಾವು ಸರ್ಕಾರ ರಚಿಸುತ್ತೇವೆ, ಮತ್ತೆ ಹೊಸ ಬಜೆಟ್​ ಮಂಡಿಸುತ್ತೇವೆ; ಸಿದ್ದರಾಮಯ್ಯ ವಿಶ್ವಾಸ
ಸಿದ್ದರಾಮಯ್ಯ
sushma chakre | news18
Updated: February 1, 2019, 6:54 PM IST
ಶ್ರೀನಿವಾಸ್​ ಹಳಕಟ್ಟಿ

ಬೆಂಗಳೂರು (ಫೆ. 1):  ಯಡಿಯೂರಪ್ಪ ನಂ. 1 ರೈತ ವಿರೋಧಿ. ಸಾಲಮನ್ನಾ ಬೇಡ ಅಂತ ಹೇಳಿದವರು ಯಡಿಯೂರಪ್ಪ. ಈ ಬಾರಿ ಬಿಜೆಪಿ ಸೋಲುತ್ತದೆ ಅನ್ನೋದು ಅವರಿಗೂ ಗೊತ್ತಿದೆ, ಜನರಿಗೂ ಗೊತ್ತಾಗಿದೆ, ಇಡೀ ದೇಶಕ್ಕೂ ಗೊತ್ತಾಗಿದೆ ಎಂದು ಮಾಜಿ ಸಿಎಂ  ಸಿದ್ದರಾಮಯ್ಯ ಗುಡುಗಿದ್ದಾರೆ.

ನಾವು ಸೊಸೈಟಿ ಸಾಲವನ್ನ ಮನ್ನಾ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಈ ಬಜೆಟ್ ಜಾರಿಯಾಗಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲೂ ಅಧಿಕಾರಕ್ಕೆ ಬರುತ್ತದೆ. ಮತ್ತೆ ನಾವು ಹೊಸ ಬಜೆಟ್ ಮಂಡಿಸುತ್ತೇವೆ.
ಈ ಬಾರಿ ಬಿಜೆಪಿ ಸೋಲುತ್ತದೆ ಅನ್ನೋದು ಯಡಿಯೂರಪ್ಪನವರಿಗೂ ಗೊತ್ತಿದೆ.  ಈ ಬಾರಿಯ ಚುನಾವಣೆಯಲ್ಲಿಇನ್ನೂ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ. ಪ್ರಾಮಾಣಿಕವಾಗಿ ಜೆಡಿಎಸ್ ಜೊತೆಯಾಗಿ ಚುನಾವಣೆ ಎದುರಿಸಬೇಕು ಎಂಬ ಬಯಕೆ ಇದೆ ಎಂದಿದ್ದಾರೆ.

ಮುಂದಿನ 10 ವರ್ಷಗಳಿಗೆ ಮೋದಿ ಸರಕಾರದ 10 ಆಯಾಮಗಳು

ಕೇಂದ್ರ ಸರ್ಕಾರ ಘೋಷಿಸಿರುವ ಬಜೆಟ್​ನಲ್ಲಿ ನಿರುದ್ಯೋಗಕ್ಕೆ ಪರಿಹಾರವಿಲ್ಲ. 45 ವರ್ಷದ ಹಿಂದೆ ಇದ್ದಷ್ಟು ನಿರುದ್ಯೋಗ ಹೆಚ್ಚಳವಾಗಿದೆ. ಈ ಬಜೆಟ್ ನಿರಾಶಾದಾಯಕ ಬಜೆಟ್. ರೈತರ ಸಾಲಮನ್ನಾ ಮಾಡುವ ನಿರೀಕ್ಷೆಯಿತ್ತು. ದೇಶದ ರೈತರ ನಿರೀಕ್ಷೆ ಹುಸಿಯಾಗಿದೆ. ಮೈತ್ರಿ ಸರ್ಕಾರದ ಸಾಲಮನ್ನಾ ಬಗ್ಗೆ ವ್ಯಂಗ್ಯವಾಡಿದ್ದ ಮೋದಿ ರಾಜ್ಯ ಸರ್ಕಾರ ಲಾಲಿಪಾಪ್ ಕೊಟ್ಟಿದೆ ಅಂದಿದ್ದರು. ಈಗ ಅವರೂ ರೈತರ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Union Budget 2019: 2 ವರ್ಷಗಳ ನಂತರ ಆರೋಗ್ಯ ಕ್ಷೇತ್ರಕ್ಕೆ 61 ಸಾವಿರ ಕೋಟಿ ಮೀಸಲಿಟ್ಟ ಕೇಂದ್ರ ಸರ್ಕಾರ
Loading...

ಪ್ರತಿದಿನ 17 ರೂ. ಕೊಡುವ ಕಿಸಾನ್ ಯೋಜನೆಯನ್ನು ಪೆಪ್ಪರ್​ಮೆಂಟ್​ ಅನ್ನಬೇಕಾ? ಇದು ಜನರಿಗೆ ಮೋಡ ತೋರಿಸೋ ಬಜೆಟ್. ತೆರಿಗೆ ಕಟ್ಟುವವರಿಗೆ 5 ಲಕ್ಷ ಮಿತಿಗೊಳಿಸಿದ್ದಾರೆ. ಇದು ಮಧ್ಯಮ ವರ್ಗದ ಮತ ಸೆಳೆಯೋ ತಂತ್ರವಷ್ಟೆ. ತೆರಿಗೆ ಕಟ್ಟುವವರಿಗೆ 5 ಲಕ್ಷ ಮಿತಿಗೊಳಿಸಿದ್ದಾರೆ. ಕೇಂದ್ರದ ಈ ಬಜೆಟ್ ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯಾಗಿದೆ. ದೇಶದಲ್ಲಿ ಅಚ್ಚೇ ದಿನ್ ಬರಲೇ ಇಲ್ಲ. ಉದ್ಯೋಗ ಸೃಷ್ಟಿ ಆಗಲಿಲ್ಲ. ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ ಹಾಕುತ್ತೇನೆ ಎಂದರು. ಅದು ಕೂಡ ಆಗಲಿಲ್ಲ. 5 ವರ್ಷದಲ್ಲಿ ಲೋಕಪಾಲ್ ನೇಮಕ ಮಾಡಲಿಲ್ಲ. ಜನರಿಗೆ ಮೋದಿ ಸರ್ಕಾರ ದ್ರೋಹ ಮಾಡಿದೆ. ರಾಷ್ಟ್ರೀಯ ಬ್ಯಾಂಕ್ ಗಳ ರೈತರ ಸಾಲವನ್ನ ನಮ್ಮ ಮೈತ್ರಿ ಸರ್ಕಾರ ಮನ್ನಾ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಡ್ಯದಿಂದ ಸುಮಲತಾ ಅಂಬರೀಷ್​ ಸ್ಪರ್ಧೆ; ಕ್ಷೇತ್ರ ಬಿಟ್ಟುಕೊಡಲು ಮನಸ್ಸಿಲ್ಲದೆ ಕಾಂಗ್ರೆಸ್​ ಹೂಡಿದ ತಂತ್ರವೇ?

ಮಂಡ್ಯದಿಂದ ಸುಮಲತಾ ಅಂಬರೀಷ್​ ಸ್ಪರ್ಧಿಸಬೇಕೆಂದು ಅಲ್ಲಿನ ಕಾರ್ಯಕರ್ತರು ಒತ್ತಡ ಹೇರುತ್ತಿರುವುದು ನಿಜ. ಆದರೆ, ಸುಮಲತಾ ಸ್ಪರ್ಧೆ ವಿಚಾರ ಆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಮೈಸೂರಿಂದ ನನಗೂ ಸ್ಪರ್ಧೆ ಮಾಡಿ ಅಂತ ನನ್ನ ಬೆಂಬಲಿಗರು ಹೇಳುತ್ತಿದ್ದಾರೆ. ಅದಕ್ಕೆಲ್ಲ ಏನು ಮಾಡೋಕಾಗುತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರ್ಕಾರದ ಅಸ್ತಿತ್ವದ ಬಗ್ಗೆ ನಾವು ಗೊಂದಲದಲ್ಲಿಲ್ಲ. ಆದರೆ, ಯಡಿಯೂರಪ್ಪ ಗೊಂದಲದಲ್ಲಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕೆಂದು ಕನವರಿಸುತ್ತಿದ್ದಾರೆ. ನಮ್ಮ ಪಕ್ಷದ ಅತೃಪ್ತರು ರಾಜೀನಾಮೆ ನೀಡುವುದಿಲ್ಲ. ಅವರು ಕ್ಷೇತ್ರದಲ್ಲಿದ್ದಾರೆ. ಯಾರೂ ರಾಜೀನಾಮೆ ಕೊಡುವುದಿಲ್ಲ.ಅವರೇನಾದರೂ ಹೋಗುವುದಿದ್ದರೆ ಇಷ್ಟು ದಿನ ಕಾಯುತ್ತಿರಲಿಲ್ಲ. ಇಬ್ಬರು ಪಕ್ಷೇತರರು ಮಾತ್ರ ಸರ್ಕಾರಕ್ಕೆ ಬೆಂಬಲ ನೀಡಲ್ಲ ಅಂತ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ