• Home
  • »
  • News
  • »
  • state
  • »
  • Siddaramaiah: ಸಿಎಂಗೆ ನಾಯಿಮರಿ ಅಂತ ಹೇಳಿಲ್ಲ; ವಿವಾದಾತ್ಮಕ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ

Siddaramaiah: ಸಿಎಂಗೆ ನಾಯಿಮರಿ ಅಂತ ಹೇಳಿಲ್ಲ; ವಿವಾದಾತ್ಮಕ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ನಾನು ಅಲೆಮಾರಿ ರಾಜಕಾರಣಿ ಅಲ್ಲ. ಜನ ಕೋಲಾರ, ಬಾದಾಮಿ, ವರುಣ ಕ್ಷೇತ್ರದಿಂದ ಕರೆಯುತ್ತಾರೆ. ನಾನು ಅರ್ಜಿ ಹಾಕುವಾಗ ಕ್ಷೇತ್ರ ಆಯ್ಕೆ ಹೈಕಮಾಂಡ್​​​ಗೆ ಬಿಟ್ಟಿದ್ದು ಅಂತಾ ಹೇಳಿದ್ದೇನೆ ಎಂದರು.

  • Share this:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah), ಇಂದು ಕುದ್ರೋಳಿ ಗೋಕರ್ಣನಾಥ (Gokarnath, Kudroli) ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ (Controversy Statement) ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ನಾನು ಸಿಎಂಗೆ ನಾಯಿ ಮರಿ ಅಂತಾ ಹೇಳಿಲ್ಲ. ಕೇಂದ್ರದಿಂದ ಅನುದಾನ (Fund) ತರಲು ಧೈರ್ಯ ಇರಬೇಕು ಎಂದು ಹೇಳಿದ್ದೇನೆ. ಧೈರ್ಯವಾಗಿ ಇರಬೇಕು ಅಂತಾ ಹೇಳಿದ್ದೇನೆಯೇ ಹೊರತು ನಾಯಿ ಮರಿ ಅಂತಾ ಅಲ್ಲ. ನನ್ನನ್ನು ಟಗರು, ಹುಲಿಯಾ ಅಂತಾ ಕರೆಯುತ್ತಾರೆ. ಅದು ಅಸಂವಿಧಾನ ಪದ ಹೇಗೆ ಆಗುತ್ತದೆ. ಯಡಿಯೂರಪ್ಪ (BS Yediyurappa) ಅವರನ್ನು ರಾಜಾಹುಲಿ ಅಂತಾ ಅವರ ಪಕ್ಷದವರೇ ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ಹುಲಿನಾ ಎಂದು  ಪ್ರಶ್ನಿಸಿದ ಸಿದ್ದರಾಮಯ್ಯ, ನಾಯಿ ನಂಬಿಕೆಗಸ್ಥ ಪ್ರಾಣಿ. ನಾಯಿ ರೀತಿ ಧೈರ್ಯದಿಂದ ಕೇಂದ್ರದಿಂದ ಪಾಲು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ ಅಂತ ಸ್ಪಷ್ಟನೆ ನೀಡಿದರು.


ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇತರ ಬೇಕಾದಷ್ಟು ಪ್ರಕರಣಗಳು ಇದೆ. ಅದಕ್ಕೆ 40% ಕಮಿಷನ್ ಸರ್ಕಾರ ಅಂತಾ ಕಾಂಟ್ರಾಕ್ಟ್ ಅಸೋಷಿಯನ್ ಅವರೇ ಕರೆದಿರೋದು. ಇವರಿಗೆ ಲಂಚ ಕೊಡಲಾಗದೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.


ಭ್ರಷ್ಟಾಚಾರ ಇಲ್ಲದೇ ಏನು ನಡೆಯಲ್ಲ


ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹಣ ಕೇಳುತ್ತಾರೆ, ಸಾವಿಗೆ ಈಶ್ವರಪ್ಪ ಕಾರಣ ಅಂತಾ ಪತ್ರ ಬರೆದಿದ್ದರು.  ಪ್ರಸಾದ್ ಅನ್ನೋರು ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಬ್ಬರು ಗುಂಡು ಹಾರಿಸಿಕೊಂಡು ಸತ್ತು ಹೋದರು. ಶಿವಕುಮಾರ್ ಎಂಬುವವರು ದಯಾಮರಣ ಕೇಳಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದೇ ಏನು ನಡೆಯೋದಿಲ್ಲ. ವರ್ಗಾವಣೆ ಪೋಸ್ಟಿಂಗ್ ಎಲ್ಲದಕ್ಕೂ ಹಣ ಕೇಳುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು.


ನಾನು ಅಲೆಮಾರಿ ರಾಜಕಾರಣಿ ಅಲ್ಲ. ಜನ ಕೋಲಾರ, ಬಾದಾಮಿ, ವರುಣ ಕ್ಷೇತ್ರದಿಂದ ಕರೆಯುತ್ತಾರೆ. ನಾನು ಅರ್ಜಿ ಹಾಕುವಾಗ ಕ್ಷೇತ್ರ ಆಯ್ಕೆ ಹೈಕಮಾಂಡ್​​​ಗೆ ಬಿಟ್ಟಿದ್ದು ಅಂತಾ ಹೇಳಿದ್ದೇನೆ ಎಂದರು.


ನಳಿನ್ ಬಿಜೆಪಿಯಲ್ಲಿ ವಿಧೂಷಕ


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲವ್ ಜಿಹಾದ್ ಹೇಳಿಕೆಗೆ  ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಟೀಲ್ ಜೋಕರ್ ಇದ್ದ ಹಾಗೆ, ಬಾಲಿಷ ಹೇಳಿಕೆಗೆ ಉತ್ತರ ಕೊಡಲ್ಲ. ನಳಿನ್ ಬಿಜೆಪಿಯಲ್ಲಿ ವಿಧೂಷಕ ಇದ್ದ ಹಾಗೆ ಎಂದು ಲೇವಡಿ  ಮಾಡಿದರು.


ನಳಿನ್ ಪೆದ್ದ ಪೆದ್ದಾಗಿ ಮಾತಾಡ್ತಾರೆ


ನನ್ನನ್ನು ಜೈಲಿಗೆ ಕಳುಹಿಸೋದರ ಬಗ್ಗೆ ಹೇಳಿದ್ದಾರೆ. ಜೈಲಿಗೆ ಕಳುಹಿಸೋದು ಕೋರ್ಟ್. ವಿಚಾರಣೆ ಮಾಡಿ ತಪ್ಪಿತಸ್ಥರಾದರೆ ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ನಳಿನ್ ಕುಮಾರ್ ಕಟೀಲ್ ಪೆದ್ದ ಪೆದ್ದಾಗಿ ಮಾತನಾಡುತ್ತಾರೆ. ಅವರಿಗೆ ಕಾನೂನು ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.


ಇದನ್ನೂ ಓದಿ:  Siddaramaiah: 'ಮೋದಿ ಎದುರು ಬೊಮ್ಮಾಯಿ ನಾಯಿ ಮರಿ ತರ, ನಮ್ಮ ಹಳ್ಳಿ ಭಾಷೆಯಲ್ಲಿ ಹೇಳ್ದೆ' -ಅಂತ ಸಿದ್ದರಾಮಯ್ಯ ಸಮಜಾಯಿಷಿ


ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು


ನಾವು ನಿಯತ್ತಿನ ನಾಯಿಗಳು ನಮ್ಮ ನಿಯತ್ತು ದೇಶದ ಪರ, ಜನತೆಯ ಪರ. ಆದರೆ, ಕಾಂಗ್ರೆಸ್ಸಿಗರ ನಿಯತ್ತು ಇಟಾಲಿಯನ್ ಗಾಂಧಿಗಳು, ಪಿಎಫ್ಐ ಹಾಗೂ ಜಿಹಾದಿಗಳ ಪರ. ಜೈಲಿಗೆ ಹೋಗಿ ಬೇಲ್‌ ಮೇಲೆ ಹೊರ ಬಂದವರಿಗೆ ಕಾಂಗ್ರೆಸ್‌ನಲ್ಲಿ ರಾಜಾತಿಥ್ಯವಿದೆ.


ಭ್ರಷ್ಟಾಚಾರದ ಆರೋಪಿ ಡಿಕೆ ಶಿವಕುಮಾರ್​ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕರೆ, ಕೊಲೆ ಆರೋಪಿ ವಿನಯ್ ಕುಲಕರ್ಣಿ ಕೆಪಿಸಿಸಿಯ ಉಪಾಧ್ಯಕ್ಷ ಪಟ್ಟ ನೀಡಲಾಗಿದೆ. ಕೊಲೆಗಾರರು, ಭ್ರಷ್ಟರು ತುಂಬಿರೋ ಕಾಂಗ್ರೆಸ್ ಒಂದು ಕಳ್ಳರ ಸಂತೆ ಎಂದು ಬಿಜೆಪಿ ತಿರುಗೇಟು ನೀಡಿದೆ.

Published by:Mahmadrafik K
First published: