• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • SiddaraMaiah: ಸಿ ಟಿ ರವಿ ವಿರುದ್ಧ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದ ಆರೋಪ; ದ್ವೇಷ ಬಿಟ್ಟು ರವಿ ಪರ ನಿಂತ ಸಿದ್ದರಾಮಯ್ಯ!

SiddaraMaiah: ಸಿ ಟಿ ರವಿ ವಿರುದ್ಧ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದ ಆರೋಪ; ದ್ವೇಷ ಬಿಟ್ಟು ರವಿ ಪರ ನಿಂತ ಸಿದ್ದರಾಮಯ್ಯ!

ಸಿ.ಟಿ ರವಿ/ ಸಿದ್ದರಾಮಯ್ಯ

ಸಿ.ಟಿ ರವಿ/ ಸಿದ್ದರಾಮಯ್ಯ

ದೇವಸ್ಥಾನಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗದೆ ಇರುವುದು. ಮಾಂಸ ತಿನ್ನೋದು, ಮಾಂಸ ತಿನ್ನದೆ ಇರುವುದು ಅದು ಇಷ್ಯುಗಳೇ ಅಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

 • News18 Kannada
 • 4-MIN READ
 • Last Updated :
 • Gulbarga, India
 • Share this:

ಕಲಬುರಗಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (BJP National General Secretary CT Ravi ) ಮಾಂಸ ತಿಂದು (Non Veg) ದೇವರ ದರ್ಶನ ಮಾಡಿದ್ರಾ ಅನ್ನೋ ಪ್ರಶ್ನೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತ ಫೋಟೋಗಳು (Photo) ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದ್ದು, ಸಿ.ಟಿ ರವಿ ಅವರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿ.ಟಿ ರವಿ ಅವರು, ನನಗೆ ದೇವರಲ್ಲಿ ಶ್ರದ್ಧೆ ಇದೆ. ನಾನು ಮಾಂಸಾಹಾರ ಸೇವನೆ ಮಾಡಿ ದೇಗುಲಕ್ಕೆ (Temple) ಹೋಗಿಲ್ಲ, ಬಾಗಿಲು ಹಾಕಿದ್ದರಿಂದ ರಸ್ತೆ ಮಧ್ಯೆ ನಿಂತು ನಮಸ್ಕಾರ ಹಾಕಿ ಬಂದಿದ್ದೇನೆ. ಸುಮ್ಮನೆ ವಿವಾದ ಮಾಡ್ತಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ವಿವಾದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರು ಪ್ರತಿಕ್ರಿಯೆ ನೀಡಿದ್ದು, ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಜನರಿಗೆ ಗೊತ್ತಾಗಿದೆ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.


ಏನಿದು ವಿವಾದ?


ಫೆಬ್ರವರಿ 19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ ರವಿ ಭೇಟಿ ನೀಡಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ ರವಿ ಬಾಡೂಟ ಸೇವಿಸಿದ್ದರು. ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳು ವೈರಲ್ ಆಗಿತ್ತು.
ಅವರಿಗೆ ಸ್ಪಷ್ಟ ವಿಚಾರದಾರೆ ಇಲ್ಲ!


ಇತ್ತ, ಕಲಬುರಗಿಯಲ್ಲಿ ಮಾಂಸಾಹಾರ ತಿಂದು ಸಿಟಿ ರವಿ ದೇವಸ್ಥಾನಕ್ಕೆ ಹೋಗಿರೋ ವಿವಾದಕ್ಕೆ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗದೆ ಇರುವುದು. ಮಾಂಸ ತಿನ್ನೋದು, ಮಾಂಸ ತಿನ್ನದೆ ಇರುವುದು ಅದು ಇಷ್ಯುಗಳೇ ಅಲ್ಲ. ಅವರಿಗೆ ಸ್ಪಷ್ಟ ವಿಚಾರದಾರೆ ಇಲ್ಲ. ಆದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಜನರಿಗೆ ಗೊತ್ತಾಗಿದೆ ಎಂದು ಹೇಳಿದರು.


ಯಾವುದಾದರೂ ವಿಷಯದಲ್ಲಿ ಟಿವಿಯಲ್ಲಿ ಕಾಣುವ ಹವ್ಯಾಸವಿದೆ


ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ ಅವರು, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿ.ಟಿ ರವಿ ಅವರು ಮಾನಸಿಕ ಅಸ್ವಸ್ಥೆಯನ್ನು ಕಳೆದುಕೊಂಡಿದ್ದಾರೆ. ಇದೀಗ ಅವರ ಮಾತಿಗೆ ನಾವು ಪ್ರಾಮುಖ್ಯತೆ ಕೊಡುವುದಿಲ್ಲ. ದಿನ ಬೆಳಗಾದರೆ ಅವರಿಗೆ ಯಾವುದಾದರೂ ವಿಷಯದಲ್ಲಿ ಟಿವಿಯಲ್ಲಿ ಕಾಣುವ ಹವ್ಯಾಸವಿದೆ. ಅವರು ಯಾರಿಗಾದರೂ ಬೈದು ಇಲ್ಲ ಅವರೇ ಬೈದುಕೊಂಡು ಟಿವಿಯಲ್ಲಿ ಬರಲು ಇಚ್ಚಿಸುತ್ತಾರೆ. ಬಿಜೆಪಿ ಪಕ್ಷ ಅವರ ಪಕ್ಷದ‌ ಮುಖಂಡರನ್ನೇ ಅವಮಾನ ಮಾಡುತ್ತ ಬರುತ್ತಿದೆ ಎಂದು ಆರೋಪಿಸಿದರು.
ಅವರ ಸಂಸೃತಿಯನ್ನು ಎತ್ತಿ ತೋರಿಸುತ್ತಿದೆ


ಮೋದಿ ಅವರ ಗುರುಗಳಾದ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರಿಗೆ ನಿವೃತಿ ಮಾಡಿಸಿದರು. ಮೋದಿ ಅವರ ಗುರು ಪಟೇಲ್ ಅವರನ್ನೇ ಸಿಎಂ‌ ಸ್ಥಾನದಿಂದ ಕೆಳಗಿಳಿಸಲಾಯಿತ್ತು. ಇಲ್ಲಿ ಯಡಿಯೂರಪ್ಪ ಅವರನ್ನು ಸಹ ಸಿಎಂ ಸ್ಥಾನದಿಂದ ಹೀಗೆ ಅವಮಾನ ಮಾಡುತ್ತಿದೆ. ಇದು ಅವರ ಸಂಸೃತಿಯನ್ನು ಎತ್ತಿ ತೋರಿಸುತ್ತಿದೆ ಇಂತಹವರು ಜನರ ಸೇವೆ ಹೇಗೆ ಮಾಡುತ್ತಾರೆ? ಹಿರಿಯರನ್ನು ರಿಟೈಡ್ ಮಾಡುವದೆ ಬಿಜೆಪಿಯ ಕೆಲಸವಾಗಿದೆ. ಇದು ಬಿಜೆಪಿಯ ಸಂಸೃತಿಯಾಗಿದೆ ಎಂದು ಟೀಕೆ ಮಾಡಿದರು.

Published by:Sumanth SN
First published: