ಮೈಸೂರು (ಡಿ.18): 2023ರ ವಿಧಾನಸಭೆ ಚುನಾವಣೆಗೆ (Assembly Election) ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ (Mysuru) ಈ ಬಗ್ಗೆ ಮಾತಾಡಿದ ಶಾಸಕ ಜಮೀರ್ (Zameer Ahmed Khan), ನಾನು ಸಹ ಚಾಮರಾಜಪೇಟೆಗೆ ಬನ್ನಿ ಅಂತ ಹೇಳುತ್ತಿದ್ದೇನೆ ಎಂದು ಹೇಳಿದ್ರು. 224 ಕ್ಷೇತ್ರದಿಂದಲೂ ಸಿದ್ದರಾಮಯ್ಯಗೆ ಒತ್ತಡವಿದೆ. ಅವರು ಇನ್ನೂ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಸಿದ್ಧತೆ ನಡೆಸಿಲ್ಲ. ಬಾದಾಮಿಯಲ್ಲಿ ನಾನು ಸಹ ಪ್ರವಾಸ ಮಾಡಿ ಜನರ ಜೊತೆ ಮಾತನಾಡಿದೆ. ಅಲ್ಲಿ ದಾರಿ ಉದ್ದಕ್ಕೂ ಜನರು ಸಿದ್ದರಾಮಯ್ಯ ಅವರೇ ಬರಬೇಕು ಅನ್ನುತ್ತಿದ್ದಾರೆ ಎಂದು ಜಮೀರ್ ಹೇಳಿದ್ರು.
ಸಿದ್ದರಾಮಯ್ಯಗಾಗಿ ಹೆಲಿಕಾಪ್ಟರ್ ನೀಡಲು ಸಿದ್ಧ
ನಮ್ಮ ಕ್ಷೇತ್ರ 4 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಇಷ್ಟು ವರ್ಷದಲ್ಲಿ ಆಗದ ಅಭಿವೃದ್ಧಿ4 ವರ್ಷದಲ್ಲಿ ಆಗಿದೆ. ಸಿದ್ದರಾಮಯ್ಯನವರು ನಾನು ಬರಲ್ಲ ಅಂತ ಹೇಳಿದ ಬಳಿಕ ಅಲ್ಲಿನ ಜನರು ಅವರನ್ನ ಭೇಟಿ ಮಾಡಿ ಇಲ್ಲೇ ಸ್ಪರ್ಧೆಗೆ ಒತ್ತಾಯಿಸಿದ್ದಾರೆ. ಜೊತೆಗೆ ಅವರಿಗಾಗಿ ಒಂದು ಹೆಲಿಕಾಪ್ಟರ್ ತೆಗೆದುಕೊಡಲು ಸಹ ಸಿದ್ದರಾಗಿದ್ದಾರೆ ಎಂದು ಮೈಸೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
24 ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಮನವಿ
ಕಾಂಗ್ರೆಸ್ ನಲ್ಲಿ ನನ್ನ ಬೆಂಬಲಿಗರಿಗೆ ನಾನು ಟಿಕೆಟ್ ಕೇಳಿದ್ದೇನೆ. ಸುಮಾರು 24 ಮಂದಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದೇನೆ ಎಂದು ಜಮೀರ್ ಖಾನ್ ಹೇಳಿದ್ದಾರೆ. ನಾನು ಸಹ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕ ಹೀಗಾಗಿ ನನಗೂ ಆಪ್ತರು ಟಿಕೆಟ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.
ಈ ವಿಚಾರವನ್ನು ನಾನು ಸಹ ಹೈಕಮಾಂಡ್ ಗೆ ತಿಳಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಮೈಸೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ಪರೋಕ್ಷವಾಗಿ ಶಾಸಕ ತನ್ವೀರ್ ಸೇಠ್ ಗೆ ಟಾಂಗ್ ನೀಡಿದ ಜಮೀರ್ ಅಹಮ್ಮದ್, ಹೈಕಮಾಂಡ್ ಹೇಳಿದರೆ ನಾನು ಎನ್ ಆರ್ ಕ್ಷೇತ್ರದಲ್ಲಿ ಸ್ವರ್ಧೆ ಮಾಡಲು ರೆಡಿ ಎಂದು ಪರೋಕ್ಷವಾಗಿ ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಆಸೆಯನ್ನು ಶಾಸಕ ಜಮೀರ್ ಅಹಮ್ಮದ್ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಮಾತಿಗೆ ಬದ್ಧ
ನಾನು ಈಗ ಚಾಮರಾಜಪೇಟೆ ಶಾಸಕನಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಇಲ್ಲಿ ಸ್ಪರ್ಧೆ ಬೇಡ ಅನ್ನೋದಕ್ಕೆ ಆಗಲ್ಲ. ಒಂದು ವೇಳೆ ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಂದರೆ ನಾನು ಸ್ಪರ್ಧೆ ಮಾಡಲೇಬೇಕು ಎಂದು ಮೈಸೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಮುಸ್ಲಿಂ ಮತ ಸೆಳಯಲು ಜೆಡಿಎಸ್ ಪ್ಲಾನ್
ಜೆಡಿಎಸ್ ಸ್ಪಷ್ಟ ಬಹುಮತ ಪಡೆದರೆ ಮುಸ್ಲಿಂ ಸಮುದಾಯದವರನ್ನ ಮುಖ್ಯಮಂತ್ರಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಜಮೀರ್ ಖಾನ್, ನಾವು ಏನಾದ್ರು ಆಗಲಿ ಮುಸ್ಲಿಂರನ್ನ ಮುಖ್ಯಮಂತ್ರಿ ಮಾಡ್ತೀವಿ ಅಂತ ಘೋಷಣೆ ಮಾಡಬೇಕು ಕುಮಾರಸ್ವಾಮಿ ಎಂದು ಹೇಳಿದ್ರು. ಅವರಿಗೆ ಮುಸ್ಲಿಂ ಮೇಲೆ ಪ್ರೀತಿ ಇದ್ರೆ ಇಬ್ರಾಹಿಂ ಸರ್ ಜೆಡಿಎಸ್ ಗೆ ಹೋಗಿದ್ದಾರೆ ಅವರನ್ನೇ ಸಿಎಂ ಮಾಡೋದಾಗಿ ಘೋಷಣೆ ಮಾಡಲಿ.
ಇದನ್ನೂ ಓದಿ: Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ
ಎಲ್ಲರಿಗೂ ಗೊತ್ತಿರುವ ವಿಚಾರ, ಜನತಾದಳ ಅಂದರೆ 18,20,23 ಬರೋದು ಅವರಿಗೆ 100 ಸೀಟ್ ಬರೋದಕ್ಕೂ ಆಗಲ್ಲ. ಮುಸ್ಲಿಂ ಮತ ಸೆಳಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ