HOME » NEWS » State » SIDDARAMAIAH HAS SLAPPED ON KS ESHWARAPPA FOR HIS DEROGATORY STATEMENT GNR

‘ನನ್ನ ಸಾವು ಬಯಸುವ ಕೆ.ಎಸ್​ ಈಶ್ವರಪ್ಪ ನೂರು ವರ್ಷ ಬಾಳಲಿ‘; ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯನ್ನು ಜನ ತಿರಸ್ಕರಿಸಿದ್ದಾರೆ. ಇದಕ್ಕೆ ಕಳೆದ ಲೋಕಸಭಾ ಚುನಾವಣಾ ಫಲಿತಾಂಶವೇ ಸಾಕ್ಷಿ. ಹಾಗೆಯೇ ಕಾಂಗ್ರೆಸ್​​-ಜೆಡಿಎಸ್​ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದರೂ, ಬಿಜೆಪಿಗೆ ಜನ ಮತ ಹಾಕಲಿದ್ದಾರೆ ಎಂದು ಕೆ.ಎಸ್​ ಈಶ್ವರಪ್ಪ ಹೇಳಿದ್ದರು.

news18-kannada
Updated:November 29, 2019, 9:32 PM IST
‘ನನ್ನ ಸಾವು ಬಯಸುವ ಕೆ.ಎಸ್​ ಈಶ್ವರಪ್ಪ ನೂರು ವರ್ಷ ಬಾಳಲಿ‘; ಮಾಜಿ ಸಿಎಂ ಸಿದ್ದರಾಮಯ್ಯ
ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು(ನ.29): ರಾಣೇಬೆನ್ನೂರಿನ ಬಿಜೆಪಿ ಸಮಾವೇಶವೊಂದರಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಇನ್ನೆಷ್ಟು ದಿನ ಬದುಕುತ್ತಾರೋ ಎಂದು ಕುಟುಕಿದ್ದರು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮೂಲಕ ತನ್ನ ವಿರುದ್ಧ ಕುಟುಕಿದ್ದ ಕೆ.ಎಸ್​​ ಈಶ್ವರಪ್ಪಗೆ ತಿರುಗೇಟು ನೀಡಿದ್ಧಾರೆ. ನನ್ನ ಸಾವನ್ನು ಬಯಸುವವರಿಗೆ ನಾನು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ. ಕೆ.ಎಸ್​​ ಈಶ್ವರಪ್ಪ ನೂರುಕಾಲ ಬಾಳಲಿ ಎಂದು ಟ್ವೀಟ್​ ಮಾಡಿದ್ಧಾರೆ.


ಇಂದು ಬಿಜೆಪಿ ಅಭ್ಯರ್ಥಿ ಪರವಾಗಿ ರಾಣೆಬೆನ್ನೂರಿನಲ್ಲಿ ಕೆ.ಎಸ್​​ ಈಶ್ವರಪ್ಪ ಮತಬೇಟೆ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಪದೇಪದೇ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಜೀವನದಲ್ಲಿ ಸಿದ್ದರಾಮಯ್ಯ ಇನ್ನೊಮ್ಮೆ ಸಿಎಂ ಆಗುವುದಿಲ್ಲ. ಸಿದ್ದರಾಮಯ್ಯ ಒಬ್ಬ ಹುಚ್ಚ. ಹಾಗಾಗಿ ಇನ್ನೆಷ್ಟು ದಿನ ಬದುಕುತ್ತಾರೋ ಎಂದು ವ್ಯಂಗ್ಯವಾಡಿದ್ದರು.ಈ ಮುನ್ನ ಹುಬ್ಬಳ್ಳಿಯಲ್ಲಿ ಮಾತಾಡಿದ್ದ ಕೆ.ಎಸ್​​ ಈಶ್ವರಪ್ಪ, ಸಿದ್ದರಾಮಯ್ಯ ಹೇಳಿಕೆಯನ್ನ ಭ್ರಮೆ ಅಥವಾ ಕನಸು ಎಂದು ತಿಳಿಯಬೇಕೋ ಗೊತ್ತಿಲ್ಲ. ಬಿಜೆಪಿ ಈ ಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲದೇ ಹೋದರೆ ನಾನು ರಾಜೀನಾಮೆ ನೀಡುತ್ತೇನೆ. ಒಂದು ಕಾಂಗ್ರೆಸ್​​​ ಹೇಳಿದಂತೆ ಎಂಟು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ತನ್ನ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲ್​​ ಹಾಕಿದರು.

ಇದನ್ನೂ ಓದಿ: ಕಾಂಗ್ರೆಸ್​​-ಜೆಡಿಎಸ್​​ಗೆ ಜನ ತಕ್ಕ ಪಾಠ ಕಲಿಸುತ್ತಾರೆ; 15 ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ; ಸಿಎಂ ಬಿಎಸ್​​ವೈ ವಿಶ್ವಾಸ

ಇನ್ನು ಸಿದ್ದರಾಮಯ್ಯ ಓರ್ವ ಸ್ವಾರ್ಥ ರಾಜಕಾರಣಿ. ಯರನ್ನು ಬೆಳೆಯಲು ಬಿಡೋದಿಲ್ಲ. ಎಚ್​​. ವಿಶ್ವನಾಥ್​​ ಸೇರಿದಂತೆ ಹಲವು ಕಾಂಗ್ರೆಸ್ಸಿಗರನ್ನು ಮುಗಿಸಲು ಹೊಟಿದ್ದು ಇದೇ ಸಿದ್ದರಾಮಯ್ಯ. ಇಂತಹ ಸಿದ್ದರಾಮಯ್ಯ ಈಗ ಒಬ್ಬಂಟಿ, ಯಾವುದೇ ಕಾಂಗ್ರೆಸ್​ ನಾಯಕರು ಜೊತೆಗಿಲ್ಲ ಎಂದಿದ್ದರು.

ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯನ್ನು ಜನ ತಿರಸ್ಕರಿಸಿದ್ದಾರೆ. ಇದಕ್ಕೆ ಕಳೆದ ಲೋಕಸಭಾ ಚುನಾವಣಾ ಫಲಿತಾಂಶವೇ ಸಾಕ್ಷಿ. ಹಾಗೆಯೇ ಕಾಂಗ್ರೆಸ್​​-ಜೆಡಿಎಸ್​ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದರೂ, ಬಿಜೆಪಿಗೆ ಜನ ಮತ ಹಾಕಲಿದ್ದಾರೆ ಎಂದು ಹೇಳಿದ್ದರು.
First published: November 29, 2019, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories