• Home
  • »
  • News
  • »
  • state
  • »
  • Karnataka Politics: ಸಿದ್ದರಾಮಯ್ಯ PFI ಉಗ್ರರನ್ನು ಪೋಷಿಸಿ ನೀರೆರೆದ್ರು; ಸುನಿಲ್ ಕುಮಾರ್ ಆರೋಪ

Karnataka Politics: ಸಿದ್ದರಾಮಯ್ಯ PFI ಉಗ್ರರನ್ನು ಪೋಷಿಸಿ ನೀರೆರೆದ್ರು; ಸುನಿಲ್ ಕುಮಾರ್ ಆರೋಪ

ಸಚಿವ ಸುನಿಲ್ ಕುಮಾರ್

ಸಚಿವ ಸುನಿಲ್ ಕುಮಾರ್

ಸಿದ್ದರಾಮಯ್ಯ ಬೀದಿಗೆ ಬಿಟ್ಟ ಮತೀಯ ಶಕ್ತಿಗಳೇ ಈಗ ಭಾರತವನ್ನು 2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಪಣ ತೊಟ್ಟಿದ್ದವು. ಈ ಸಂಚನ್ನು ನಾವು ಮಟ್ಟ ಹಾಕಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  • Share this:

ಇಂದು ಸಚಿವ ಸುನಿಲ್ ಕುಮಾರ್ (Minister Sunil Kumar) ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ (Congress) ಅಧಿಕಾರವಧಿ ವೇಳೆ ಪೊಲೀಸರ ತೀವ್ರ ವಿರೋಧದ ನಡುವೆಯೇ ಪಿಎಫ್​ಐ ಕಾರ್ಯಕರ್ತರ (PFI Activist) ವಿರುದ್ಧ ಪ್ರಕರಣ ರದ್ದುಗೊಳಿಸಲಾಗಿತ್ತು ಎಂದು ಆರೋಪಿಸಿದ್ದಾರೆ. PFI ಸಂಘಟನೆ ಹಾಗೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವುದಕ್ಕೆ ಪೊಲೀಸ್ ಇಲಾಖೆ (Department Of Police) ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿಜಿಪಿ ಅಸಮ್ಮತಿ ವ್ಯಕ್ತಪಡಿಸಿದ್ದರು. ಆದರೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣ ವಾಪಾಸ್ ಪಡೆದಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಶಾಂತಿ- ಸುವ್ಯವಸ್ಥೆ ಕಾಪಾಡುವ ಉದ್ದೇಶವೇ ಇರಲಿಲ್ಲ. ಹೀಗಾಗಿ PFI ಉಗ್ರರನ್ನು ಪೋಷಿಸಿ ನೀರೆರೆದರು. ಇದೇ ವ್ಯಕ್ತಿಗಳಿಂದಾಗಿ ಮುಂದೆ ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಸರಣಿ ಕೊಲೆಯಾಯ್ತು ಎಂದು ಕಿಡಿಕಾರಿದ್ದಾರೆ.


ಸಿದ್ದರಾಮಯ್ಯನವರೇ ನೀವು ರಾಜ್ಯಕ್ಕೆ ಘೋರ ಅನ್ಯಾಯ ಮಾಡಿಬಿಟ್ಟಿರಿ. ಇದನ್ನು ರಾಜ್ಯದ ಜನತೆ ಈ ಶತಮಾನದಲ್ಲಿ ಮರೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬೀದಿಗೆ ಬಿಟ್ಟ ಮತೀಯ ಶಕ್ತಿಗಳೇ ಈಗ ಭಾರತವನ್ನು  2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಪಣ ತೊಟ್ಟಿದ್ದವು. ಈ ಸಂಚನ್ನು ನಾವು ಮಟ್ಟ ಹಾಕಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.


Former CM Siddaramaiah questioned Energy minister V sunil kumar mrq
ಸಿದ್ದರಾಮಯ್ಯ


ಕೆಂಪಣ್ಣ ವಿರುದ್ಧ ಭೈರತಿ ಬಸವರಾಜ್ ಕಿಡಿ


ಭ್ರಷ್ಟಾಚಾರ ಆರೋಪ ಮಾಡುವ ಗುತ್ತಿಗೆದಾರರಿಗೆ ಲೈಸೆನ್ಸ್ ಇಲ್ಲ. ಕೆಂಪಣ್ಣ ಯಾವುದೇ ಲೈಸನ್ಸ್ ಹೊಂದಿಲ್ಲ. ಕೆಂಪಣ್ಣ ಯಾವುದೇ ಗುತ್ತಿಗೆ ತೆಗೆದುಕೊಳ್ಳುತ್ತಿಲ್ಲ. ಅವರನ್ನು  ಸಂಘದ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಯಾವುದಾದರೂ ದಾಖಲೆ ಇದ್ದರೆ ಲೋಕಾಯುಕ್ತ ಅಥವಾ ಬೇರೆ ಬೇರೆ ತನಿಖಾ ಸಂಸ್ಥೆಗಳಿಗೆ ಕೊಟ್ಟು ತನಿಖೆ ಮಾಡಿಸಲಿ. ಈಗಾಗಲೇ ಸಚಿವ ಮುನಿರತ್ನ ಅವರು ಅವರ ವಿರುದ್ಧ ದಾವೆ ಹೂಡಿದ್ದಾರೆ. ಕೆಲವೇ ದಿನದಲ್ಲಿ ಸತ್ಯಾಂಶ ಹೊರಗಡೆ ಬರುತ್ತದೆ ಎಂದು ಸಚಿವ ಭೈರತಿ ಬಸವರಾಜ್ ತುಮಕೂರಿನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ:  Udupi: ಸಾವರ್ಕರ್ ಪುತ್ಥಳಿ ಸ್ಥಾಪನೆ ವಿವಾದ; ಬಿಜೆಪಿ ನಾಯಕರ ನಡುವೆ ಕೋಲ್ಡ್ ವಾರ್?


ಹಿಂದುಳಿದ ವರ್ಗದ ಮುಖ್ಯಮಂತ್ರಿ


ಈಶ್ವರಪ್ಪ ಅವರಿಗೆ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ಕೆಲವರು ಪಿತೂರಿ ಮಾಡಿ ಅವರ ವಿರುದ್ಧ ದೂರು ನೀಡಿದ್ದರು. ಅನೇಕ ಕಾಂಗ್ರೆಸ್ ನಾಯಕರ ಮೇಲೂ ತನಿಖಾ ಸಂಸ್ಥೆಗಳು ಕ್ಲೀನ್ ಚಿಟ್ ಕೊಟ್ಟಿದೆ.


ಅದನ್ನೇ ಇವರು ನಿರಪರಾಧಿ ಅಂತ ಹೇಳಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಕೂಡ ಹೆರಾಲ್ಡ್ ಹಗರಣದಲ್ಲಿ ಬೇಲ್ ಮೇಲೆ ಹೊರಗಡೆ ಇದ್ದಾರೆ. ಬಿಜೆಪಿಯಲ್ಲಿ ಕೂಡ ಹಿಂದುಳಿದ ವರ್ಗದ ಮುಖ್ಯಮಂತ್ರಿ ಆಗುವಂತ ಕ್ಯಾಂಡಿಡೇಟು ನಮ್ಮ ಪಕ್ಷದಲ್ಲಿದ್ದಾರೆ ಎಂದರು.


ಇದನ್ನೂ ಓದಿ:  Belagavi Politics: ಬೆಳಗಾವಿಯಲ್ಲಿ ನವರಾತ್ರಿ ಸಂಭ್ರಮ; ದಾಂಡಿಯಾ ಹೆಸರಿನಲ್ಲಿ ಇಬ್ಬರು ನಾಯಕರ ಪಾಲಿಟಿಕ್ಸ್!


ಬಿಜೆಪಿ ತೊರೆಯಲ್ಲ


ಆದರೆ ಯಾರಿಗೆ ಮಾಡಬೇಕು ಅನ್ನೋದು ಪಕ್ಷ ಅಧಿಕಾರಕ್ಕೆ ಬಂದ ನಂತರ ತೀರ್ಮಾನ ಆಗುತ್ತೆ. ಯಡಿಯೂರಪ್ಪನವರು ಮತ್ತೆ ಸಿಎಂ ಆಗ್ತಾರೆ ಅನ್ನೋದನ್ನ ನಾನು ಹೇಳಲು  ಸಾಧ್ಯವಾಗಲ್ಲ. ನಾನು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಭಾರತೀಯ ಜನತಾ ಪಾರ್ಟಿಯ ಚಿಹ್ನೆಯಲ್ಲಿ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದ ಪಕ್ಷ ತೊರೆಯುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು.


ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಲಾಭ


ಸಿದ್ದರಾಮಯ್ಯನವರಿಗೆ ಬಿಜೆಪಿ ಕಂಡರೆ ಭಯ ಇದೆ ಹಾಗಾಗಿ ಅವರು ಆ ರೀತಿ ಮಾತನಾಡುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆಗ್ತಿದೆ. ಬಿಜೆಪಿಗೆ ಭದ್ರಬುನಾದಿ ಇದನ್ನು ಕಂಡು ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಓಡಾಟ ಮಾಡುತ್ತಾರೋ ಅಲ್ಲಿ ಬಿಜೆಪಿಗೆ ಒಳ್ಳೆದಾಗುತ್ತದೆ. ಭಾರತ್ ಜೋಡೋದಂದ ನಮ್ಮ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

Published by:Mahmadrafik K
First published: