ಆಪ್ತರ ಸಭೆಯಲ್ಲಿ ಡಿಕೆ ಶಿವಕುಮಾರ್ ವರ್ತನೆ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ನಿನ್ನೆ ರಾಜ್ಯದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಮತ್ತಿತರರು ಅಸಮಾಧಾನ ತೋರ್ಪಡಿಸಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

news18-kannada
Updated:October 27, 2019, 7:38 PM IST
ಆಪ್ತರ ಸಭೆಯಲ್ಲಿ ಡಿಕೆ ಶಿವಕುಮಾರ್ ವರ್ತನೆ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ
ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಸಭೆ ನಡೆಸಿರುವುದು.
  • Share this:
ಬೆಂಗಳೂರು(ಅ. 27): ಜೈಲಿನಿಂದ ಬಿಡುಗಡೆಯಾಗಿ ನಿನ್ನೆ ರಾಜ್ಯಕ್ಕೆ ಬಂದ ವೇಳೆ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದಕ್ಕೆ ಸಿದ್ದರಾಮಯ್ಯ ಮತ್ತವರ ಆಪ್ತರು ಅಸಮಾಧಾನಪಟ್ಟಿದ್ದಾರೆ. ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಆಪ್ತರ ಜೊತೆ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ಡಿಕೆ ಶಿವಕುಮಾರ್ ಅವರು ಜೆಡಿಎಸ್ ಬಾವುಟ ಹಿಡಿದುಕೊಳ್ಳುವ ಅಗತ್ಯ ಏನಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದು ಈ ವಿಡಿಯೋದಲ್ಲಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್ ಅವರಿಗೆ ನಿನ್ನೆ ರಾಜ್ಯದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಮತ್ತಿತರರು ಅಸಮಾಧಾನ ತೋರ್ಪಡಿಸಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯರಂಥ ಕೋಮುವಾದಿ ಹುಡುಕಲು ಸಾಧ್ಯವಾ?: ಹೆಚ್​ಡಿಕೆ ಆರೋಪ

ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್, ಹುಣಸೂರಿನ ಮಾಜಿ ಶಾಸಕ ಮಂಜುನಾಥ್ ಮೊದಲಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಆಪ್ತರೊಬ್ಬರು ಬಿಜೆಪಿಗೆ ಲಿಂಗಾಯತ ಸಮುದಾಯ ಸ್ವಲ್ಪ ಮುನಿಸಿಕೊಂಡಿದೆ ಎನ್ನುತ್ತಾರೆ. ಈ ಮಾತಿಗೆ ಸಿದ್ದರಾಮಯ್ಯ ಧ್ವನಿಗೂಡಿಸುತ್ತಾರೆ.

“ನೋಡಪ್ಪ, ಲಿಂಗಾಯತರು ಯಡಿಯೂರಪ್ಪ ಬಗ್ಗೆ ಮೊದಲಿನ ಥರ ಇರಲ್ಲ. ಒಕ್ಕಲಿಗರು ಕುಮಾರಸ್ವಾಮಿ ಬಗ್ಗೆ ಮೊದಲಿನ ಥರ ಇರಲ್ಲ” ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಇದನ್ನೂ ಓದಿ: ನಾವೆಲ್ಲಾ ಸೇರಿಯೇ ಬಿಜೆಪಿ ಸರ್ಕಾರ ರಚಿಸಿದ್ದು; ಹಾಗಾಗಿ ನಾವು ಬಿಜೆಪಿ ಸೇರುವುದು ಖಚಿತ: ಎಚ್​ ವಿಶ್ವನಾಥ್

ಈ ವೇಳೆ ಮಾತನಾಡುವ ವೆಂಕಟೇಶ್, “ಇದನ್ನು ಎನ್​ಕ್ಯಾಶ್ ಮಾಡಿಕೊಳ್ಳೋಕೆ ನಮ್ಮವರೇ ತಯಾರಿಲ್ವಲ್ಲ. ಡಿಕೆ ಶಿವಕುಮಾರ್ ಜೆಡಿಎಸ್ ಬಾವುಟ ಹಿಡೀತಾನೆ ಅಂದ್ರೆ ಏನ್ರೀ ಅರ್ಥ?” ಎಂದು ಆಕ್ಷೇಪಿಸುತ್ತಾರೆ.ಇದಕ್ಕೆ ಸಿದ್ದರಾಮಯ್ಯ ಧ್ವನಿಗೂಡಿಸುತ್ತಾರೆ: “(ದೆಹಲಿಯಿಂದ) ಬರುವಾಗ ಜೆಡಿಎಸ್, ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬಂದರೆ ಏನ್ ಹೇಳೋದು? ನಾನು ನಿನ್ನೆ ತಾನೆ ಗದಗ್​ನಲ್ಲಿ ಹೇಳಿದ್ದೀನಿ, ಅವರ (ಜೆಡಿಎಸ್) ಸಹವಾಸ ಇಲ್ಲ ಅಂತ”.

ಇದನ್ನೂ ಓದಿ: ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ಯೋಗ ಬಂದರೆ ಯಾರು ಬೇಕಾದ್ರೂ  ಸಿಎಂ ಆಗಬಹುದು; ಉಮೇಶ್​ ಕತ್ತಿಗೆ ಸಿ.ಟಿ.ರವಿ ತಿರುಗೇಟು

ಈ ಸಭೆಯಲ್ಲಿದ್ದ ಇತರರು ಸಿದ್ದರಾಮಯ್ಯ ಮಾತನ್ನ ಒಪ್ಪಿಕೊಳ್ಳುತ್ತಾರೆ. ಜೆಡಿಎಸ್ ಜೊತೆ ಸಂಬಂಧ ಮುರಿದುಕೊಂಡ ನಿಮ್ಮ ನಿರ್ಧಾರವನ್ನು ಬದಲಿಸಬೇಡಿ ಎಂದು ಪಿರಿಯಾಪಟ್ಟಣ ವೆಂಕಟೇಶ್ ಹೇಳುತ್ತಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಡಿಕೆ ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಾಪ್ತರಾಗಿದ್ದಾರೆ. ಡಿಕೆಶಿ ಜೈಲಿಗೆ ಹೋಗಿ ಬಂದ ಬಳಿಕವೂ ಅವರ ಆಪ್ತತೆ ಮುಂದುವರಿದಿದೆ. ಇಬ್ಬರೂ ಜೊತೆಯಾಗಿ ಜೋಡೆತ್ತುಗಳಂತೆ ನಿಂತು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

(ವರದಿ: ಶ್ರೀನಿವಾಸ ಹಳಕಟ್ಟಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading