ಎಸ್‌ಸಿ/ಎಸ್‌ಟಿ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಅಸಮಾಧಾನ

ರಾಜ್ಯ ಬಿಜೆಪಿ ಸರ್ಕಾರ ದಾರಿದ್ರ್ಯ ಸರ್ಕಾರ. ಶಿಕ್ಷಕರ ವೇತನ ನೀಡಿಲ್ಲ. ಶಾಸಕರ ಸಂಬಳ ನೀಡಿಲ್ಲ. ಖಜಾನೆ ಖಾಲಿಯಾಗಿದೆ. ಅದಕ್ಕೆ ನಾನು ದಾರಿದ್ರ್ಯ ಸರ್ಕಾರ ಅಂತಾ ಹೇಳಿದ್ದೇನೆ.  ಯಡಿಯೂರಪ್ಪ ದರಿದ್ರ ಸರ್ಕಾರದ ಮುಖ್ಯಮಂತ್ರಿ. ಬರೀ ಯಡಿಯೂರಪ್ಪ ಬುರಡೆ ಹೊಡ್ಕೊಂಡು ಓಡಾಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

 • Share this:
  ಬೆಂಗಳೂರು: ಎಸ್​ಸಿ / ಎಸ್​ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ 2018 ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಆಘಾತ ನೀಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಡ್ತಿ ವಿಚಾರದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಹಾಗೂ ಒಬಿಸಿ ವರ್ಗಗಳ ಮೂಲಭೂತ ಹಕ್ಕಲ್ಲ ಎಂದಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ.  ಶೇ.15, ಶೇ.3 ಮೀಸಲಾತಿ ಇದೆ. ಇದನ್ನು ಬಡ್ತಿ ನೀಡುವ ಮೂಲಕ ಸರಿ ಮಾಡಬೇಕು ಅಂತಿದ್ದೆ. ಆದರೆ ಇದೇ ಮೂಲಭೂತ ಹಕ್ಕಲ್ಲ ಅಂದರೆ ಹೇಗೆ?  ಸಮಾಜದಲ್ಲಿರೋ ರಾಜಕೀಯ, ಸಾಮಾಜಿಕ, ಆರ್ಥಿಕ ತಾರತಮ್ಯ ಸರಿಪಡಿಸೋದು ಹೇಗೆ?  ಅಮೆರಿಕದಲ್ಲಿ ಕಪ್ಪು ವರ್ಣೀಯರಿಗೆ ವಿಷೇಶ ಮೀಸಲಾತಿ ಇದೆ. ಅದನ್ನೇ ನೀವು ಕಿತ್ತು ಹಾಕಿದರೆ ಅದು ಮೂಲಭೂತ ಆಶಯಗಳಿಗೆ ಧಕ್ಕೆ ಬಂದ ಹಾಗೆ ಎಂದು ಅಸಮಾಧಾನ ಹೊರಹಾಕಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೀರ್ಪನ್ನು ಜಾರಿ ಮಾಡಿಬಿಟ್ಟೆರೇ ಹೇಗೆ? ಯೋಗಿ ಆದಿತ್ಯನಾಥ ಜಾರಿ ಮಾಡಿಬಿಟ್ಟರೆ, ತೂಕಡಿಸುವನಿಗೆ ಹಾಸಿಗೆ ಹಾಸಿಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.

  ಉತ್ತರಖಂಡದ ವಕೀಲರು ಸೂಕ್ತವಾಗಿ ವಾದ ಮಂಡಿಸಿಲ್ಲ ಅನ್ನಿಸುತ್ತೆ. ಇದು ಬಿಜೆಪಿಯ ಹುನ್ನಾರ ಇರಬಹುದು. ಬಿಜೆಪಿ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಸಾರ್ವಜನಿಕ ಸಂಸ್ಥೆಗಳು ಖಾಸಗೀಕರಣಗೊಂಡರೆ ಮೀಸಲಾತಿ ಹೋಗಿಬಿಡುತ್ತೆ. ಅದಕ್ಕಾಗಿಯೇ ನಾನು ಹೇಳ್ತಿರೋದು ಇದು ಬಿಜೆಪಿಯ ಹುನ್ನಾರ.  ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಇದು ಸಂವಿಧಾನಾತ್ಮಕ ವಿಚಾರವಾದ್ದರಿಂದ ಸಂವಿಧಾನ ಪೀಠಕ್ಕೆ ಹೋಗಬೇಕು. ಕೇಂದ್ರ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ಕಾಳಜಿ ಇದ್ದರೆ, ದಲಿತ, ಹಿಂದುಳಿದವರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಂವಿಧಾನ ಪೀಠದ ಮೊರೆ ಹೋಗಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಪ್ರಧಾನಿಗಳು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸೋದು ಒಳ್ಳೆಯದು. ಬಿಜೆಪಿಯವರಿಗೆ ಈ ತಾರತಮ್ಯ ಹೀಗೆ ಇರಬೇಕು ಅನ್ನೋ ಭಾವನೆ. ದೊಡ್ಡ ಮೀನು, ಚಿಕ್ಕ ಮೀನು ಇದ್ದರೆ ಏನಾಗುತ್ತದೆ. ದೊಡ್ಡ ಮೀನು, ಚಿಕ್ಕ ಮೀನನ್ನು ತಿಂದು ಬಿಡುತ್ತದೆ.  ಮೂಲಭೂತ ಹಕ್ಕನ್ನು ರಕ್ಷಣೆ ಮಾಡೋದು ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದರು.

  ಇದನ್ನು ಓದಿ: ಎಸ್‌ಸಿ / ಎಸ್‌ಟಿ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

  ರಾಜ್ಯ ಬಿಜೆಪಿ ಸರ್ಕಾರ ದಾರಿದ್ರ್ಯ ಸರ್ಕಾರ. ಶಿಕ್ಷಕರ ವೇತನ ನೀಡಿಲ್ಲ. ಶಾಸಕರ ಸಂಬಳ ನೀಡಿಲ್ಲ. ಖಜಾನೆ ಖಾಲಿಯಾಗಿದೆ. ಅದಕ್ಕೆ ನಾನು ದಾರಿದ್ರ್ಯ ಸರ್ಕಾರ ಅಂತಾ ಹೇಳಿದ್ದೇನೆ.  ಯಡಿಯೂರಪ್ಪ ದರಿದ್ರ ಸರ್ಕಾರದ ಮುಖ್ಯಮಂತ್ರಿ. ಬರೀ ಯಡಿಯೂರಪ್ಪ ಬುರಡೆ ಹೊಡ್ಕೊಂಡು ಓಡಾಡ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಯಡಿಯೂರಪ್ಪ ದರಿದ್ರ ಸರ್ಕಾರ ಅಂತಾ ಹೇಳಿದ್ರಾ? ಅಂದು ವಿಪಕ್ಷ ನಾಯಕರಾಗಿದ್ದ ಜಗದೀಶ್​ ಶೆಟ್ಟರ್ ಹೇಳಿದ್ರಾ?  ಯಡಿಯೂರಪ್ಪ ಎದೆ ಮೇಲೆ ಕೈ ಇಟ್ಕೊಂಡು, ಉಪಚುನಾವಣೆಯಲ್ಲಿ ಖರ್ಚು ಮಾಡಿದ ಹಣ ಎಲ್ಲಿಂದ ಬಂತು ಅಂತಾ ಹೇಳಲಿ. ನಮ್ಮ ಸರ್ಕಾರದ ಲ್ಲಿ ಎಲ್ಲವೂ ಕಪ್ಪು ಬಿಳುಪಾಗಿತ್ತು. ನೆರೆ ಪೀಡಿತ ಜನರಿಗೆ ಒಂದು ರೂಪಾಯಿಯಾದರೂ ಕೊಟ್ಟಿದ್ದಾರಾ?  25 ಸಂಸದರು ಒಮ್ಮೆಯದರೂ ಪ್ರಧಾನಿ ಅಥವಾ ಅಮಿತ್ ಶಾ ಭೇಟಿಯಾಗಿದ್ದಾರಾ ಎಂಬುದನ್ನು ಹೇಳಲಿ. ಇವರು ಮಂತ್ರಿ ಆಗ್ಬೇಕು ಅಂತಾ ಅಲ್ಲಿಗೆ ಹೋದವರಲ್ಲಾ.  ಇವರನ್ನು ಕಟ್ಟಿಕೊಂಡು ಯಡಿಯೂರಪ್ಪ ಸುಭಿಕ್ಷ ಸರ್ಕಾರ ಕೊಡ್ತಾರಾ? ಬಿ ಸಿ ಪಾಟೀಲ ಎಲ್ಲಿ ಲಾ ಓದಿದ್ದಾನೋ ಗೊತ್ತಿಲ್ಲ. ನನ್ನ ಬಗ್ಗೆ ಏನೋ ಟೀಕೆ ಮಾಡಿದ್ದಾನೆ. ಒಳ್ಳೆಯದಾಗಲಿ ಅವರಿಗೆಲ್ಲಾ ಎಂದು ನೂತನ ಸಚಿವರಿಗೆ ಸಿದ್ದರಾಮಯ್ಯ ಶುಭ ಹಾರೈಸಿದರು.
  First published: