ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು (2000 Currency Notes) ಇನ್ಮುಂದೆ ಮುದ್ರಿಸುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಚಲಾವಣೆಯಲ್ಲಿರುವ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ( 2000 Notes Withdraw) ತಿಳಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ (Siddaramaiah) ಅವರು, 2 ಸಾವಿರ ರೂಪಾಯಿ ನೋಟ್ ಬ್ಯಾನ್ ಮೂಲಕ ನರೇಂದ್ರ ಮೋದಿ (Narendra Modi) ಮತ್ತೊಂದು ನೋಟು ನಿಷೇಧ (Note Ban) ಮಾಡಿದ್ದಾರೆ, ಇದು ದುಃಖಕರವಾಗಿದೆ. ಬಿಜೆಪಿ ಸರ್ಕಾರಕ್ಕೆ (BJP Govt) ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲ. 2016ರಲ್ಲಿ 2,000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದರೆ ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದಾರೆ.
2 ಸಾವಿರ ರೂಪಾಯಿ ನೋಟು ಹಿಂತೆಗೆದುಕೊಳ್ಳುವ ಆರ್ಸಿಐ ನಿರ್ಧಾರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೊಪ್ಪಳದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ದೇವಪ್ಪ, ಪದೇ ಪದೇ ನೋಟ್ ಬ್ಯಾನ್ ಮಾಡೋದು ಜನರಲ್ಲಿ ಗೊಂದಲ ಉಂಟಾಗುತ್ತೆ. 2000 ರೂಪಾಯಿ ನೋಟ್ ಪ್ರಿಂಟ್ ಮಾಡಿರುವುದು ಆರ್ಥಿಕ ಹೊರೆಯಾಗುತ್ತೆ.
ಪದೇ ಪದೇ ನೋಟ್ ಬ್ಯಾನ್ ಮಾಡುವುದು ಸರಿ ಅಲ್ಲ. 7 ವರ್ಷದ ಹಿಂದೆ ನೋಟ್ ಬ್ಯಾನ್ ಮಾಡಿದ್ದರು. 2000 ರೂಪಾಯಿ ನೋಟ್ ಬ್ಯಾನ್ ಮಾಡಿರುವುದು ಜನಸಾಮಾನ್ಯರಿಗೇನು ನಷ್ಟವಾಗುವುದಿಲ್ಲ. ಆದರೆ ಶ್ರೀಮಂತರು ದಾಖಲೆ ಇಲ್ಲದೆ ಇಟ್ಟುಕೊಂಡ ಹಣ ಬದಲಾಯಿಸುವುದು ಆಗೋದಿಲ್ಲ. ಜನಸಾಮಾನ್ಯರ ಬಳಿ ಈಗ 2000 ರೂಪಾಯಿ ನೋಟ್ ಗಳಿಲ್ಲ, ಆದರೂ ಪದೇ ಪದೇ ನೋಟ್ ಮಾಡುವುದು ಸರಿ ಅಲ್ಲ ಎಂದಿದ್ದಾರೆ.
2000 ರೂಪಾಯಿ ನೋಟ್ ಹಿಂಪಡೆದ ಕೇಂದ್ರ ಸರಕಾರ ನಡೆಯಿಂದ ಆರ್ಥಿಕ ಅಭದ್ರತೆ ಕಾಡುತ್ತದೆ. ಈ ಹಿಂದೆ ನೋಟ್ ಬ್ಯಾನ್ ಮಾಡಿದಾಗ ವರ್ಷಾನುಗಟ್ಟಲೆ ಪರದಾಡುವಂತಾಯಿತು. ಈಗ 2000 ರೂಪಾಯಿ ನೋಟ್ ಬ್ಯಾನ್ ಸರಿಯಾದ ಕ್ರಮವಲ್ಲ ಎಂದು ಕೊಪ್ಪಳ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಆಶೋಕಸ್ವಾಮಿ ಹೇರೂರು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ