ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ (Minister Zameer Ahmed Khan) ಹಠ ಬಿಜೆಪಿಗೆ (BJP) ವರವಾಗಿ ಪರಿಣಮಿಸಿದೆ. ರಾಜ್ಯ ವಕ್ಫ್ ಮಂಡಳಿ (Karnataka Waqf board) ಅಧ್ಯಕ್ಷ ಶಾಫಿ ಸಅದಿ (Shafi Saadi) ಸೇರಿ ನಾಲ್ವರು ಸದಸ್ಯರ ನಾಮನಿರ್ದೇಶನ ರದ್ದು ಆದೇಶವನ್ನು ಸರ್ಕಾರ (Karnataka Government) ಎರಡೇ ದಿನದಲ್ಲಿ ಹಿಂಪಡೆದಿದೆ. ಶಾಫಿ ಸಅದಿ ಸೇರಿದಂತೆ ಮೀರ್ ಅಝರ್ ಹುಸೈನ್, ಜಿ.ಯಾಕೂಬ್ ಹಾಗೂ ಐಎಎಸ್ ಅಧಿಕಾರಿ ಝೆಹೆರಾ ನಸೀಮ್ ಅವರ ನಾಮ ನಿರ್ದೇಶನವನ್ನು ಸರಕಾರ ರದ್ದುಗೊಳಿಸಿತ್ತು. ಆದರೆ ಜಮೀರ್ ಒತ್ತಡ ಮೇರೆಗೆ ನಾಮನಿರ್ದೇಶನ ರದ್ದು ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಸೋಮವಾರ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನಾಮನಿರ್ದೇಶನ ರದ್ದುಗೊಳಿಸುತೆ ಶಾಫಿ ಸಅದಿ ಜಮೀರ್ ಜೊತೆ ಚರ್ಚೆ ನಡೆಸಿದ್ದರು.
ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಜಮೀರ್ ಅಹ್ಮದ್ ಒತ್ತಡ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದೇಶ ಹಿಂಪಡೆದುಕೊಂಡಿರುವ ಪ್ರತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಸರ್ಕಾರ ಬದಲಾಗುತ್ತೆ ಅಂದ್ರು ಬೊಮ್ಮಾಯಿ
ಇನ್ನೈದು ತಿಂಗಳಲ್ಲಿ ಈ ಸರ್ಕಾರ ಬದಲಾಗುತ್ತೆ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಈ ಸರ್ಕಾರದಿಂದ ದ್ವೇಷ ರಾಜಕಾರಣ ಶುರುವಾಗಿದೆ ಅಂತಾ ಆರೋಪ ಮಾಡಿದ್ರು.
ಇನ್ನು ನನ್ನ ಸುಲಭವಾಗಿ ತಿಳಕೊಬ್ಯಾಡಿ. ನಾವು ಮತ್ತೆ ಅಧಿಕಾರಕ್ಕೆ ಬರಲ್ಲಾ ಅಂತಾ ಅಂದುಕೊಂಡರೆ ನಿಮ್ಮ ಭ್ರಮೆ. ಯಾವುದೇ ಹಂತಕ್ಕೂ ಯಾವುದೇ ಮಟ್ಟಕ್ಕೂ ಬರೋಕೆ ನಾನು ತಯಾರು ಇದ್ದೇನೆ ಅಂತಾ ಮಾಜಿ ಸಿಎಂ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ