• Home
  • »
  • News
  • »
  • state
  • »
  • Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ

Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ. ಬಿ ರಿಪೋರ್ಟ್‌ ಸಲ್ಲಿಕೆಯಾದ ಬಗ್ಗೆ ನ್ಯೂಸ್ 18 ಕನ್ನಡ ಪ್ರಕಟಿಸಿದ್ದ ಸುದ್ದಿಯನ್ನು ಶೇರ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: 2017ರಲ್ಲಿ ಉತ್ತರ ಕನ್ನಡ (Uttara Kannada) ಸೇರಿದಂತೆ ಕರಾವಳಿ ಭಾಗದಲ್ಲಿ ತೀವ್ರ ಗಲಭೆಗೆ ಕಾರಣವಾಗಿದ್ದ ಹೊನ್ನಾವರದ (Honnavara) ಪರೇಶ್ ಮೇಸ್ತ (Paresh Mesta) ಸಾವಿನ ಕೇಸ್‌ನಲ್ಲಿ (Death Case) ಬಿ ರಿಪೋರ್ಟ್ (B Report) ಸಲ್ಲಿಕೆಯಾಗಿದೆ. ಕೇಸ್‌ನ ತನಿಖೆ ಕೈಗೊಂಡಿದ್ದ ಸಿಬಿಐ ಅಧಿಕಾರಿಗಳು (CBI Officers) ಹೊನ್ನಾವರ ಕೋರ್ಟ್‌ಗೆ (Honnavar Court) ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪರೇಶ್ ಮೇಸ್ತ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದೇ ವಿಚಾರಕ್ಕೆ ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ರಾಜ್ಯ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪರೇಶ್ ಮೇಸ್ತ ಕೇಸ್‌ನಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಯಾದ ಬಗ್ಗೆ ನ್ಯೂಸ್ 18 ಕನ್ನಡ (News18 Kannada) ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಸಿದ್ದರಾಮಯ್ಯ, ಅಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದ ಬಿಜೆಪಿ ಈಗ ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದ್ದಾರೆ.


 ನ್ಯೂಸ್ 18 ವರದಿ ಶೇರ್ ಮಾಡಿದ ಸಿದ್ದರಾಮಯ್ಯ


ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ. ಬಿ ರಿಪೋರ್ಟ್‌ ಸಲ್ಲಿಕೆಯಾದ ಬಗ್ಗೆ ನ್ಯೂಸ್ 18 ಕನ್ನಡ ಪ್ರಕಟಿಸಿದ್ದ ಸುದ್ದಿಯನ್ನು ಶೇರ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ


ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ  ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಅಂತ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


ಇದನ್ನೂ ಓದಿ: Paresh Mesta Death Case: ಪರೇಶ್‌ ಮೇಸ್ತ ಸಾವು ಆಕಸ್ಮಿಕ! ಕೋರ್ಟ್‌ಗೆ ಸಲ್ಲಿಸಿದ ರಿಪೋರ್ಟ್‌ನಲ್ಲಿ ಸಿಬಿಐ ಉಲ್ಲೇಖ


“ಬಿಜೆಪಿ ಗೆಲುವಿನ ಹಿಂದೆ ರಕ್ತದ ಕಲೆ ಇದೆ”


ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಅಂತ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿಬಿಐ ವರದಿಗೆ ಪರೇಶ್ ಕುಟುಂಬಸ್ಥರ ಅಸಮಾಧಾನ


ಇನ್ನು ಸಿಬಿಐ ವರದಿಗೆ ಪರೇಶ್ ಮೇಸ್ತ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಮಗನ ಸಾವಿನ ತನಿಖೆಯ ವರದಿ‌ ಕೈಗೆ  ಸಿಕ್ಕಿದೆ. ಸಹಜ ಸಾವು ಎಂದು CBI ಹೇಳಿದೆ, ಹಾಗೆ ವರದಿಯನ್ನ ಕೂಡಾ ಹೊನ್ನಾವರ ನ್ಯಾಯಾಲಯಕ್ಕೆ ನೀಡಿದೆ. ಆದರೆ ಈ ವರದಿಯಿಂದ ಅಸಮಾಧಾನ ಆಗಿದೆ ಅಂತ ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಹೇಳಿದ್ದಾರೆ.


ನ್ಯೂಸ್‌ 18 ಜೊತೆ ಬೇಸರ ತೋಡಿಕೊಂಡ ತಂದೆ


ನ್ಯೂಸ್ 18 ಜೊತೆ ಮಾತನಾಡಿದ ಕಮಲಾಕರ ಮೇಸ್ತ, ಆರಂಭದಲ್ಲಿ ನನ್ನ ಮಗನ ಸಾವು ಸಹಜ ಸಾವಲ್ಲ ಕೊಲೆ ಎಂದು ಆರೋಪಿಸಿದ್ದೆವು. ಸರಕಾರ CBI ತನಿಖೆಗೆ ಒಳಪಡಿಸಿದ್ದು ಈಗ ವರದಿ ಬಂದಿದೆ. ಸಹಜ ಸಾವು ಎನ್ನೋದು ಅಸಮಾಧಾನ ಉಂಟಾಗಿದೆ ಅಂತ ಬೇಸರಿಸಿದ್ದಾರೆ.


ಇದನ್ನೂ ಓದಿ: Constable Challenge: ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು; ಸಿದ್ದರಾಮಯ್ಯಗೆ ಪೊಲೀಸ್​ ಪೇದೆ ಸವಾಲ್​


2017 ಡಿಸೆಂಬರ್ನಲ್ಲಿ ನಡೆದಿದ್ದ ಗಲಭೆ


2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಗಲಭೆ ನಡೆದು, ಬಳಿಕ ಅದು ಕೋಮು ಸಂಘರ್ಷದ ರೂಪ ಪಡೆದಿತ್ತು. ಆಗ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಬಳಿಕ ಡಿಸೆಂಬರ್ 8ರಂದು ಹೊನ್ನಾವರ ನಗರದ ಬಸ್ ನಿಲ್ದಾಣದ ಮುಂದಿನ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ.

Published by:Annappa Achari
First published: