ಹುಬ್ಬಳ್ಳಿ : 13 ಬಜೆಟ್ ಮಂಡಿಸಿ, ಒಮ್ಮೆ ಸಿಎಂ ಆಗಿದ್ದಾರೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಲೇವಡಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ (Assembly Election) ಸಿದ್ದರಾಮಯ್ಯ ಕೋಲಾರದಿಂದ (Kolar) ಸ್ಪರ್ಧಿಸುತ್ತಾರೆಂಬ ಸುದ್ದಿಯಾಗುತ್ತಿದೆ. ಆದರೆ ಅದು ಕೂಡ ಫೈನಲ್ ಆಗಿದಿಯಾ ಎನ್ನುವುದರ ಬಗ್ಗೆ ಅನುಮಾನ ಇದೆ. ಕಳೆದ ಬಾದಾಮಿಯಲ್ಲಿ ಗೆದ್ದರೂ ಏನೂ ಕೆಲಸ ಮಾಡಿಲ್ಲ, ಹಾಗಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ. ಅವರು ಹೋಗುತ್ತಿದ್ದಾರೆ ಎಂದು ನಾವೇನು ಅಚ್ಚರಿ ಅಭ್ಯರ್ಥಿಯನ್ನು ಹಾಕುವುದಿಲ್ಲ, ಅಲ್ಲಿರುವ ನಮ್ಮ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಖಂಡಿತ ಈ ಬಾರಿ ಅವರನ್ನು ಮನೆಗೆ ಕಳುಹಿಸುತ್ತೇವೆ ವಿಪಕ್ಷ ನಾಯಕನ ವಿರುದ್ಧ ಹುಬ್ಬಳ್ಳಿಯಲ್ಲಿ ಪಹ್ಲಾದ್ ಜೋಶಿ ಹರಿಯಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿ, ಕಲಬುರಗಿ, ಯಾದಗಿರಿ ಕಾರ್ಯಕ್ರಮ ನೋಡಿ ಸಿದ್ದರಾಮಯ್ಯ ಗಾಬರಿ ಆಗಿದ್ದಾರೆ. ಬದಾಮಿ ದೂರ ಇದೆ ಅನ್ನೋ ಕಾರಣಕ್ಕಾಗಿ ಆ ಕ್ಷೇತ್ರವನ್ನು ಬಿಡುತ್ತಿಲ್ಲ. ಅವರು ಜನರೊಂದಿಗೆ ಸಂಪರ್ಕದಲ್ಲೇ ಇಲ್ಲ. ನನಗೂ ದೆಹಲಿ ದೂರ, ಆದರೂ ನಾನು ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಬದಾಮಿಯಲ್ಲಿ ಸೋಲಿನ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅಲ್ಲೂ 100 ಪರ್ಸೆಂಟ್ ಸಿದ್ದರಾಮಯ್ಯ ಸೋಲುತ್ತಾರೆ ಎಂದು ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದರು.
ಜನ ಅವರ ಧ್ವನಿ ಅಡಗಿಸುತ್ತಾರೆ
ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಸೇರಿ ದೇಶದಲ್ಲಿ ಒಂದೆರಡು ರಾಜ್ಯಗಳು ಬಿಟ್ಟರೆ ಎಲ್ಲಾ ಕಡೆ ಜನರು ಕಾಂಗ್ರೆಸ್ ಧ್ವನಿ ಅಡಿಗಿಸಿದ್ದಾರೆ. ಬರುವ ವರ್ಷ ರಾಜಸ್ಥಾನ ಹಾಗೂ ಛತ್ತೀಸ್ಗಡದಲ್ಲಿಯೂ ಕಾಂಗ್ರೆಸ್ಗೆ ಅದೇ ಪರಿಸ್ಥಿತಿ ಬರಲಿದೆ. ಈಗ ಅವರು ಪ್ರಜಾಧ್ವನಿ ಎಂದು ತಮ್ಮದೆ ಧ್ವನಿ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: Karnataka Election 2023: ಹಳೇ ಮೈಸೂರು ಭಾಗದಲ್ಲಿ 'ಕೈ' ಆಪರೇಷನ್; ಜೋಶ್ನಲ್ಲಿದ್ದವರಿಗೆ ಬಿಗ್ ಶಾಕ್!
ದುಡ್ಡು ಪಡೆದೇ ವಿದ್ಯುತ್ ಕೊಟ್ಟಿರಲಿಲ್ಲ
200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇನೆ ಎನ್ನುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಹಣ ಪಡೆದೃಊ ವಿದ್ಯುತ್ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿ ಬರುವರೆಗೆ ದೇಶ ವಿದ್ಯುತ್ ಕೊರತೆ ಅನುಭವಿಸುತ್ತಿತ್ತು. ಈಗ ಎಲ್ಲಿಯೂ ಸಹ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಈಗ ಚುನಾವಣೆ ಇರುವುದರಿಂದ ಮತಕ್ಕಾಗಿ ಸುಳ್ಳು ಹೇಳಿ ಜೀವನ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿಗೆ ತಿರುಗೇಟುಬಿಜೆಪಿ ಬಿ ರಿಪೋರ್ಟ್ ಪಕ್ಷ ಎಂಬ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ವಿಶ್ವಾಸಕ್ಕೆ ಅರ್ಹವಲ್ಲ ಎಂಬುವುದು ಸಾಬೀತಾಗಿದೆ. ಈ ಹಿಂದೆ ಇಂಧನ ಸಚಿವರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರ ಮಾಡಿ ಕೆಪಿಟಿಸಿಎಲ್ ಸತ್ಯಾನಾಶ ಮಾಡಿದ್ದರು. ಎಸ್ಡಿಪಿಐ ಹಾಗೂ ಪಿಎಫ್ಐ ಅವರ ಮೇಲಿನ ನಿಷೇಧ ತೆರವುಗೊಳಿಸಿ ರಾಷ್ಟ್ರದ್ರೋಹದ ಕಾರ್ಯದಲ್ಲಿ ತೊಡಗಿದವರು ನಮಗೆ ಹೇಳುವ ಅವಶ್ಯಕತೆ ಇಲ್ಲ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸೋಲಿಸಲು ಸಂತೋಷ್ ಸಜ್ಜು
ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಂತ್ರಗಾರಿಕೆ ನಡೆಸುತ್ತಿವೆ, ಇದೀಗ ವಿಪಕ್ಷ ನಾಯಕನನ್ನು ಸೋಲಿಸಲು ಖುದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೋಲಾರದಲ್ಲಿ ಪಕ್ಷ ಸಂಘಟನೆ ಗಟ್ಟಿಗೊಳಿಸಲು ತಂತ್ರ ಹೂಡಿದ್ದಾರೆ. ಯಾರೇ ಬಂದರೂ ನಮ್ಮ ಸಂಘಟನೆ ಗಟ್ಟಿ ಇದ್ದರೆ ಗೆಲುವು ಎಂದು ಸಂತೋಷ್ ವಾದವಾಗಿದೆ. ಪಕ್ಷ ಸಂಘಟನೆಯ ಮಂತ್ರ ಜಪಿಸುತ್ತಿರುವ ಬಿ.ಎಲ್. ಸಂತೋಷ್, ಕಾರ್ಯಕರ್ತರಿಗೆ ಕೆಲವೊಂದು ಕೆಲಸ ವಹಿಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ