ಸಿದ್ದರಾಮಯ್ಯಗೆ ನನ್ನ ಮೇಲೆ ಲವ್ ಜಾಸ್ತಿ; ಜೆಡಿಎಸ್ ಧ್ವಜ ಹಿಡಿದ ವಿಚಾರದಲ್ಲಿ ಮೌನ ಮುರಿದ ಡಿಕೆಶಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ಶನಿವಾರ ರಾಜ್ಯದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು.

Rajesh Duggumane | news18-kannada
Updated:October 28, 2019, 11:39 AM IST
ಸಿದ್ದರಾಮಯ್ಯಗೆ ನನ್ನ ಮೇಲೆ ಲವ್ ಜಾಸ್ತಿ; ಜೆಡಿಎಸ್ ಧ್ವಜ ಹಿಡಿದ ವಿಚಾರದಲ್ಲಿ ಮೌನ ಮುರಿದ ಡಿಕೆಶಿ
ಡಿಕೆಶಿ ಮತ್ತು ಸಿದ್ದರಾಮಯ್ಯ ಭೇಟಿ
  • Share this:
ಬೆಂಗಳೂರು (ಅ.28): ಕಾಂಗ್ರೆಸ್​ ಹಿರಿಯ ನಾಯಕ ಡಿಕೆ ಶಿವಕುಮಾರ್ ಜೆಡಿಎಸ್​ ಪಕ್ಷದ​ ಧ್ವಜ ಹಿಡಿದಿದ್ದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದರು. ಅವರು ಜೆಡಿಎಸ್ ಬಾವುಟ ಹಿಡಿದುಕೊಳ್ಳುವ ಅಗತ್ಯ ಏನಿತ್ತು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಈ ವಿಚಾರದಲ್ಲಿ ಡಿಕೆಶಿ ಮೌನ ಮುರಿದಿದ್ದು, ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಲವ್ ಜಾಸ್ತಿ ಎಂದಿದ್ದಾರೆ.

ಸಿದ್ದರಾಮಯ್ಯ ಪರವಾಗಿ ಮಾತನಾಡಿರುವ ಡಿಕೆಶಿ, “ಸಿದ್ದರಾಮಯ್ಯ ಹಾಗೇ ಹೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ನನ್ನ ಬಗ್ಗೆ ಹೀಗೆ ಮಾತನಾಡಿರುವುದಿಲ್ಲ. ಯಾರೋ ಸುದ್ದಿ ತಿರುಚಿದ್ದಾರೆ. ಸಿದ್ದರಾಮಯ್ಯನವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ,” ಎಂದರು.

“ಜನ ಸಮಹೂದ ಮಧ್ಯೆ ಕನ್ನಡ ಧ್ವಜ, ಕಾಂಗ್ರೆಸ್ ಧ್ವಜ ಎಲ್ಲವೂ ಇತ್ತು. ಯಾರೋ ಜೆಡಿಎಸ್ ಧ್ವಜ ನೀಡಿದ್ರು ಅಷ್ಟೇ. ಸಿದ್ದರಾಮಯ್ಯ ಹಿರಿಯರು, ಅವರು ಸಲಹೆ ನೀಡ್ತಾರೆ. ನಾನು ಹುಟ್ಟು ಕಾಂಗ್ರೆಸ್ಸಿಗ. ಸಿದ್ದರಾಮಯ್ಯರಿಗೆ ಯಾರೋ ಬೇರೆಯವರು ಕಿಡಿಗೇಡಿತನ ಮಾಡಿರಬಹುದು,” ಎಂದರು ಡಿಕೆಶಿ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ಶನಿವಾರ ರಾಜ್ಯದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಮತ್ತಿತರರು ಅಸಮಾಧಾನ ತೋರ್ಪಡಿಸಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ಆಪ್ತರ ಸಭೆಯಲ್ಲಿ ಡಿಕೆ ಶಿವಕುಮಾರ್ ವರ್ತನೆ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

ವಿಡಿಯೋದಲ್ಲಿ, ಮಾತನಾಡಿದ್ದ ವೆಂಕಟೇಶ್, “ಡಿಕೆ ಶಿವಕುಮಾರ್ ಜೆಡಿಎಸ್ ಬಾವುಟ ಹಿಡೀತಾನೆ ಅಂದ್ರೆ ಏನ್ರೀ ಅರ್ಥ?” ಎಂದು ಆಕ್ಷೇಪಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಧ್ವನಿಗೂಡಿಸುತ್ತಾರೆ: “(ದೆಹಲಿಯಿಂದ) ಬರುವಾಗ ಜೆಡಿಎಸ್, ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬಂದರೆ ಏನ್ ಹೇಳೋದು? ನಾನು ನಿನ್ನೆ ತಾನೆ ಗದಗ್​ನಲ್ಲಿ ಹೇಳಿದ್ದೀನಿ, ಅವರ (ಜೆಡಿಎಸ್) ಸಹವಾಸ ಇಲ್ಲ ಅಂತ,” ಎಂದಿದ್ದರು.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಡಿಕೆ ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಾಪ್ತರಾಗಿದ್ದಾರೆ. ಡಿಕೆಶಿ ಜೈಲಿಗೆ ಹೋಗಿ ಬಂದ ಬಳಿಕವೂ ಅವರ ಆಪ್ತತೆ ಮುಂದುವರಿದಿದೆ. ಈ ಬಗ್ಗೆ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದರು.
First published: October 28, 2019, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading