ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದೆ. ಹೈಕಮಾಂಡ್ (Congress High Command) ಹೇಳಿದ ಕ್ಷೇತ್ರದಿಂದ ನಾನು ಸ್ಫರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ತಾವು ಕೋಲಾರದಿಂದ (Kolar) ಸ್ಪರ್ಧೆ ಮಾಡೋದು ಅನುಮಾನ ಎಂಬ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಿದ್ದಾರೆ. ನಾನು ಯಾವುದೇ ಕ್ಷೇತ್ರಕ್ಕೆ ಅರ್ಜಿ ಹಾಕಿಲ್ಲ. ಈ ಹಿಂದೆಯೂ ನನ್ನ ಸ್ಪರ್ಧೆ ಹೈಕಮಾಂಡ್ ನಿರ್ಧಾರ ಅಂತ ಹೇಳಿದ್ದೆ. ಹೈಕಮಾಂಡ್ ಸೂಚಿಸುವ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ ಖಚಿತ. ಎರಡೂ ಕ್ಷೇತ್ರ ಸೂಚಿಸಿದ್ರೆ ಎರಡು ಇಲ್ಲವಾದ್ರೆ ಇಲ್ಲ ಎಂದು ಹೇಳಿದ್ದಾರೆ.
ನಾನು ಕೋಲಾರದಲ್ಲಿ ಮನೆ ನೋಡಿದ್ದು, ಆದರೆ ಮಾಡಿಲ್ಲ. ನಾಳೆ ಬೆಳಗಾವಿಗೆ ಹೋಗಬೇಕಿರುವ ಕಾರಣ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ. ಬಾದಮಿ, ಕೋಲಾರ, ವರುಣಾ ಎಲ್ಲಿ ಹೇಳ್ತಾರೆ ಅಲ್ಲಿ ನಿಲ್ಲುತ್ತೇನೆ. ಮಾರ್ಚ್ 22ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ಬಿಜೆಪಿಯಿಂದ ಕೆಲವರು ಬರ್ತಾರೆ
ಎಲ್ಲಾ ಹಾಲಿ ಶಾಸಕರ ಕ್ಷೇತ್ರ ಚರ್ಚೆ ಆಗಿಲ್ಲ. ಒಂದು ಹೆಸರು ಇರುವ ಕ್ಷೇತ್ರಗಳು ಕ್ಲೀಯರ್ ಆಗುತ್ತದೆ. ವರುಣಾದಲ್ಲಿ ಯತೀಂದ್ರ ಇದ್ದಾನೆ, ಅವನದು ಒಂದೇ ಹೆಸರು ಇದೆ. ಕ್ಲೀಯರ್ ಆಗಬೇಕು ಅಲ್ವಾ? ಬಿಜೆಪಿಯಿಂದ ಕೆಲವರು ಬರುತ್ತಾರೆ. ಕೆಲ ಶಾಸಕರ ಹೆಸರನ್ನು ಹೋಲ್ಡ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಘೋಷಣೆ ಮಾಡಲಾಗುತ್ತದೆ.
ಇಲ್ಲ ಅಂದ್ರೆ ಇಲ್ಲ
ಜನರ ಸೇವೆ ಮಾಡಲು ರಾಜಕೀಯದಲ್ಲಿ ಇದ್ದೇವೆ. ಎಲ್ಲಿನಿಲ್ಲಿ ಅಂತ ಹೇಳ್ತಾರೆ ಅಲ್ಲಿ ನಿಲ್ತೇನೆ. ಇಲ್ಲ ಅಂದ್ರೆ ಇಲ್ಲ. ಕೋಲಾರ ಹಾಗೂ ಬಾದಾಮಿ ನಾಯಕರಿಂದ ಕೂಡ ಒತ್ತಡ ಇದೆ. ಆದ್ರೆ ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ಅದರ ಮೇಲೆ ನಿರ್ಧಾರ ಎಂದರು.
ಚುನಾವಣೆ ಇದೆ ಅಂತ ತರಾತುರಿಯಲ್ಲಿ ದಶಪಥ ಹೆದ್ದಾರಿ ಉದ್ಘಾಟನೆ ಮಾಡಿ ಕ್ರೆಡಿಟ್ ಪಡೆಯಲು ಮುಂದಾದರು. ನಮ್ಮ ಕಾಲದಲ್ಲಿ ಹೈವೇ ಕಾಮಗಾರಿ ಬಿಡುಗಡೆ ಆಗಿದ್ದು, ಕೇಂದ್ರದಲ್ಲಿ ಆಸ್ಕರ್ ಫರ್ನಾಂಡಿಸ್ ಇದ್ದರು ಎಂದು ಹೇಳಿದರು.
ಇದನ್ನೂ ಓದಿ: Karnataka Politics: ಬಿಜೆಪಿ ಸಿಎಂ ಅಭ್ಯರ್ಥಿ ಇವರೇ ನೋಡಿ? ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬದಲಾವಣೆ ಹಿಂದಿದ್ಯಾ ರಾಹುಲ್ ಗಾಂಧಿ ಸಲಹೆ?
ದೆಹಲಿಯಲ್ಲಿ (Delhi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ (Screening Committee) ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಭಾಗಿಯಾಗಿದ್ದರು.
ಈ ಸಭೆ ಬಳಿಕ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಅವರು ಕೋಲಾರದಿಂದ ಸ್ಪರ್ಧೆ ಮಾಡದಂತೆ ಸಲಹೆ ನೀಡಿದ್ದಾರಂತೆ. ಈ ಹಿನ್ನೆಲೆ ಸಿದ್ದರಾಮಯ್ಯ ಕ್ಷೇತ್ರ ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ಮುಂದಿನ ಆಯ್ಕೆ ಏನು?
ಈಗಾಗಲೇ ಬಾದಾಮಿ ಕ್ಷೇತ್ರ ತೊರೆಯೋದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸುರಕ್ಷಿತ ಕ್ಷೇತ್ರವಾಗಿ ಉಳಿದಿರೋದು ವರುಣಾ ಕ್ಷೇತ್ರ. ವರುಣಾದ ಶಾಸಕರಾಗಿರುವ ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ವರುಣಾ ಶಾಸಕರಾಗಿದ್ದ ಸಿದ್ದರಾಮಯ್ಯ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ವರುಣಾ ಕಾಂಗ್ರೆಸ್ ಭದ್ರಕೋಟೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ